ಪುಟ:ಅರಮನೆ.pdf/೭೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೭೧೧ ತಮ್ಮ ಯಾಗ್ಯತಾನುಸಾರ ಮುದೇರನ್ನು ಬರಮಾಡಿಕೊಂಡು ಕೂಡ್ರಲು ನೆರಳನ್ನೂ ತಿಂಬಲು ಬಾನವನ್ನು ಕುಡಿಯಲು ನೀರು ನಿಡಿಯನ್ನೂ ವದಗಿಸಿ ಕುತಕ್ರುತ್ಯ ಭಾವನೆಯನ್ನು ಅನುಭವಿಸುತಲಿದ್ದುದು ಯೇಸು ಕಾಲದಿಂದಲೋ? ಯಿಹಲೋಕ ವ್ಯಾಪಾರ ತ್ಯಜಿಸಿದವರ ಶವಸಮುಸ್ಕಾರವನ್ನು ತ್ರಿಕರಣ ಪೂರೈಕವಾಗಿ ಮಾಡುತಲಿದ್ದುದು ಯೇಸು ಕಾಲದಿಂದಲೋ? ಯಿದೆಲ್ಲ ವಂದಿವಸದ್ದಲ್ಲ... ಎರಡು ದಿವಸದಲ್ಲ... ದಿನಾಲು ಸಾವವರಿಗೆ ಆಳುವವರು ಯಾರು ಯಂಬುವ ಗಾದೆ ಮಾತುಂಟು. ತಮ್ಮ ಕುದುರೆಡವೆಂದರೆ ಬರೀ ಸಾಂಯುವವರಿಗಾ... ಬದುಕ ಬೇಕೆಂಬುವವರಿಗಲ್ಲವಾ, ಅಲವುಕಿಕವೂ, ಅನುಭಾವಮೂಆದ ಸಾಯುವ ಕ್ರಿಯೆಯು ತಮಗೆಲ್ಲ ಸಾಂಕ್ರಾಮಿಕವಾಗಿ ಹಬ್ಬಿದರೇನು ಗತಿ ಸಿವನೇ? ತಮ್ಮ ಗಂಡಂದಿರು, ತಮ್ಮ ಹೆಂಡಂದಿರು, ತಮ್ಮ ಮಕ್ಕಳು ಯಿದ್ದಕ್ಕಿದ್ದಂತೆ ವಯಾಗ್ಯ ತಾಳಿದರೇನು ಗತಿ? ನಾಳೆ ಸಾವವರು ಯಿಂದ್ಯಾಕೆ ಸಾಯಬಾರದೆಂದು ನಿರರಿಸಿದರೇನು ಗತಿ ಸಿವನೇ? ಯಂದು ಮುಂತಾಗಿ ಯಿಧಯಿಧದ ಆಲೋಚನೆ ಮಾಡೂತ ಸದರಿ ಪಟ್ಟಣದ ಮೂಲ ನಿವಾಸಿಗಳು ಮುದುಕರನ್ನಲ್ಲಲ್ಲಿ ಅಡ್ಡಡ್ಡಲಾಗಿ ತರುಬಿ ನೀವು ನಿಮ್ಮ ನಿಮ್ಮ ಮೂರುಗಳನ್ನೇ ಕುದುರೆಡವೆಂದೇ ಭಾವಿಸಿ ಸಾವಬೌದಿತ್ತಲ್ಲಾ.... ಯಿಲ್ಲೀದು ಅದು ಮಣ್ಣು ವಂದೇ ಅಲ್ಲವಾ... ಯಲ್ಲಾರಿಗೂ ಯಿರುವುದೊಂದೇ ಭೂಮಿ ಅಲ್ಲವಾ? ಯಂದು ಕೇಳಲಾರಂಭಿಸಿದ್ದುದಕ್ಕೆ ಯೇಸು ಕಾಲವಾಗಿತ್ತೋ.. ಯಿದೊಂದೇ ಅಲ್ಲದೆ, ಅದೊಂದೇ ಅಲ್ಲದೆ ಗರುಡ ಪುರಾಣವಾಚನ ಪ್ರವಚನ ಮಾಡುತ್ತ ಮರಣೋತ್ತರ ಪ್ರಾಪ್ತವಾಗುವ ನರಕಲೋಕದ ಬಗ್ಗೆ ಭಯಭೀತಿ ಹುಟ್ಟಿಸುತ್ತ ಶ್ರವಣಿಕರನ್ನು ಅಸಹಾಯಕರನ್ನಾಗಿ ಮಾಡಿ ಅವರ ಸರೀರಗಳ ಮೂಲೆ ಮುರುಕಟ್ಟಿನಲ್ಲಿರುತಲಿದ್ದ ಆಪದ್ಧನವನ್ನು ನಗು ಮೊಗದಿಂದಲೇ ವಸೂಲು ಮಾಡಿ ಬದುಕತಲಿದ್ದ ಪರಾವಲಂಬಿಗಳೂ ಸದರಿ ಪಟ್ಟದೊಳಗಿದ್ದುದು 0ಸು ಕಾಲದಿಂದ ಲೆ.. ಯಿವೆಲ್ಲದರ ಜೊತೆಗೆ ಅಪಕರುಮಯಿದ್ಯಾಪಾರಂಗತರಿಂದಲೂ, ನುರಿತ ಸಮಾಧಿ ವಾಸ್ತುಶಿಲ್ಪ ಪಾರಂಗತರಿಂದಲೂ, ಲಭ್ಯಲಭ ಅತ್ತು ಬಾಯಿ ಬಡಿದುಕೊಳ್ಳುವವರಿಂದಲೂ ಸದರಿಪಟ್ಟಣವು ಜಗಮಗಿಸುತಲಿತ್ತು ಯಂಬಲ್ಲಿಗೆ ಸಿವಸಂಕರ ಮಾದೇವಾ.... ಜಂಬೂ ದ್ವೀಪಕಲ್ಪದ ಥೆಲಿ ಮ್ಯಾಲೆ ಕುಂತಳ ಸೀಮೆ, ಕುಂತಳ ಸೀಮೆಯ