ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೭೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭.bಬ ಯವನ ಯಾಮಿನೀ ಏನೋದ ಎಂಬ, ೨೩೧ ನೆಯ ರಾತ್ರಿ ಕಥೆ. ಸುಲ್ತಾನರೇ ! ಬಹದರನು ರಾಜಪುತ್ರನನ್ನು ಹಜಾರಕ್ಕೆ ಕರೆದುಕೊಂಡುಹೋಗಿ ಅಯಾ ! ನೀನು ನನ್ನ ಮನೆಯ ಬೀಗವನ್ನೂ ಡೆದು ಅತಿಕ ಮರೀತಿಯಿಂದ ಹೇಗೆ ಪ ವೇಶಮಾಡಿದೆ. ಇಂತಹ ತಪ್ಪನ್ನು ನೀನು ಮಾಡಬಹುದೆ ? ಎಂದು ಹೇಳಲು ರಾಜಪುತ್ರನು ವಿನಯವಂತನಾಗಿ ಆ ಸರದಾರನನ್ನು ಕುರಿತು ತನ್ನ ವೃತ್ತಾಂತವನ್ನು ಪರದೇಶಸ್ಥರ ಭಕ್ತಿ ವಿಶ್ವಾಸವುಳ ನಿನ್ನಲ್ಲಿ ನಿವೇದಿಸಬೇಕೆಂದಿರುವೆನು, ಅದನ್ನು ದಯ ಮಾಡಿ ನೀನು ಕೇಳಬೇಕೆಂದು ಹೇಳಿ ಸ್ವಲ್ಪವೂ ಮರೆಮಾಜದ ತನ್ನ ಸರ ಚಾರಿತ್ರವನ್ನು ಹೇಳಿ ತಾನು ಬೀಗವನ್ನು ನೋಡಿ ಸುಮ್ಮನಿದ್ದರೂ ಈ ನಾಯಿಕಾಮಣಿಯು ಧೈರ್ಯದಿಂದದನ್ನು ಒಡೆದು ತನ್ನನ್ನು ಒಳಕ್ಕೆ ಕರೆದುತಂದುದರಿಂದ ಬಲಾತ್ಕಾರವಾದ ಮೋಹದಿಂದ ತಾನಿಂತು ವರ್ತಿಸು ತಿದ್ದನೆಂದು ಹೇಳಲು ಪರದೇಶಸ್ಯರಾಗಿದ್ದು ಸ್ನಾನಭ |ಷ್ಯರಾಗಿ ಬಂದ ಬಡವಾಯಿಗಳಲ್ಲಿ ಬಹು ಧಾರಾಳವನ್ನು ತೋರಿಸತಕ್ಕನಾದ ಬಸದರನು ಆ ರಾಜಪುತ್ರನನ್ನು ಕುರಿತು ಅಯಾ ! ನೀನೂ, ನಿನ್ನ ನಾಯಕೆಯ, ಸುಖಕರವಾದ ಸಂತ್ರಸಕಾಲದಲ್ಲಿರುವಾಗ ನಾನು ನಿರ್ವಿವ ವನ್ನು ಮಾಡ ಬೇಕಂಬ ಅಭಿಲಾಷೆಯನ್ನು ಹೊಂದಿದವನಲ್ಲ. ಆದರೆ ನಾನು ಮತ್ತೊಂದು ಮನೆಯಲ್ಲಿ ವಾಸ ಮಾಡುತ್ತಿರುವ ಈ ಮನೆಗೆ ಸ್ವಂತಗಾರನಾಗಿರುವೆನು, ಆದುದರಿಂದ ನೀನು ಎಂದಿನಂತೆ ಈ ನಾಯಿಕಾಮಣಿಯಲ್ಲಿ ಲೋಲನಾಗಿದ್ದು ಕಾಲವನ್ನು ಕಳೆಯುತ್ತಿರು. ನಾನು ನಿನ್ನ ಚಾರಕನ ವೇಷವನ್ನು ಹಾಕಿಕೊಂಡು ಬರುವೆನು. ನಂತರ ಬರುವುದಕ್ಕೆ ತಕ್ಕ ಹೊತ್ತಾಯಿತೆಂದು ನೀನು ನನ್ನನ್ನು ದಂಡಿಸು. ಇದ ಕಾಗಿ ನೀನು ಸ್ವಲ್ಪವೂ ಹಿಂದೆಗೆಯಬೇಡವೆಂದು ಹೇಳಲು, ರಾಜಪುತ್ರ ನಾದ ಅಸ್ದ ನು ಆತನು ಹೇಳಿದ ಮಾತಿನಂತೆ ನಡೆಯಲು, ಮನಸ್ಸಿಲ್ಲ ದವನಾದರೂ, ಬಲಾತ್ಕಾರದಿಂದ ಆಕೆಯ ಬಳಿಗೆ ಹೋಗಿ ಸರವಾಗಿ ಮಾತ ನಾಡುತ್ತ ವಿನೋದವಾಗಿ ಭಕ್ಷಿಸಿ, ಮಧುಬಿನವಾದನಂತರ ಉಭಯತ್ರರೂ ಏಕೀಭಾವದಿಂದ ಅಂಗಗಳಲ್ಲಿ ಪ್ರತ್ಯಂಗಗಳನ್ನು ಅನುಗೊಳಿಸಿ ಸಂತೋಷ ದಿಂದ ಸುಖವನ್ನು ಅನುಭವಿಸಿದರು. ಇಂತು ಆ ನಾಯಿಜಾನಾಯಕಿಯರ