ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

( || - 21 -

43. ಕಲೆಗಳ ಧಾತ್ವಾಶಯಾಂತರಸ್ಥಸ್ತು ಯಃ ಕ್ಲೇದಸ್ತ್ವಧಿತಿಷ್ಠತಿ | ದೇಹೋ ವಿವರಣ ಷ್ಮಣಾ ವಿಪಕ್ವಶ್ಚ ಸಾ ಕಲೇತ್ಯಭಿಧೀಯತೇ || (ಶಾ. 13.)

ರಸಾದಿ ಧಾತುಗಳು ಇರುವ ಸ್ಥಾನಗಳ ಒಳಗೆ ದೇಹದ ಉಷ್ಣತೆಯಿಂದ ಪಕ್ವವಾದ ಯಾವ ದ್ರವ ಇರುತ್ತದೋ, ಅದಕ್ಕೆ ಕಲಾ ಎಂಬ ಹೆಸರು.

ಷರಾ 'ವಿಪಕ್ವೋಯ' ಎಂಬ ಪಾರವಿದೆ ಅದು ಸರಿ ಕಾಣುವದಿಲ್ಲ

44. ಕಲೆಗಳ ಕಲಾಃ ಖಲ್ವಪಿ ಸಪ್ತ ಸಂಭವಂತಿ ಧಾತ್ವಾಶಯಾಂತರಮರ್ರ್ಯಾದಾಃ ಸಂಖ್ಯೆ(ಸು. 318.)

ಧಾತುಗಳ ಸ್ಥಾನಗಳೊಳಗಡಗಿರುವ ಕಲೆಗಳು ಸಹ ಏಳಾಗಿ ವಿಭಾಗಿಸಲ್ಪಟ್ಟವೆ. 

45. ಯಧಾ ಹಿ ಸಾರಃ ಕಾಷ್ಠೇಷು ಛಿದ್ಯಮಾನೇಷು ದೃಶ್ಯತೇ | ತಧಾ ಧಾತುರ್ಹಿ ಮಾಂಸೇಷು ಛಿದ್ಯಮಾನೇಷು ದೃಶ್ಯತೇ || ಕಲೆಗಳ ಸ್ಥಾನ ವ ರೂಪ ಸ್ನಾಯುಭಿಶ್ವಪ್ರತಿಚ್ಛನ್ನಾನ್‌ ಸಂತತಾಂಶ್ಚ ಜರಾಯುಣಾ | ಶ್ಲೇಷ್ಮಣಾ ವೇಷ್ಟಿತಾಂಶ್ಚಾಪಿ ಕಲಾಭಾಗಾಂಸ್ತು ತಾನ್ ವಿದುಃ || (ಸು. 318.)

ಒಡೆಯಲ್ಪಡುವ ಕಟ್ಟಿಗೆತುಂಡುಗಳಲ್ಲಿ ತಿರುಳು ಕಾಣುವಂತೆ, ಮಾಂಸಖಂಡಗಳನ್ನು ಕೊಯ್ಯುವಾಗ್ಗೆ ಅವುಗಳಲ್ಲಿ ಧಾತುವು ಕಾಣುತ್ತದೆ. ಆಯಾ ಧಾತುವಿನ ಕಲೆಯು ನರ ಗಳಿಂದ ಮುಚ್ಚಲ್ಪಟ್ಟು, ಜರಾಯುವಿನಿಂದ ವ್ಯಾಪಿಸಲ್ಪಟ್ಟು ಮತ್ತು ಕಫದಿಂದ ಸುತ್ತಲ್ಪಟ್ಟು ಇರುತ್ತದೆಂತ ತಿಳಿದಿದ್ದಾರೆ.

46. ತಾಸಾಂ ಪ್ರಧಮಾ ಮಾಂಸಧರಾ ನಾಮ | ಯಸ್ಯಾಂ ಮಾಂಸ ಮಾಂಸಧರಾ ಸಿರಾಸ್ನಾಯು- ಧಮನೀ- ಸ್ರೋತಸಾಂ ಪ್ರತಾನಾ ಭವಂತಿ | ಎಂಬ ಪ್ರಥಮ ಯಧಾ ಬಿಸ-ಮೃಣಾಲಾನಿ ವಿವರ್ಧಂತೇ ಸಮಂತತಃ | ಕಲೆ ಭೂಮೌ ಪಂಕೋದಕಸ್ಥಾನಿ ತಧಾ ಮಾಂಸೇ ಸಿರಾದಯಃ 11 (ಸು. 319.)

ಕಲೆಗಳಲ್ಲಿ 1ನೇದು ಮಾಂಸಧರಾ (ಮಾಂಸಾಧಾರವಾದದ್ದು) ಎಂಬ ಹೆಸರಿನದು. ಅದರಲ್ಲಿ ಸಿರಾನಾಳಗಳು, ನರಗಳು, ಧಮನಿಗಳು,  ಸ್ರೋತಸ್ಸುಗಳು ಸಹ ಬೆಳೆಯುತ್ತವೆ. ಭೂಮಿಯಲ್ಲಿ ಕೆಸರುನೀರಿನಲ್ಲಿರುವ ನೈದಿಲೆಯ ಮತ್ತು ಕಮಲದ ದಂಟುಗಳು ಹ್ಯಾಗೆ ಎಲ್ಲಾ ಕಡೆಗೆ ಹಬ್ಬಿ ವೃದ್ಧಿಯಾಗುತ್ತವೋ ಹಾಗೆಯೇ ಮಾಂಸದಲ್ಲಿರುವ ಸಿರಾನಾಳಾದಿಗಳು ಬೆಳೆಯುತ್ತವೆ.

47.ದ್ವಿತೀಯಾ ರಕ್ತಧರಾ ನಾಮ | ಮಾಂಸಸ್ಯಾಭ್ಯಂತರತಃ ತಸ್ಯಾಂ ರಕ್ತಧರಾ ಶೋಣಿತಂ ವಿಶೇಷತತ್ವ ಸಿರಾಸು ಯಕೃತ್ ಪ್ಲೀಹ್ನೋಶ್ಚ ಭವತಿ | ಎಂಬ 2ನೇ ಕಲೆ (ಸು. 319).

ಎರಡನೇದು ರಕ್ತಧರಾ (ರಕ್ತಾಧಾರವಾದದ್ದು) ಎಂಬ ಹೆಸರಿನದು. ಮಾಂಸಖಂಡಗಳ ಒಳಗೆ ಇರುತ್ತದೆ. ಮತ್ತು ಅದರಲ್ಲಿ, ಮುಖ್ಯವಾಗಿ ಪಿತ್ತಕೋಶ ಮತ್ತು ಪ್ಲೀಹಗಳಲ್ಲಿರುವ ನಾಳಗಳಲ್ಲಿ, ರಕ್ತವು ಉಂಟಾಗುತ್ತದೆ.