ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೬೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬vu ಭುವನ ಯಾಮಿನೀ ವಿನೋದ ವಿಂಚಿ, ನಾನು ಬಹಳವಾಗಿ ವ್ಯಸನಪಡುವೆನು. ನಿನ್ನಲ್ಲಿ ನನಗುಂಟಾದ ಮೋಹ ವಶದಿಂದ ನನ್ನ ಹಸ್ತಾಂಗುಳಿಯಲ್ಲಿ ಮುದ್ರಿತವಾಗಿದ್ದ ಮುದಿ ಕೆಯನ್ನು ನಿನಗೆ ಕೊಟ್ಟು ನಿನ್ನ ಹಸ್ತಮುದ್ರಿಕೆಯನ್ನು ನಾನು ಪರಿಗ್ರಹಿಸಿದುದು ನಿನಗೆ ಚೆನ್ನಾಗಿ ಜ್ಞಾಪಕವಿರಬಹುದು, ಆ ಉಂಗುರವನ್ನು ಈಗ ಕಾಗದದ ಜೊತೆ ಸುದ್ದಿ ಕಳುಹುತಿರುವೆನು. ನಿನಗೆ ನನ್ನ ಮೇಲೆ ಉಂಟಾಗಿರುವ ಮೋಹವನ್ನು ಸೂಚಿಸುವುದಕ್ಕಾಗಿ, ಅದನ್ನು ಮರಳಿ ನನ್ನ ಬಳಿಗೆ ಕಳು ಹಿಸಿಕೊಟ್ಟುದೇ ಆದರೆ ಆತನು ಭೂಲೋಕದಲ್ಲಿ ವಾಸಮಾಡಿಕೊಂಡಿರು ವನು. ಅದು ಆತನಿಗೆ ಸಂತೋಷಕರವಾದುದೇ ಹೌದು, ಇಲ್ಲವಾದರೆ ನಿಮ್ಮನ್ನು ಅಗಲಿರಲಾರದ ವಿರಹದಿಂದ ಮರಣವನ್ನು ಹೊಂದುವುದರಲಾನ ಸಂದೇಹವೂ ಇಲ್ಲ. ಅಂತಹ ಮರಣವನ್ನು ನಾನು ಬಹು ಸಂತೋಷದಿಂದ ಒರಮಾಡಿಕೊಳ್ಳುವುದಕ್ಕೆ ನಾನು ಸಿದ್ಧನಾಗಿರುವೆನು, ಸಿನಿಂದ ಬರುವದ ತುತರವನ್ನು ಎದುರುನೋಡುತ್ತಾ, ಆತನು ನಿನ್ನ ಅತಃಪುರದಬಾಗಿಲಲ್ಲಿ ನಿಂತುಕೊಂಡಿರುವನೆಂದು ಬರೆದು, ಆ ಉಂಗುರವನ್ನು ನಪುಂಸಕಸವಾರನು ಕಾಣದಂತೆ ಲಕೋಟೆಯಲ್ಲಿ ಹಾಕಿ ಆಗದವನ್ನು ಮಡಿಸಿ ಮುದ್ರೆ ಹಾಕಿ, ಕಾಗದವನ್ನು ಮುಡಿಸಿ ಮುಂದೆ ಹಾಕಿ, ಚಾರಕನ ಕೈಗೆ ಕೊಟ್ಟುಇಗೊ ಈ ಕಾಗದವನ್ನು ರಾಜಪುತ್ರಿಯು ನೋಡಿದಕತಲೇ ತನ್ನ ವ್ಯಾಧಿಯನ್ನು ಹೋಗಲಾಡಿಸಿಕೊಂಡು ಸಂಸ್ಥಳಾ ಗುವಳು. ಆದುವರಿದ ಭೂತಭವಿಷ್ಯದರ್ತದಾನದ ಕಾಲದಲ್ಲಿನ ವೈದ್ಯರು ಗಳಲ್ಲಿ ನಾನೇ ವಿವೇಕಶಾಲಿಯೆಂದು ನೀನು ಸರ್ವರೊಡನೆಯೂ ಹೇಳಿತಕ್ಕನ ನಾಗಂದು ನುಡಿದು ಇಂತೆಂದು ಹೇಳಿ, ನರರಜಾದಿಯು ಬೆಳಗಾದಕೂಡಲೇ ಕಥೆಯನ: ಮರಳಿ ಮರ.ದಿನ ಬೆಳಗಿನ ಜಾವದಲ್ಲಿ ತನ್ನ ಪ್ರೀತಿ ವಾತ್ರ ಲಗಳನ್ನು ಸಂಪಾದಿಸಿಕೊಂಡಿರುವ ಸುಲ್ತಾನರನ್ನು ಕುರಿತು, ಇಂತುದು ವಚಿಸಲಾರಂಭಿಸಿದಳು.