ಪುಟ:ಅರಮನೆ.pdf/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಆಕಾಸದ ಕರಿಗಂಬಳಿ ಮಾಲ ಕಾಳು ಕಡಿ ವಣಹಾಕಿದಂಗಿದ್ದ ಚುಕ್ಕಿ ನಕ್ಷತ್ರಗಳು ಬಿದ್ದವು. ಅವುಗಳನು ಮಾಂಯಾದ ಪಕ್ಷಿಗಳು ಬಂದು ಗುಳುಂ ಗುಳುಂ ಅಂತ ನುಂಗಿಯಾವು ಯಂದು ಚಂದ್ರಾಮ ತನ ಕಯ್ಯೋಳಗ ಬೆಳದಿಂಗಳ ಬಡಿಗೆ ಹಿಡಕೊಂಡು ಕಾಯಕಂತ ಯಿದ್ದನು. ಆಕೆಯ ದುಕ್ಕ ಕಂಡು ಮರುಗದೆಯಿರಲಿಲ್ಲ ಚಂದ್ರಾಮ. ಆಕಾಸದ ಚುಕ್ಕಿಗಳಿಗೂ ದುಕ್ಕ ತಡಕೊಳ್ಳಲಾಗುತ್ತಿಲ್ಲ.. ಅದೂಮಿಣಕೂ ಮಿಣಕೂ ಅಂತ ದುಕ್ಕ ಮಾಡುತಲಿದ್ದವು. ಅವುಗಳ ಪಯ್ಕೆ ಒಂದು ದಂಡೆಗೆ ವಡತಿಯಾಗಿದ್ದ ಸಿವಸರಣೆ ಚನ್ನವ್ವ ತಾನೆಷ್ಟಿದ್ದರೂ ವಂದಾನೊಂದು ಕಾಲದಲ್ಲಿ ಕಾಳಿಂಗರಾಯನ ಧರುಮ ಪತ್ನಿಯಾಗಿದ್ದಾರೆ, ಪಡಬಾರದ ಕಷ್ಟ ನಷ್ಟ ಅನುಭವಿಸಿ ಬದುಕನು ತೇದಿರುವಾಕಿ, ಪುಣ್ಯದ ಫಲವಾಗಿ ತಾನು ಚುಕ್ಕಿಯಾಗಿ ಆಕಾಸಕ್ಕೆ ಸೋಭೆ ತಂದುಥಾಕಿ. ಮೂರು ಗಾವುದ ವುದ್ದ ತನ್ನ ಕಥೆಯನ್ನು ಹಾಡು ಕಟ್ಟಿ ಹಾಡುತ ಅಜರಾಮಗೊಳಿಸಿದಂಥಾಕಿಯಾದ ಜಗಲೂರ ಅಂದರ ಆಕೆಗೆ ಯಷ್ಟೋ ಕಕ್ಕುಲಾತಿ. ಯಾವಾಕಿ ನೂರು ಕಾಲ ಸುಖವಾಗಿರಬೇಕಂತ ತಾನು ಅನುಗಾಲ ಬಯಸುತ್ತಿದ್ದಳೋ ಅಂಥಾಕೆ ಕುಂತಲ್ಲಿ ವನವಾಸ, ನಿಂತಲ್ಲಿ ಅಗ್ನಾತವಾಸ ಅನುಭೋಸುತ್ತಿರುವುದನ್ನು ನೋಡುತ... ಅಯ್ಯೋ, ಯಂಥ ಸಾದ್ವಿಗೆ ಯಂಥ ಗತಿ ವದಗಿರುವದಲ್ಲಾ ಯಂದು ಮರುಗುತ ತಾನು ಪಡಬಾರದ ಸಂಕಟ ಪಡುತಲಿದ್ದಳು. ತಾನು ಹೆಂಗಾದರೂ ಮಾಡಿ ಆಕೆಯ ಸಂಕಟವನ್ನು ಪರಿಹಾರ ಮಾಡಬೇಕೆಂದು ನಿರರಿಸಿದಳು. ಮಡಗಯ್ಲಿ ಬೆಳಕಿನ ಬೆತ್ತವ ಹಿಡಿದು, ಬಲಗಯ್ಲಿ ಜೋಳಿಗೆ ಹಿಡಿದು ಪುಣ್ಯದ ಬಿಕ್ಷೆ ಹಾಕಿಸಿಕೊಳ್ಳುತ ಚುಕ್ಕಿಯಿಂದ ಚುಕ್ಕಿಗೆ ಅಡ್ಡಾಡುತಲಿದ್ದ ಆಕೆಯು ಪುರನರನು, ಗರಧರನು ಆಗಿದ್ದ ಪರಸಿವನಲ್ಲಿಗೆ ಹೋಗಿ ಕಯ್ಯ ಮುಕ್ಕಂಡು ನಿಂತಳು. ಯೇಟೋ ಹೊತ್ತಾದ ಮ್ಯಾಲ ನೀಲಕಂಠನು ಕಣ್ಣು ತೆರೆದು ನೋಡಿ ಯಾಕ ತಾಯಿ ಮುಖ ಮಾರೀನ ಸಪ್ಪಗೆ ಮಾಡಿಕಂಡಿದ್ದೀಯಾ?” ಯಂದು ಯಿಚಾರಿಸಿದನು. ಅದಕಿದ್ದು ಸರಣೆಯು “ಯೇನಪ್ಪಾ ಪರಮೇಸುರss.. ವಪ್ಪ ಮೋರಣದ ವುಪ್ಪರಿಗೆ ಮ್ಯಾಲ ಕುಂತಿರೋ ನಿನಗ ಭೂಲೋಕದಲ್ಲಿ ನರಮನುಶೋರು ಮಾಡುತ್ತಿರೋ ದುಕ್ಕ ಕೇಳಿಸದೇನು ತಂದೆಯೇ?” ಯಂದು ಕೇಳಿದ್ದಕ್ಕೆ ಭವಭಯಹರನು “ಯಾಕ ಕೇಳಿಸುವದಿಲ್ಲವ್ವಾ.. ಕೇಳಿಸತಯ್ಕೆ.. ನನ್ನ ಗಮನಕ್ಕೆ ಬಾರದಿರೋದು ಯಾರಿದ್ದಾರಲ್ವಾ?” ಯಂದು ಆಗ್ಗೆ ಭೂರಿ ಭೋಜನ ವುಂಡು, ಯಂಜಲಗಯ್ಯ ತೊಳಕೊಂಡು ತ್ಯಾವವನ್ನು