ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೩೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೭೦ ಯವನ ಯಾಮಿನೀ ವಿನೋದ ಎಂಬ, ಹೇಳಲು, ಮಂತ್ರಿಯು ಆಹಾ ! ಏನು ನಿನ್ನ ಬುದ್ಧಿಬಲದಿಂದ ಕಥೆಯನ್ನು ಕಠಿಸಿ ಹೇಳುವೆಯಾ ? ನಿನ್ನೆ ರಾತ್ರಿ ಆ ಕುರೂಪಿಯು ನಿನ್ನ ಬಳಿಯಲ್ಲಿ ಮಲಗಿರಲಿಲ್ಲವೆ ? ಎಂದು ಕೇಳಿದನು. ಆಗ ಕುವರ್ತಯು ತಂದೆಯನ್ನು ನೋಡಿ, ಅಬ್ಬಾ ! ನಾನು ನಿಮಗೆ ಹೇಳಿದ ಯವನಪುರುಷನೇ ನನ್ನನ್ನು ಪಾಣಿಗ ಹಣ ಮಾಡಿಕೊಂಡಿರುವನೆಂದು, ಖಂಡಿತವಾಗಿ ಹೇಳುವನೆಂದು ಹೇಳಿದಳು. ಆಗ ತಂದೆಯ ಆಹಾ ಮಾಯಗಾತಿ, ಇನ್ನೆನ್ನು ಚವು ಇಾರವನ್ನು ಮಾಡುವೆ, ಆ ಗೂನನು ನಿಜವಾಗಿಯೂ ನಿನ್ನನ್ನು ಮದುವೆ ಮಾಡಿಕೊಳ್ಳಲಿಲ್ಲವೆ ? ಎಂದು ಕೇಳಲು, ತಂದೇ ! ವ್ಯರ್ಥವಾಗಿ ನನ್ನ ನ್ನು ಭ ಮಾಯುಕ್ತಳನ್ನಾಗಿ ಮಾಡುವೆಯಲ್ಲಾ! ಆ ಹಾಳು ಮನನು ಹಾಳಾಗ ? ಇನ್ನು ಆತನ ಸಂಗತಿಯನ್ನು ನನ್ನೆದುರಿಗೆ ಹೇಳಬೇಡ ಎಂದು ನಿಂದಿಸಿ, ತಂದೆಯನ್ನು ಕುರಿತು, ತಾತಾ ? ನಿಜವಾಗಿಯೂ ನಾನು ತಮ್ಮ ಸನ್ನಿಧಾನದಲ್ಲಿ ಪುನಹ ವಿಜ್ಞಾಪಿಸಿಕೊಳ್ಳುವುದೇನಂದರೆ :=ನಾನು ಹೇಳಿದ ಸುಂದರಾಂಗನ ಅಂಗಸಂಗದಿಂದ ಅತ್ಯಾನಂದಭರಿತಳಾಗಿ, ನನ್ನ ರಾತಿ ) ಯನ್ನು ಕಳೆದೆನು, ಇದು ಖಂಡಿತವಾಗಿಯೂ ಸತ್ಯವಾದ ಮಾತು ಆತನೂ ನನ್ನ ಬಳಿಯಲ್ಲಿಯೇ ಇರುವನೆಂದು ನಂಬಿಕೆಯಾಗಿ ನುಡಿದಳು, ಆಗ ಆ ಸುಂದರಾಂಗನನ್ನು ಹುಡುಕುವುದಕ್ಕಾಗಿ ಬಂದ ಮಂತ್ರಿಯು ಮಾರ್ಗದಲ್ಲಿ ತಲೆಕೆಳಗಾಗಿ ನೇತಾಡುತ್ತಾ ನಿಂತಿರುವ ಗನನನ್ನು ಕಂಡು, ಆಶ್ಚರ್ಯಯುಕ್ತನಾಗಿ, ನಿನ್ನನ್ನು ಯಾರು ಹಿಗಮಾಡಿದರೆಂದು ಕೇಳ್ ದನು. ಆ ಗೂನನು ಮಂತ್ರಿ ಎಂಬುದನ್ನು ತಿಳಿದುಕೊಂಡು, ಆಹಾ ! ಕೋಣನ ರೂಪವನ್ನು ಧರಿಸಿದ್ದ ರಾಕ್ಷಸನ ಹೆಂಡತಿಗೆ ನನ್ನನ್ನು ಮದುವೆ ಮಾಡಬೇಕೆಂದು ಯೋಚಿಸಿದೆಯೋ ? ನಾನೇನೂ ಹುಚ್ಚನಲ್ಲ, ನೀನು ನನ್ನನ್ನು ಮೋಸ ಮಾಡಲಾರೆ ಎಂದು ಹೇಳಿದನು. ಇಂತಂದು ಹೇಳಿ, ಪ್ರಕರಜಾದಿಯು ಕಥೆಯನ್ನು ನಿಲ್ಲಿಸಿ, ಬೆಳಗಿನ ಜಾವದಲ್ಲಿ ಮರಳಿ ಹೇಳಲಾರಂಭಿಸಿದಳು. ೧೦೭ ನೆಯ ರಾತ್ರಿಕಥ. ವಹರಜಾದಿ ಸುಲ್ತಾನರನ್ನು ಕುರಿತು, ಪಿಯರೇ ! ಗಯ ಫರನು ಕಲೀಫರನ್ನು ಕುರಿತು, ಕಥೆಯನ್ನು ಹೇಳತೊಡಗಿದಳು. ಆ ನನ್ನ ನಂತಿ ಯು ಹೇಳಿದ ಮಾತುಗಳನ್ನು ಕೇಳಿ ಏನೇನೋ ಗೊಣಗುತ್ತಿರುವು