ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೩೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೬L ಯವನ ಯಾಮಿನೀ ವಿನೋದ ಎಂಬ, ಮೇಲೆ, ಆತನಿಗೆ ಮನೆಯಲ್ಲಿ ಓದು ಹೇಳಿಸದೆ, ಒಬ್ಯಾನೊಬ್ಬ ವಿದ್ಯಾಂಸನ ಮನೆಗೆ ಕರೆದುಕೊಂಡುಹೋಗಿ, ಪಾಠವನ್ನು ಕಲಿತಮೇಲೆ ಪುನಹ ಕರೆದು ಕಂಡು ಬರುವಂತ, ಇಬ್ಬರು ಸೇವಕರನ್ನು ನೇಮಿಸಿದನು. ಆ ಏಜೇಬನು ತಾನು ಓದುತ್ತಿರುವ ಕಾಲದಲ್ಲಿ ತನ್ನ ಸಹಪಾಠಿಗಳೊಂದಿಗೆ ಆಟವಾಡುತ್ತಾ ಇದ್ದನು. ಆತನು ಸ್ವಭಾವತಃ ಶೂರನಾದುದರಿಂದ, ಹುಡುಗರೆಲ್ಲರೂ, ಆ ಘನನ್ನು ಗೌರವದಿಂದ ಕಾಣುತ್ತಿದ್ದರು. ಆ ಬಡ ಉಪಾಧ್ಯಾಯನು, ಇತರ ಹುಡುಗರ ತಪ್ಪನ್ನು ತಿದ್ದಿ ಶಿಕ್ಷಿಸಿದಂತೆ, ಈ ಮಂತ್ರಿಯ ಮೊಮ್ಮಗನನ್ನು ಶಿಕ್ಷಿಸದೆ, ದಾಕ್ಷಿಣ್ಯದಿಂದ ಸುಮ್ಮನಿರುತಿದ್ದುದ ರಿಂದ, ಏಜೇಬನು ಗರ್ವಿಷ್ಟವಾಗಿ, ತಾನೇ ದೊಡ್ಡವನೆಂದು ತಿಳಿದು, ತನ್ನ ಕೈ ಕೆಳಗೆ ಹುಡುಗರೆಲ್ಲರೂ, ಇರಬೇಕೆಂದು ತನ್ನ ತಪ್ಪನ್ನು ಮತ್ತಾರೂ, ಹೇಳಕೂಡದೆಂದು ಅಹಂಕಾರದಿಂದ ಅವರೆಲ್ಲರಿಗೂ, ಆಜ್ಞೆ ಮಾಡಿ ಅದಕ್ಕೆ ವಿರೋಧವಾಗಿ ನಡೆದವರನ್ನು ಹೊಡೆಡು ಪೀಡಿಸುತ್ತಿದ್ದನು. ಹುಡುಗರೆಲ್ಲರೂ ಸೇರಿ ತಮ್ಮ ಉಪಾಧ್ಯಾಯರ ಹೇಳಲು, ಅತನು ಅವರನ್ನು ಸಮಾಧಾನ ಮಾಡಿ, ಏಜೇಬನ ಸುಮ್ಮನೆ ಇಲ್ಲದಿರು ಪುದನ್ನು ಕಂಡು, ಅವನು ದೊರೆಯದುಗನೆಂಬ ಅಹಂಕಾರದಿಂದ ನಿಮ್ಮನ್ನು ಹೀಗೆ ಪೀಡಿಸುತ್ತಿರುವನು, ಇನ್ನು ಮೇಲೆ ಅವನು ನಿನ್ನ ತಂಟೆಗೆ ಬಾರದಂತ ಮಾಡುವುದಕ್ಕಾಗಿ, ನನಗೊಂದು ಉಪಾಯವು ತೋರುವುದು ಏನೆಂದರೆ :ನಾಳಿನದಿನ ಅವನು ಇಲ್ಲಿಗೆ ಬಂದಮೇಲೆ, ನೀವುಗಳೆಲ್ಲರೂ ಆಟವಾಡುವುದಕ್ಕೆ ಮಾತನಾಡುವುದಕ್ಕಾಗಿ, ಆತನ ಸುತ್ತಲೂ ಕುಳಿತುಕೊಂಡು, ನಾವುಗಳು ಈದಿನ ಆಡುವ ಆಟಕ್ಕೆ ಬರಬೇಕಾದವರು, ತಮ್ಮ ತಮ್ಮ ತಂದೆ ತಾಯಿ ಗಳ ಹೆಸರನ್ನು ಹೇಳಬೇಕು, ಹಾಗೆ ಹೇಳದವರೊಡನೆ ನಾವೆಂದಿಗೂ ಆಡುವು ದಿಲ್ಲವೆಂದು ಹೇಳಿಬಿಡಿ ಎಂದು ನುಡಿದನು. ಆದುದರಿಂದ ಹುಡುಗರೆಲ್ಲರೂ ಗುಂಪುಕೋಡಿ, ಹಾಗೆ ಮಾಡಲಾರಂಭಿಸಿ ಏಜೇಬನಬಳಿಗೆ ಬಂದು, ನಾವುಗ ಳೆಲ್ಲರೂ ಈದಿನ ಒಂದು ಆಟವನ್ನು ಆಡಬೇಕೆಂದು ಗೊತ್ತುಮಾಡಿರುವೆವು. ಅದಕ್ಕೆ ಬರತಕ್ಕವರೆಲ್ಲರೂ, ತಂತಮ್ಮ ಹೆಸರುಗಳನ್ನು ತಮ್ಮ ತಂದೆಗಳ ಹೆಸರನ್ನು ಹೇಳಬೇಕು, ಹಾಗೆ ಹೇಳದಿದ್ದವರನ್ನು ನಾವು ನಮ್ಮ ಕೂಟ ಕೈಂದಿಗೂ ಕರೆದುಕೊಳ್ಳಲಾರೆವೆಂದು ಹೇಳಲು, ಸರರ ಸಮ್ಮತಿಸಿದರು, ಬಳಕ, ಈ ಸಮ್ಮತಿಯನ್ನು ಹಾಕಿದ ಹುಡುಗನು, ಎಲ್ಲರನ್ನೂ