ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಇ 11. -36-

ಪಿತ್ತ, ಕಫ, ರಕ್ತವಾಹಿ ಸಿರಾನಾಳಗಳ ಸಂಖ್ಯಾವಿಭಾಗವು ಇದೇ ಪ್ರಕಾರ. ಆದರೆ ವಿಶೇಷವೇನಂದರೆ ಪಿತ್ತವಾಹಿ ಸಿರೆಗಳು ಕಣ್ಣುಗಳಲ್ಲಿ 10, ಮತ್ತು ಕಿವಿಗಳಲ್ಲಿ 2, ಹೀಗೆಯೇ ರಕ್ತವಾಹಿ ಮತ್ತು ಕಫವಾಹಿಗಳು ವಾಯುವಿನ ಕೆಲಸ

83. ಕ್ರಿಯಾಣಾಮಪ್ರತೀಘಾತಮಮೋಹಂ ಬುದ್ದಿ ಕರ್ಮಣಾಂ | ಸಿರೆಗಳಲ್ಲಿಯ ಕರೋತ್ಯನ್ಯಾನ್ ಗುಣಾಂಶ್ಚಾಪಿ ಸ್ವಾಃ ಸಿರಾಃ ಪವನಶ್ವರನ್ || (ಸು. 347.)

ವಾಯುವು ತನ್ನ ಸಿರೆಗಳಲ್ಲಿ ಸಂಚರಿಸಿ ಶರೀರದ ಕೆಲಸಗಳನ್ನು ತಡೆಯಿಲ್ಲದೆ ನಡಿಸೋಣ, ಬುದ್ದಿ ಕರ್ಮಗಳನ್ನು ಸ್ವಚ್ಛವಿರಿಸೋಣ ಮತ್ತು ಬೇರೆ ಗುಣಗಳನ್ನು ಮಾಡುತ್ತದೆ.

84. ಭ್ರಾಜಿಷ್ಣು ತಾಮನ್ನರುಚಿಮದೀಪ್ತಿಮರೋಗತಾಂ | ಸಿರೆಗಳಲ್ಲಿಯ ಸಂಸರ್ಪತ್ ಸ್ವಾಃ ಸಿರಾಃ ಪಿತ್ತಂ ಕುರ್ಯಾಚ್ಚಾನ್ಯಾನ್ಗುಣಾನಪಿ || ಪಿತ್ತದ ಕಲಸ (ಸು. 347.)

ಪಿತ್ತವು ತನ್ನ ಸಿರೆಗಳಲ್ಲಿ ಹರಿದು, ಶೋಭೆ, ಅನ್ನ ರುಚಿ, ಅಗ್ನಿಯ ಚುರುಕು, ರೋಗ ಇಲ್ಲದಿರೋಣ, ಇವುಗಳನ್ನು ಮತ್ತು ಬೇರೆ ಗುಣಗಳನ್ನು ಮಾಡುತ್ತದೆ.

85. ಸ್ನೇಹಮಂಗೇಷು ಸಂಧೀನಾಂ ಸ್ಧೈರ್ಯಂ ಬಲಮುದೀರ್ಣತಾಂ | ಸಿರೆಗಳಲ್ಲಿಯ ಕರೋತ್ಯನ್ಯಾನ್ಗುಣಾಂಶ್ಚಾಪಿ ಬಲಾಸಃ ಸ್ವಾಃ ಸಿರಾಶ್ಚರನ್|| ಕಫದ ಕೆಲಸ

(ಸು.347.) 

ಕಫವು ತನ್ನ ಸಿರೆಗಳಲ್ಲಿ ಸಂಚರಿಸಿ, ಅಂಗಗಳಲ್ಲಿ ಪಸೆ, ಸಂದುಗಳ. ದಾರ್ಢಢ್ಯ , ಬಲ, ಪುಷ್ಟಿ, ಇವುಗಳನ್ನು ಮತ್ತು ಬೇರೆ ಗುಣಗಳನ್ನು ಮಾಡುತ್ತದೆ.

86. ಧಾತೂನಾಂ ಪೂರಣಂ ವರ್ಣಂ ಸ್ಪರ್ಶಜ್ಞಾನವಸಂಶಯಂ | ಸಿರೆಗಳಲ್ಲಿಯ ಸ್ವಾಃ ಸಿರಾಃ ಸಂಚರದ್ರಕ್ತತಂ ಕುರಾಚ್ಚಾನ್ಯಾನ್ಗುಣಾನಪಿ || ರಕ್ತದ ಕಲಸ

(ಸು. 347.) 

ರಕ್ತವು ತನ್ನ ಸಿರೆಗಳಲ್ಲಿ ಸಂಚರಿಸಿ, ಧಾತುಗಳನ್ನು ಪೂರ್ಣ ಮಾಡೋಣ, ವರ್ಣ, ಸ್ಪರ್ಶಜ್ಞಾನ ಇವು ಮತ್ತು ಬೇರೆ ಗುಣಗಳನ್ನು ನಿಶ್ಚಯವಾಗಿ ಮಾಡುತ್ತದೆ.

87. ವಾತ, ಪಿತ್ತ, ಕಫ, ನ ಹಿ ವಾತಂ ಸಿರಾಃ ಕಾಶ್ಚಿನ್ನ ಪಿತ್ತಂ ಕೇವಲಂ ತಧಾ | ರಕ್ತಗಳ ಸಿರೆಗಳು ಬೇರೆಬೇರೆಯಾಗಿ ಶ್ಲೇಷ್ಮಾಣಂ ವಾ ವಹಂತ್ಯೇತಾ ಅತಃ ಸರ್ವವಹಾಃ ಸ್ಮೃತಾಃ || ರುವದಿಲ್ಲ (ಸು. 347.)

ಯಾವ ಸಿರಾನಾಳಗಳಾದರೂ ಬರೇ ವಾತವನ್ನು ಅಧವಾ ಬರೇ ಪಿತ್ತವನ್ನು ಅಧವಾ ಬರೇ ಕಫವನ್ನು ಹೊತ್ತಿರುವದಿಲ್ಲ. ಆದ್ದರಿಂದ ಸಿರಾನಾಳಗಳು ಸರ್ವವಾಹಿಗಳೆಂತ ಹೇಳಲ್ಪಟ್ಟಿವೆ.