ಪುಟ:ಅರಮನೆ.pdf/೬೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೫ರ್೯ ಹುಷಾರಿಕೆಯಿಂದಲೆ ಮಾತಾಡುತಲಿದ್ದರು, ಬಲು ಹುಷಾರಿಕೆಯಿಂದಲೇ ಕೇಳುತಲಿದ್ದರು.. ಬಲು ಹುಷಾರಿಕೆಯಿಂದಲೆ ತಮ ವಂದೊಂದೆ ಹೆಜ್ಜೆಯ ಯಿಡುತಲಿದ್ದರು. ಕಣ್ಣುಂಬ ನೋಡಲಕೊಂದು ನಮೂನಿ ಹೆದರಿಕೆ.. ಕೇಳಲಕೊಂದು ನಮೂನಿ ಹೆದರಿಕೆ.. ನಡೆಯಲಕೊಂದು ನಮೂನಿ ಹೆದರಿಕೆ.. ಗಲಗಲಾಂತ ಮಾತಾಡಲಕೊಂದು ನಮೂನಿ ಹೆದರಿಕೆ, ಮುಟ್ಟಲಕೊಂದು ನಮೂನಿ ಹೆದರಿಕೆ.. ಕುಂಡಲಕೊಂದು ನಮೂನಿ ಹೆದರಿಕೆ.. ಮಲಗಲಕೊಂದು ನಮೂನಿ ಹೆದರಿಕೆ.. ಕಣಸು ಕಾಣಲಕೊಂದು ನಮೂನಿ ಹೆದರಿಕೆ.. ಯಚ್ಚರಾಗಲಕೊಂದು ನಮೂನಿ ಹೆದರಿಕೆ.. ಅನುಭವ ಹಂಚಿಕೊಳ್ಳಲಕೊಂದು ನಮೂನಿ ಹೆದರಿಕೆ.. ಬಾಯಿ ಮುಕ್ಕಳಿಸಲಕ, ಮುಕ್ಕಳಿಸಿದ ನೀರನ್ನು ಪೀಚಕ್ಕಂತ ವುಗುಳಲಕ, ಮುಖ, ಕಮ್ಮ ಕಾಯ್ಕ ತೊಳಕೊಳ್ಳಲಕ, ಮಯ್ದೆ ಯರಕಂಬಲಕ, ಬಟ್ಟೆ ಬರೆ ವುಟ್ಟು ಕೊಂಬಲಕ, ಹೆಂಡತಿಯನ್ನು ಹೆಂಡತೀss ಯಂದಂಬಲಕ, ಮಕ್ಕಳನ್ನು ಅವರವರ ಹೆಸರುಗುಂಟ ಕೂಗಿ ಕರೆಯಲಕ, ವು೦ಬಲಕ, ತಿಂಬಲಕ, ಜೀಗ್ಲ ಮಾಡಿಕೊಳ್ಳಲಕ, ಜೀರವಾದುದನ್ನು ಯಿಸಲ್ಪನೆ ಮಾಡಿಕೊಳ್ಳಲಕ, ಮೆಲ ಮೆಲ್ಲಗ ನಡೆದಾಡಲಕ, ಜೋರು ಜೋರಾಗಿ ನಡೆದಾಡಲಕ..ಯಿಂಥಪ್ಪ ಹೆದರಿಕೆಗಳನ್ನು ಲೆಕ್ಕಹಾಕಿದರ ಮುವ್ವತ್ತಾರು ಸಂಖ್ಯೆಯ ಕುಪ್ಪೆಯಾಗುತ್ತವೆ.. ಸಿವಸಂಕರ ಮಾದೇವಾss.. ಭಯವು ಕುದುರೆಡವಿನಿಂದ ಜುಳು ಜುಳು ಹರಿಯಲಾರಂಭಿಸಿ ಕ್ರಮ ಕ್ರಮೇಣ ಸುತ್ತನ್ನಾಕಡೇಕ ಯಾಪನಗೊಂಡಿತು. ಬೆಕ್ಕುಗಳು ಮಿಲಿಚೆನ್ನಗಳನ್ನು ಕಂಡು ಹೆದರುವಂತಾದವು, ಹಾವುಗಳು ಕಪ್ಪನ್ನಗಳನ್ನು ಕಂಡು ಹೆದರುವಂತಾದವು. ಕ್ರಿಮಿಕೀಟಗಳನು ಕಂಡು ಕಪ್ಪೆಗಳು ಹೆದರುವಂತಾದವು, ಪಡೆಯುವ ಕಯ್ಕೆಗಳನ್ನು ಕಂಡು ನೀಡುವ ಕಯ್ಯಗಳು ಹೆದರುವಂತಾದವು.. ಸಾಲ ಪಡೆದವರನು ಕಂಡು ಸಾಲ ಕೊಟ್ಟವರು ಹೆದರುವಂತಾದರು. ಬಡವರನು ಕಂಡು ಶ್ರೀಮಂತರು ಹೆದರುವಂತಾದರು.. ಪ್ರಜೆಗಳನ್ನು ಕಂಡು ರಾಜರು ಹೆದರುವಂತಾದರು. ಹೆತ್ತ ತಾಯಿಯ ಮೊಲೆ ಜಮಡಲಕ ಕೂಸುಗಳು ಹೆದರುತ್ತಿದ್ದುದೇನಲ್ಲಿ? ತಮ್ಮ ತಮ್ಮ ಕೂಸು ಕಂದಮ್ಮಗಳನ ನೋಡಿ ತಾಯಂದಿರು ಹೆದರುತ್ತಿದ್ದು ದೇನಲ್ಲಿ? ತಮ್ಮ ತಮ್ಮ ಹೆಂಡಂದಿರನ ನೋಡಿ ಗಂಡಂದಿರು ಹೆದರುತ್ತಿದ್ದೇನಲ್ಲಿ? ಬಾನ ಕಂಡು ಹಸದವರು ಹೆದರುತ್ತಿದ್ದೇನಲ್ಲಿ ಆಕಾಸವನ್ನು ನೋಡಿ ಭೂಮಿ ಹೆದರುತ್ತಿದ್ದುದೇನಲ್ಲಿ? ಮಣ್ಣಕಂಡು ಬೀಜವೂ, ಬೀಜಗಳ