ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

به نام ಯವನ ಯಾಮಿನೀ ವಿನೋಜಿ, ಎಂಬ ೪ಯು, ಬೀಸುತ್ತಿದ್ದುದರಿಂದ ಎಂಟುದಿನಗಳು ಪ್ರಯಾಣವೂಡಿ, ಒಂದಾ ನೋಂದು ರಾಜ್ಯಕ್ಕೆ ರಾಜಧಾನಿಯಾದ ರೇವನ್ನು ಸೇರಿದೆವು. ಆಗ ಸಮು ದದಮೇಲೆ, ಪ್ರಯಾಣಮೂಡಿ ಬರುವ ತಮ್ಮ ಬಂಧು ಮಿತ್ರರನ್ನೂ, ಸುಖಾಗಮನದಿಂದ ಬರಮಾಡಿಕೊಳ್ಳುವುದಕ್ಕಾಗಿ, ಅಲ್ಲಿಗೆ ಬಂದು ನೋಡು ತಾ ಗುಂಪು ಗುಂಪಾಗಿ ನೆರೆದುಕೊಂಡರು. ಆ ಜನಗಳ ಗುಂಪಿನಲ್ಲಿ ಕೆಲ ವರು ತಮ್ಮ ರಾಜನ ವಿಷಯವಾಗಿ ವರ್ತಕರೊಡನೆ ಮಾತನಾಡುವುದಕ್ಕಾ ಗಿ ಹಡಗನ್ನು ಹತ್ತಿ ಬಂದರು. ಅಯ್ಯಾ ! ನಮ್ಮರಾಜನು, ನೀವುಗಳು ಸುಖವಾಗಿ ಇಲ್ಲಿಗೆ ಬಂದು, ತಲಪಿದುದಕ್ಕಾಗಿ, ತುಂಬ ಸಂತೋಷವನ್ನು, ಹೊಂದಿದೆನೆಂದು ತಿಳಿಸಿರುವರು. ಅಲ್ಲದೆ ಮುಖ್ಯವಾದ ಮತ್ತೊಂದು ವಿಜ್ಞಾಪನೆಯನ್ನು ತಮ್ಮಗಳೆದುರಿಗೆ ಅರಿಕೆಮೂಡುವಂತೆ ಹೇಳಿರುವನು. ಏನಂದರೆ ಆತನಬಳಿಯಲ್ಲಿ ರಾಜಕಾರ್ಯ ನಿರ್ವಾಹಕರಲ್ಲಗ ಗಣನಾದ ಒಬ್ಬಾನೊಬ್ಬ ಮಂತ್ರಿಯಿದ್ದನು. ಆತನು ರಾಜಕಾರ್ಯದಲ್ಲಲ್ಲದೆ ಬರವಣಿಗೆಯಲ್ಲಿ ತುಂಬಾ ಪರಿಶ ಮವುಳ್ಳವನಾಗಿದ್ದನು. ಆದುದರಿಂದ ನಾನು ಆತನಲ್ಲಿ ತುಂಬಾ ವಿಶ್ವಾಸವುಳ್ಳವನಾಗಿದ್ದನು. ಈಗ ಆತನು ಸಹೋದುದರಿಂದ, ಅವನಿಗೆ ಸಮನನಾದವನಿಗೆ ಮಂತ್ರವನ್ನು ಕೊಡಬೇಕೆಂದಿರುವೆನು. ಆದುದರಿಂದ ಇದುವರೆಗೂ, ಅನೇಕಾನೇಕಜನ ರು, ತಮ್ಮ ಹಸ್ತಾಕ್ಷರಗಳನ್ನು ಕಳುಹಿಸಿದರೂ, ಯಾವುದೂ ಆ ಮಂತ್ರಿ ಯ ಹಸ್ತಾಕ್ಷರಕ್ಕೆ ಸರಿಬಾರದೆ ಇರುವುದರಿಂದ, ನನ್ನರಾದದ ಮಂತ್ರಿ ಪದವಿಗೆ ಯೋಗ್ಯರಾದವರು, ಯಾರೂ ದೊರಕಲಿಲ್ಲವೆಂದು ಹೇಳಿರುವನು ಎಂದು ನುಡಿದನು. ಆಗ ಅಪ್ಲಿದ್ದ ವರ್ತಕರೆಲ್ಲರೂ, ಕಾಗದವನ್ನು ತೆಗೆದು ಕೊಂಡು, ತಂತಮ್ಮ ಹಸ್ತಾಕ್ಷರಗಳನ್ನು ಬರೆದರು. ನಾನು ಅವರಬಳಿ ಗೆಹೋಗಿ, ಆ ಕಾಗದವನ್ನು ತೆಗೆದುಕೊಳ್ಳಲು, ಓಹೋ ಈ ಹಾಳು ತಿಯು, ಸಮುದ್ರದಲ್ಲಿ ಬಿಸಾಡುವುದೋ ಅಥವಾ ಹರಿದು ಹಾಕುವುದೊ ಎಂದು ಅನುಮನ ಪಡುತ್ತಿದ್ದರು. ಆದರೆ ನಾನು ಕಾಗದವನ್ನು ಸೇನಾ ನನ್ನು ಹಿಡಿದುಕೊಂಡಿರುವ ರೀತಿಯನ್ನು ನೋಡಿ, ಬರವಣಿಗೆಯನ್ನು ಕಲಿ ತಿರಬಹುದೆಂದು ಕೆಲವರು ಸುಮ್ಮನಾದರು. ಅವರಲ್ಲಿ ಆ ಕಾಗದವನ್ನು ಖಂಡಿತವಾಗಿ ತೆಗೆದುಕೊಳ್ಳಬೇಕೆಂದು, ಮಾತನಾಡುತ್ತಿರುವು, ಹಡಗಿನ ಯಜಮನನ್ನು, ನನ್ನ ಪಕ್ಷವನ್ನು ವಹಿಸಿ