ವಿಷಯಕ್ಕೆ ಹೋಗು

ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೪೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

858 ಯವನ ಯಾಮಿನೀ ವಿನೋದ ಎಂಬ, ಹಾನು ನಗುವುದಕ್ಕಾಗಿ ಕಿಟಕಿಯನ್ನು ಮುಚ್ಚಿಕೊಂಡಳು. ಬಾಕು ಬೆಕನು ತನ್ನ ಮೇಲೆ ಆಕೆ ಕೋಪಿಸಿಕೊಳ್ಳದೆ, ಹೋದುದರಿಂದ ಧರ ವನ್ನು ತಂದುಕೊಂಡನು. ರವೆಯ ಅಂಗಡಿಯವಳು ನನ್ನ ಅಣ್ಯನನ್ನು ಪರಿಹಾಸ ಮಾಡಬೇಕೆಂದು ಯೋಚಿಸಿ, ಉತ್ತಮವಾದ ವಸ್ತ್ರಗಳನ್ನು ತರಿಸಿ ಅದನ್ನು ಉಡುವಾಗಿ ಹರಿದುಕಾಡಬೇಕಂದು, ದರ್ಜೆಯವನಿಗೆ ಹೇಳಿ ಹೊಲಸಿಕೊಂಡು ಬರುವಂತೆ, ತನ್ನ ದಾದಿಯಕ್ಕಯ್ಯಲ್ಲಿ ಕಳುಹಿಸಿ ದಳು. ಆಕೆ ಆ ಬಟ್ಟೆಗಳನ್ನು ತಗೆದುಕೊಂಡುಬಂದು, ಅಯಾs ! ನಮ್ಮ ಧೋರಸನಿ ನಿಮಿಗ ಸಲಾಮುಹೇಳಿ, ಈ ಬಟ್ಟೆಗಳನ್ನು ಹೋಲಿಸಿಕೊಂಡು ಬರುವಂತೆ ಹೇಳಿಕಳುಹಿಸಿರುವಳು. ಆಕ ಹೊಸಹೊಸದಾಗಿ ಉಡುಪನ್ನು ಹಾಕಿಕೊಳ್ಳುವುದರಿಂದ, ನಿನಗೆ ದಯೋಜನ ಉಂಟೆಂಬುದು ನನಗೆ ತಿಳ ದಿರುವುದು ಎನಲು, ಬಾಕುಬೇಕನ್ನು, ಆ ರವೆಯ ಅಂಗಡಿಯ ಯಜಮ ನಿಯು, ತನ್ನ ಮೇಲಣ ಮೊಡವನ್ನು ಕೂರರಿಸುವುದಕ್ಕಾಗಿ, ಇದನ್ನು ಕಳುಹಿಸಿರುವಳೆಂದು ತಿಳಿದು, ಅಮಾ ! ಎಲ್ಲ ಕೆಲಸಗಳನ್ನು ಬಿಟ್ಟು, ನಿಮ್ಮ ಕಾರ್ಯವನ್ನು ಮಾಡಿ ನಾಳೆ ಬೆಳಗ್ಗೆ ಈ ಉಡುಪುಗಳನ್ನು ಸಿದ್ಧ ಮಾಡಿಕೊಡುವೆನೆಂದು ಹೇಳಿ ಕಳುಹಿಸಿ ಆಗಲೆ ಕಲಸಮಾಡಲಾರಂಭಿಸಿದನು. ಆದಿನವೇ ಕಲಸವು ಪೂರೈಸಿತು. ಮರುದಿನದಿಂದ ದಾದಿಯಕೈಯಲ್ಲಿ ಆ ಬಟ್ಟೆಗಳನ್ನು ಕಟ್ಟು ನಾನು ನಿಮ್ಮ ಧಾರಸಾನಿಯ ಇಷಾನುಸಾರವಾಗಿ, ಕೆಲಸ ಮಾಡಿ ಆಕೆ ಯನ್ನು ಸಂತೋಷಪಡಿಸಲು ಸಿದ್ಧನಾಗಿರುವನು, ಮತ್ತೊಬ್ಬರಲ್ಲಿ ರನ್ನ ಬಟ್ಟೆಗಳನ್ನು ಕಳುಹಿಸದ, ಪುನಹ ನನ್ನ ಬಳಿಗೆ ಕಳುಹಿಸುವಂತೆ ಹೇಳು ಎನಲು, ಅಕ ಸ್ವಲ್ಪ ದೂರ ಹೋಗಿ ಹಿಂದಿರುಗಿ ಬಂದು, ನನ್ನ ಅಣ್ಣನನ್ನು ನೋಡಿ ಅಯ! ನಮ್ಮ ಧರೆಸಾನಿಯು ನಿನಗೆ ವಂದನೆಗಳನ್ನು ಮಾಡಿ, ಈದಿನ ರಾತ್ರಿ ಹತ್ತನ್ನು ಹೇಗೆ ಕಳೆಯುವ ? ನಾನಾದರೂ ನಿನ್ನ ಮೋಹದಿಂದ ನಿದ್ರೆಯಿಲ್ಲದೆ, ನರಳುತ್ತಿರುವೆನೆಂದು ಹೇಳೆಂದು ನನಗೆ ಹೇಳಿದಳು. ನಾನು ಮರೆತುಹೋಗಿ, ಈಗಬಂದು ಹೇಳಿದನೆಂದು ನುಡಿ ದಳು. ಬುದ್ಧಿಹೀನನಾದ ನನ್ನ ಅಣ್ಣನು, ನಿನ್ನಂತ ನನಗೂ ಮೋಹ ಉಂಟಾಗಿರುವುದರಿಂದ ನಾಲ್ಕು ರಾತ್ರಿಗಳಿಂದಲೂ ನಿದ್ದೆ ಇಲ್ಲದೆ ಕಾಲವನ್ನು