ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೫೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(೬೨) ಅರೇಬಿಯನ್ ನೈಟ್ಸ್ ಕಥೆಗಳು, ೫೬೯ ಈತನಿಗೆ ಇನ್ನು ವಿವೇಕವನ್ನು ಹೇಳಿ ಪ್ರಯೋಜನವಿಲ್ಲವೆಂದು ತಿಳಿದು, ಹರಡಲುದ್ಯುಕ್ತನಾದನು. ಇಂತಂದು ಹೇಳಿ ಮಹರಾದಿಯು ಕಥೆ ಯನ್ನು ನಿಲ್ಲಿಸಿ ಮರುದಿನ ಬೆಳಗಿನಜೆನದಲ್ಲಿ ಮರಳಿ ಕಳಲಾರಂಭಿಸಿದಳು. ೧೯೨ ನೆಯ ರಾತ್ರಿ | ಕಥೆ. ವಹರದಿಯು ಸುಲ್ತಾನರನ್ನು ಕುರಿತು, ಇತಂದಳು. ಬಳಿಕ ಪರ್ಸಿಯಾ ರಾಜಕುಮಾರನು ಇರ್ಬತಿಹರನನ್ನು ಕುರಿತು ಅಯಾ ! ನೀನು ಹೇಳಿದ ಬುದ್ಧಿವಾದಗಳಂತೆ ನಾನು ನಡೆದುಕೊಳ್ಳಲು ಅಸಾಧ್ಯವಾಗಿರುವು ದೆಂದು ನಾನು ಹೇಳಿದುದಕ್ಕಾಗಿ ನೀನು ಕೋಪಿಸಿಕೊಳ್ಳಬೇಡ. ರಾಣಿಯ ವರ್ತಮಾನವು ನಿನಗೆ ತಿಳಿದಕೂಡಲೆ ನನಗೆ ಅದನ್ನು ತಿಳಿಯಪಡಿಸುವುದ ಕ್ಕಿಂತಲೂ ಅಧಿಕವಾದ ಮತ್ತಾವ ಉಪಕಾರವೂ ಇಲ್ಲ. ಆಕೆಯು ಮರ್ಧೆ ತಿಳಿದು ಸ್ವಸ್ಥವಾಗಿರುವಳೆ೦ ಇಲ್ಲದೆ ಸತೆ ಹೋಗಿರುವಳೊ ನನಗೆ ತಿಳಿ ಯದು, ಆ ಲಲನಾಮಣಿಯು ಮೂರ್ಛಾಕಾ |ಂತಳಾದ ಕಾಲದಲ್ಲಿ ನನಗೆ ಉಂಟಾದ ವ್ಯಸನಪೂಣ, ನೀನು ನನ್ನ ದರವಸ್ಥೆಯನ್ನು ನಿಂದಿಸಿ ಹೇಳಿದ ಬುದ್ದಿವಾದದಿಂದಭಿವೃದ್ಧಿಯನ್ನೆ ದಿದ ಮೋಹವೂ, ನನಗೆ ಈ ವಿಧವಾದ ಅನುಮಾನವನ್ನು ತಂದೊಡ್ಡುತ್ತಿರುವುದೆಂದು ನುಡಿಯುತ್ತಿರಲು, ಇರ್ಬ ತಡರನು ಸಾಮಾ! ಆ ಲಲನಾಮಣಿಯ ವರ್ಧಿತಳಾದಬಳಿಕ ಮಾವ ಅಗಾಯವೂ ಆಕೆಗೆ ಸಂಭವಿಸಲಾರದು. ರಣಿಯ ಏತಿಗೆ ಪಾತ ಳಾದ ದಾದಿಯು ನನ್ನ ಬಳಿಗೆ ಬಂದು, ನಡೆದ ಸಂಗತಿಗಳನ್ನೆಲ್ಲಾ ಹೇಳುವಳು. ನಾನು ಅದನ್ನು ತಮಗೆ ತಿಳಿಯ ಪಡಿಸದೆ ಇರಲಾರೆನು, ನೀವು ನಂಬಿಕೆಯಾಗಿರಬಹುದೆಂದು ಹೇಳಿ, ಆತ ನಿಂದಪ್ಪಣೆಯನ್ನು ಪಡೆದುಕೊಂಡು ತನ್ನ ಮನೆಯನ್ನು ಸೇರಿ ಆದಿನವೆಲ್ಲ ಸೆಮ.ಸೆಲ್‌ನೆರ್ಹಳಕಡೆಯಿಂದ ವರ್ತಮಾನವೇನಾದರೂ ಬರುವುದೇನೋ? ಎಂದೆಂದುಕೊಂಡು, ಮನೆಯಲ್ಲಿ ಕಾದ...ಂಡಿದ್ದನು. ಆದರೂ ಯಾರೂ ಬರಲಿಲ್ಲ ಹೋಗಲಿ, ಮರುದಿನವಾದರೂ ವರ್ತಮಾನದ ಸುದ್ದಿಯೇ ತಿಳಿಯು ಲಿಲ್ಲ. ಆದರೆ ಇರ್ಬತಿಹರನು ರಾಜಕುಮಾರನ ದೇಹಸ್ಥಿತಿಯನ್ನು ತಿಳಿದುಕೊಳ್ಳಬೇಕೆಂದು, ಆತನನುನೆಗೆ ಬಂದು, ಎಂದಿನಂತೆ ಅಸ್ವಸ್ಥನಾಗಿ