ಪುಟ:ಅರಮನೆ.pdf/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ರ್೪ ಅದಾಳ.. ಆಕೆ ಬಿಡುತಿರೋ ವಂದೊಂದುಸುರು ನನ್ನೆದೆಗೆ ಬಡೀತಯ್ಕೆ.. ಆಕೆ ಮಾಡುತಿರೋ ದುಕ್ಕ ನನ್ನ ಕಿವಿಗೆ ಅಟೇತಯ್ಕೆ.. ಆದರ ಯೇನು ಮಾಡಲಾ.. ಅದು ಆಕೆಯ ದೂರುವಾನ್ವಿತ ಕರುಮ ಅಯ್ಕೆ, ಆಕೆಗೆ, ಆಕೆಯಂಥವರಿಗೆ ಪಾಠ ಕಲಸಲಕೆಂದೇ ಆದಿಸಗುತಿಯು ಭೂತಪ್ರೇತಾದಿ ಗಣಗಳೊಂದಿಗೆ ಆಕೆಯ ಗಂಡನಾದ ಮೋಬಯ್ಯನ ಸರೀರದೊಳಗ ವಸ್ತಿ ಮಾಡಿದ್ದಾಳಂತೆ.. ಜಮಾ ಬಂದಿಕಾರೈವ ಸುರುವು ಮಾಡುತಾಳಂತೆ.. ಅಲ್ಲೀತನಕ ಆಕೆ ದುಕ್ಕ ಮಾಡಲಕ ಬೇಕು.. ತಪ್ಪಿದ್ದಲ್ಲ...” ಯಂದು ಯಿವರಿಸಿದನು. ಅದಕಿದ್ದು ಸರಣೆ “ಆದಿಸುತಿ ಅಂದರ ನಿನಗ ಖಾಸಾ ಹೆಂಡತಿ ಆಗಬೇಕಲ್ಲಪ್ಪಾ.. ಖುದ್ದಾಗಿ ನೀನೇ ಆಕೆಗೆ ಬುದ್ದಿ ಹೇಳಬಾರದೇನು?” ಯಂದು ಹೇಳಿದ್ದಕ್ಕೆ ಸಿವನು “ಅದು ಆಗದ ಮಾತವ್ವಾ.. ಆಕೆ ಮಾ ಕೋಪಿಷ« ಅದಾಳ. ಆಕೆ ಯದುರು ನಾನೆಷ್ಟರವನು?” ಯಂದು ತನ್ನ ಅಸಹಾಯಕತೆಯನ್ನು ತೋಡಿಕೊಂಡನು.. “ಸರೆ ಬಿಡಪ್ಪ” ಯಂದಲ್ಲಿಂದ ವಾಪಸಾದ.. - ಚನ್ನವ್ವ ಸಾವುರ ಬಯಲ ಹಾದಿ ಕಲೆಯುವ ಕಡೆ ನಿಂತುಕೊಂಡಳು. ತನ್ನನ್ನು ಹಾಡುಕಟ್ಟಿ ಅಜರಾಮರಗೊಳಿಸಿರುವ, ಹೆಣ್ಣುಮಕ್ಕಳಿಗೆ ಆದUಪ್ರಾಯ ಯೆನಿಸಿರುವ ಜಗಲೂರವ್ವಗೆ ತಾನು ಆಸರೆಯಾಗಿ ನಿಲ್ಲಬೇಕು ಯಂದು ನಿರರಿಸಿದಳು. ಭೂಮಾಯಿ ಯಲ್ಲಿದಾಳ ಯಂದು ಹುಡುಕ್ತ ಪ್ರಯಾಣ ಹೊಂಟಳು. ಆಕಾಸ ವಾರಗದಲ್ಲಿ ತಾನು ನಡೆಯುತ್ತಿರಬೇಕಾದರ ಹಾದಿಲೀ ರತುನ ಕೊಳ, ಮುತ್ತಿನ ಕೊಳ ತುಳುಕಿದಂತಾದವು, ಅವನ್ನೆಲ್ಲಾ ತನ್ನ ಮೂನ್ನೂರಾ ಮುವ್ವತ್ತು ಮೂರು ಗಾವುದ ವುದ್ದದ ಕಯ್ಕೆಗಳನ್ನು ಚಾಚಿ ಸರಿಸುತ ಮುಂದ ಮುಂದಕ ನಡೆದಳು. ತನ್ನ ಪಾಡಿಗೆ ತಾನು ಹೋಗುತ್ತಿರಬೇಕಾದರ ತನ್ನ ಹೆಸರಗುಂಟ ಯಾರೋ ಕೂಗಿದಂಗಾತು, ಅದರೊಟ್ಟಿಗೆ ಭೂಮಿಯೋಟ ಗಲದ ಜಾಗಟೆ ಭಾರಿಸಿದಂಗಾತು, ಪಾತಾಳ ಗಾತುರದ ಗಂಟೆ ಬಡದಂಗಾತು, ವಯಕುಂಠ ತೂಕದ ಸಂಖ ವೂದಿದಂಗಾತು. ತಿರುಗಿ ನೋಡಿದಳು, ಯದುರಿಗೆ ಸತಸಹಸ್ರಸ್ಪಟಿಕ ಲಿಂಗಗಳು ಕೋರಯಿಸು ತಿರುವಂಥ ದ್ರುಸ್ಯವು, ವಂದು ನದಿ ಯಿನ್ನೊಂದು ನದಿಯೊಳಗ ಜಳಕ ಮಾಡುತ್ತಿರುವಂಥ ದ್ರುಸ್ಯವು, ಅಷ್ಟಾಶಿತಿ ಸಹಸ್ತರುಷಿಗಳು ಯೇಕಾಗಿ ನಿಂತಿರುವಂಥ ದ್ರುಸ್ಯವು, ನಾಮ ರೂಪ ಕ್ರಿಯಾ ಕಲಾಪಗಳ ಜಾಲ ಪ್ರಭಾವದೊಳಗೆ ನಿಂತಿರುವ ಯಕ್ತಿ ಕಡೇಕ ತಿಳಿಸಿ ನೋಡಿದಳು. ಆಕೆ ಹೆಣ್ಣು ಹೆಂಗಸು ಯಂದು ಖಾತರಿ ಮಾಡಿಕೊಂಡಳು. ಗುರುತು ಸಿಗಲಿಲ್ಲ. ಹುಬ್ಬಿನ ಮ್ಯಾಲ ಕಯ್ಯಚ್ಚಿ ಕಣ್ಣಿಗೆ ಮಬ್ಬು ಕವಿಯುವ