ಪುಟ:ಅರಮನೆ.pdf/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೦ ಅರಮನೆ ಮಟ ನೋಡೇ ನೋಡಿದಳು. ಗುರುತು ಸಿಗಲಿಲ್ಲ. ಆಗಿದ್ದು ವುಸುರಳತೆ ವಳಿತದೊಳಗೆ ನಿಂತು 'ಯಾರು ತಾಯಿ ತಾವುದಾರು? ತಮ್ಮ ನಾಮಾಂಕಿತ ಯೇನು?” ಯಂದು ಕೇಳಿದಳು. ಅದಕಾಕೆಯು ಕೇಳೆನ್ನ ಹೆಸರಾss ಯಿದರ ಮಜನೂರಾss ಯೀರೇಳು ಲೋಕದೊಳಗ ನನಗ ದರುಮ ದೇವತೇ, ದರುಮ ದೇವತೆ ಯಂದು ಕರಿತಾರವ್ವಾ........ ನಾನು ಹೊಂಟು ಬಂದಿರೋದು ತೀರ ಯಾತ್ರಾಮಾಡಲಕ್ಕೋಸ್ಕರಾ........ ಸಂಗಡಿಲ್ಲ ಯಾರಾ.. ದಾರಿ ಬಲು ದೂರಾ........ ನಾವಿಬ್ಬರು ಕೂಡೇ ಹೋಗೋಣು ಬಾರಾss” ಯಂದು ತನ್ನ ನ ಗುರುತ ಹೇಳಿಕೊಂಡಳು. ಅದಕಿದ್ದು ಸರಣೆ “ನಿನ್ನ ಹೆಸರು ಕೇಳಿದ್ದೆ, ನೋಡಿರಲಿಲ್ಲವಾ.. ನಿನ್ನದು ಯಾವ ದೇಸ? ಯಾವ ಕಡೇಕ ಪ್ರಯಾಣ ಬೆಳೆಸೀ ತಾಯಿ? ಯಂದು ಕೇಳಲದಕ ಆಕೆಯು ನಾನು ಹಸ್ತಿನಾವತಿಯನ್ನಾಳಿದ ಅರಶಮ್ರನೆಂಬುವ ಸೂರನ ಮಗಳು.. ಕಾಸೀ ಯಾತ್ರಾಮಾಡಲಕಂತ ಹೊಂಟು ಬಂದೀನಿ.. ಗಂಗಾ ನದೀಲಿ ಜಳಕಾ ಮಾಡಿ ಸ್ನಾಥಸ್ವಾಮಿಯ ದರುಸನ ಪಡೆಯಬೇಕೆಂಬೊ ಉಚ್ಚಾ ಅದ.. ಯಷ್ಟೋ ವರುಸುಗಳಿಂದ ವಂದೇ ಸಮಕ ನಡೀತಾ ಅದೀನಿ.. ಕಾಶೀ ಯದುರಿಗೆ ಬರುವಲ್ಲದು, ನದೀರೂಪೀ ಗಂಗಮ್ಮ ತಾಯಿ ಯದುರಿಗೆ ಬರುವಲ್ಲಳು.. ಹಾದಿ ಸವೆವಲ್ಲದು.. ಜೊತೇಲಿ ಬ್ಯಾರೆ ಯಾರೂ ಯಿಲ್ಲ. ನೀನಾರ ಬರಬೇಕು ನೋಡು ತಂಗಿ..” ಯಂದು ಹೇಳಿದಳು. ಅದನು ಕೇಳಿ ಚನ್ನವ್ವನ ಆನಂದಕ ಪಾರವೇ ಯಿಲ್ಲದಂಗಾತು. ತನ್ನನ್ನು ತಂಗೀ ಅಂತ ಗುರುತಿಸೋರು ವಬ್ದಾರಾರ ಅದಾರಲ್ಲ ಯಂದು ಸಮಾಧಾನಪಟ್ಟುಕೊಂಡಳು. ತನಗ ಅಕ್ಕನ ಸ್ಥಾನದಲ್ಲಿರುವಾಕಿ ಧರುಮದೇವತೆ ಅವುದೋ, ಅಲ್ಲಮೋ ಯಂಬ ಅನುಮಾನ ಬಂತು. ಸನೀಕ ಹೋಗಿ ಅಪಾದಮಸ್ತಕ ನೋಡಿದಳು. ಸಾಣಾ ಮಾಡದ ಯೇಸು ಕಾಲವಾಗಿರುವುದೋ, ಹರಕಲು ಬರಕಲು ಕಿಮುಟು ಮಯ್ಲಿಗೆ ಮಾಸಿರೋ ಸೀರೆ ಕುಬುಸ ವುಟಕೊಂಡಾಳ.. ನಡದೂ ನಡದೂ ಆಕೆಯ ಕಾಲುಗಳು ಸೀದು ಕರಕಿಟ್ಟು ಹೋದಂಗದಾವ.. ತನಗೇನೀಕಿ ಆರೀದಾಕೆಯಲ್ಲ.. ಯೇಸೋ ಯುಗಗಳ ಹಿಂದ ತಾನೀನ ನೋಡಿರುವಂಥ ನೆನಪುಂಟು. ಆಗ ಹಾಲಲಿ ಕಯ್ಯ ತೊಳಕಂಡು ಮುಟ್ಟಂಗ ಬಲು ಛಂದಕ ಯಿದ್ದಳು.. ಹೆಂಗಿದ್ದಾಕೆ ಹಿಂಗಾಗಿಬುಟ್ಟವಳಲ್ಲ.. ಯಂದು ಮನದೊಳಗೆ ಮರುಗಿ “ಅಕ್ಕಾ.. ನಿನ್ನ ದುಸನದಿಂದ ನಾನು ಪಾವನಳಾದೆನು. ನಿನ್ನ ಅವನ ನೋಡಿ ದುಕ್ಕಿತಳಾದೆನು, ನೀನು ಮಜ್ಜಣ ಮಾಡಲಕ ಯಲ್ಲಾದವಕ್ಕಾ ಹೊಳೆ ಹಳ್ಳ ನದಿಗಳು,