ಪುಟ:ಅರಮನೆ.pdf/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಯಿನ್ನೊಂದು ದಿಕ್ಕಿನಲ್ಲಿರೋ ಗುಡ್ಡದ ಸುತ್ತ ಮುತ್ತ ಯಿನ್ನೊಂದು ನಮೂನಿ ಪವುರಾಣಿಕ ಕಥಿ ಸುತಕೊಂಡಯ್ಕೆ. ಯೀಗಿಲ್ಲಿ ಹರಿತಾಯಿರುವಂಥ ಕಡುದಮ್ಮನ ಹಳ್ಳದೊಳಗ ಬಾಯಿ ಮುಕ್ಕಳಿಸುತ, ಹೊನ್ನವನ ಹಳ್ಳದೊಳಗ ಮಜ್ಜಣ ಮಾಡುತ ಅಗಸ್ಯ ಯಂಬ ಮುನಿವರೇಣ್ಯನು ತಪ್ಪಸ್ಸು ಮಾಡುತ ಯಿದ್ದನಂತೆ. ಅವನ ತಪಸ್ಸು ಕೆಡಿಸಲಕಂತ ಸಾವುರಾರು ಮಂದಿ ರಾಕ್ಷಸರು ಕೋಳಿ ರೂಪದಲ್ಲಿ ತೊಂದರೆ ಕೊಡುತಲಿದ್ದರಂತೆ. ರೋಸಿದ ಮುನಿಯು ಅವುಗಳನ್ನೆಲ್ಲ ಕಲ್ಲು ಮಾಡಿ ವಂದು ಕಡೆ ಕುಪ್ಪ ಹಾಕಿದನಂತೆ. ಅದೇ ಮುಂದಿನ ಕಾಲಾಂತರದಲ್ಲಿ ಕೋಳಿ ಗುಡ್ಡಯಂದು ಹೆಸರಾಯಿತಂತೆ. * ವಾಯುವ್ಯ ದಿಕ್ಕಿನಗುಂಟಯಿರೋ ಬೂದಿಗುಡ್ಡದ ಹಿಂದೆ ದೊಡ್ಡ ಕಥೀನೆ ಅಯ್ಕೆ, ಆ ಗುಡ್ಡವು ಯತ್ತರಕ್ಕಿಂತ ಹೆಚ್ಚು ಅಗಲವಾಗಿರುವುದು, ಯಾದೇ ಕಲ್ಲನ್ನು ಮುಟ್ಟಿದರೆ ಕಮ್ ಬೂದಿ ತಗಲುತಯ್ಕೆ, ಪ್ರಾಪ್ತವಾಗಿರುವ ಬೂದಿ ಯಂಬ ನಾಮ ಯಿಶೇಷ ಕುರಿತಂತೆ ಪಟ್ಟಣದ ಹಿರೇಕರಲ್ಲಿ ಜಿಗ್ಯಾಸವುಂಟು. ಸ್ವಾಯಂಭುಮನುವಿನ ಪುತ್ರಿಯಾದ ಪ್ರಸೂತಿಂದು ಗರದಲ್ಲಿ ಜೆನಿಸಿದಂಥವಳೂ, ಪರಶಿವನಿಂದ ಕನ್ನ ಹಿಡಿಸಿಕೊಂಡಂಥವಳೂ ಆದಂಥ ದಾಕ್ಷಾಯಿಣಿ ಯಾವ ಯಗ್ನಕುಂಡದಲ್ಲಿ ಬಿದ್ದು ಧಗಧಗ ದಹನಗೊಂಡು ಬೂದಿಯಾದಳೋ ಆ ಯಾಗ ನಡೆದದ್ದು ಅದೇ ಗುಡ್ಡಯಿರೋ ಜಾಗದಲ್ಲಂತೆ. ಅರುನನಿಂದ ದಹನಗೊಂಡ ಖಾಂಡವನ ಯಿದ್ದದ್ದು ಅದೇ ಜಾಗದಲ್ಲಂತೆ. ಯವಿಷ್ಟು ಶಿಷ್ಟರು ಹೇಳುವಂತ ಕಥೆಗಳಾದರೆ..... ವಂದೊಂದು ಗುಡ್ಡಕ್ಕೂ ನೂರಾರು ಕಥೆಗಳು ಅಂಟಿಕೊಂಡು ಅದಾವ. ಗುಡ್ಡಗಳಿಗಂಟಿ ಕೊಂಡಿರೋ ವಂದೊಂದು ಕಲ್ಲಿಗೂ ಮೂರ ಮಂದಿ ವಂದೊಂದು ಹೆಸರಿಟ್ಟವರೆ, ಯರಗುಡ್ಡದ ಮ್ಯಾಲಿರೋ ನಿಲುಗಲ್ಲುಗಳು ಸುಮಾರು ನೂರೆಪ್ಪತ್ತಾರು.. ಅವು ಯಾವ್ಯಾವೆಂದರ ಚಿಂಬ, ಬುಶ್ಯ, ಕೊಟ್ರ, ಕೊಕ್ಕ ಬುಕ್ಕ ಕಟಿಯಾ, ಮಲಿಗಾ ಮುಂತಾದವು. ಕುರುಗುಡ್ಡದ ನಿಲುಗಲ್ಲುಗಳ ಹೆಸರೆಂದರೆ ಪೋತುಲ, ಪೀತುಲ, ಗೊಗ್ರೆಲ, ಜಂಗಲ, ನಿಂಗಲ, ತಂಗಲ, ಬೊಮ್ಮಲ, ಕೆಂಚಲ, ಪಿಂಗಲ ಯಂವೀ ಮೊದಲಾದ ವಂಬಯಿನೂರು, ಬೋಲ್ಯಾ, ಪಚ್ಯಾ ಗುಂಡ್ಯಾ, ಪೆದ್ದ, ಚಿನ್ನಾ, ದಾನಾ, ಪಾನಾ, ಕಾನಾ, ಕೂನಾ ಯಂಬಿವೇ ಮೊದಲಾದ ಯೇಳುನೂರಾ ಅರವತ್ತೊಂದು