ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 -39- ಆ11

 ಅವುಗಳೊಳಗೆ ಮಾಂಸವರ್ಮಗಳು 11, ಸಿರಾಮರ್ಮಗಳು 41, ನರಮರ್ಮಗಳು 27, ಎಲುಬು ಮರ್ಮಗಳು 8, ಸಂದು ಮರ್ಮಗಳು 20, ಹೀಗೆ 107 ಮರ್ಮಗಳ ವಿವರ.

96.ಆಯಾ ಅಂಗ ವಿಭಾಗಗಳಲ್ಲಿ ನರ ಮರ್ಮಗಳ ಸಂಖ್ಯೆಗಳು:

ತೇಷಾಮೇಕಾದಶೈಕಸ್ಮಿನ್ ಸಕ್‍ಧ್ನಿ ಭವಂತಿ | ಏತೇ ನೇತರ ಸಕ್ಥಿ ಬಾಹೂ ಚ ವ್ಯಾಖ್ಯಾತೌ | ಉದರೋರ ಸೋರ್ದ್ಘಾದಶ | ಚತುರ್ದಶ ಪೃಫ್ಠೀ ಗ್ರೀವಾಂ ಪ್ರತ್ಯೂರ್ಧ್ವಂ ಸಪ್ತತ್ರಿಂಶತ್ | (ಸು 336.)

ಅವುಗಳಲ್ಲಿ ಒಂದೊಂದು ಕಾಲಲ್ಲಿ 11, ಒಂದೊಂದು ಕೈಯಲ್ಲಿ 11, ಹೊಟ್ಟೆ ಮತ್ತು ಎದೆಯಲ್ಲಿ 12, ಬೆನ್ನಿನಲ್ಲಿ 14, ಕುತ್ತಿಗೆಯ ಮೇಲೆ 37.

97.ಕಾಲುಗಳಲ್ಲಿಯ ಮರ್ಮ ಸ್ಥಳಗಳು:

ತತ್ರ ಸಕ್ತಿಮರ್ಮಾಣಿ ಕ್ಷಿಪ್ರ-ತಲಹೃದಯ-ಕೂರ್ಚ-ಕೂರ್ಚಶಿರೋ-ಗುಲ್ಫೇಂದ್ರವಸ್ತಿ-ಜಾನ್ವಾಣ್ಯುರ್ವೀ-ಲೋಹಿತಾಕ್ಷಾಣಿ-ವಿಟಪಂ ಚೇತಿ |
ಏತೇನೇತರಂ ಸಕ್ಥಿ ವ್ಯಾಖ್ಯಾತಂ | (ಸು 337.)
 ಅವುಗಳೊಳಗೆ ಕಾಲು ಮರ್ಮಗಳು ಯಾವವೆಂದರೆ 1 ಕ್ಷಿಪ್ರ (ಉಂಗುಷ್ಠಕ್ಕೂ 1ನೇ ಬೆರಳಿಗೂ ಮಧ್ಯ), 2. ತಲಹೃದಯ (ಮಧ್ಯದ ಬೆರಳಿಗೆ ಸರಿಯಾಗಿ ಪಾದದಡಿ ಮಧ್ಯ), 3. ಕೂರ್ಚ (ಕ್ಷಿಪ್ರದ ಬೆನ್ನಿನಲ್ಲಿ ಇಕ್ಕಡೆ), 4. ಕೂರ್ಚಶಿರಸ್ಸು (ಮಣಿಗಂಟಿನ ಕೆಳಗೆ ಇಕ್ಕಡೆ), 5. ಗುಲ್ಫ, ಅಂದರೆ ಮಣಿಗಂಟು (ಪಾದ ಮತ್ತು ಮೊಣಕಾಲಿನ ಸಂದು), 6. ಇಂದ್ರವಸ್ತಿ, (ಹಿಮ್ಮಡಕ್ಕೆ ಸರಿಯಾಗಿ ಮೊಣಕಾಲಿನ ಮಧ್ಯ), 7 ಜಾನು ಅಂದರೆ ಮೊಣಗಂಟು (ಮೊಣಕಾಲು ಮತ್ತು ತೊಡೆ ಕೂಡುವ ಸಂದು), 8, ಆಣಿ (ಮೊಣಗಂಟಿನ ಮೇಲೆ ಇತ್ತಟ್ಟು ಮೂರು ಅಂಗುಲ), 9. ಉರ್ವೀ (ತೊಡೆ ಮಧ್ಯದಲ್ಲಿ), 10. ಲೋಹಿತಾಕ್ಷ (ಉರ್ವಿ ಮೇಲ್ಗಡೆ ಅಂಡಿನ ಸಂಧಿಗೆ ಕೆಳಗಡೆ ತೊಡೆಯ ಬುಡದಲ್ಲಿ), 11. ವಿಟಪ (ಅಂಡಿಗೂ ಅಂಡಕ್ಕೂ ನಡುವೆ). ಇದೇ ಪ್ರಕಾರ ಇನ್ನೊಂದು ಕಾಲಿನಲ್ಲಿಯೂ ಮರ್ಮಗಳಿವೆ.

98.ಕೈಗಳ ಮರ್ಮಗಳು ಕಾಲಿನಂತಿಯೇ:

ಕಾಲಲ್ಲಿ ಗುಲ್ಫ, ಜಾನು, ವಿಟಪ (5, 7, 11) ಇವುಗಳಲ್ಲಿರುವ ಮರ್ಮಗಳು, -  ಕೈಯಲ್ಲಿ ಮಣಿಬಂಧ (ಮಣಿಗಂಟು) ಕೂರ್ಪರ (ಮೊಳಕೈಗಂಟು), ಕಕ್ಷಧರ (ಕಂಕುಳಿಗೂ ಎದೆಗೂ ನಡುವೆ) ಇವುಗಳಲ್ಲಿರುವವು, ಮಿಕ್ಕ ಕೈ ಮರ್ಮಗಳು ಕಾಲಿನಂತೆಯೇ. ಈ ಪ್ರಕಾರ ಎರಡು ಕೈಗಳಲ್ಲಿ 22 ಮರ್ಮಗಳು'-

(ಬಾಹುಮರ್ಮಾಣಿ ತು ಕ್ಷಿಪ್ರ-ತಲಹೃದಯ-ಕೂರ್ಚ-ಕೂರ್ಚಶಿರೋಮಣಿಬಂಧೇಂದ್ರವಸ್ತಿ-ಕೂರ್ಪರಾಣ್ಯುರ್ವೀ-ಲೋಹಿತಾಕ್ಷಾಣಿ-ಕಕ್ಷಧರಂ ಚೇತಿ |) (ಸು. 337.)

99.ಹೊಟ್ಟೆ ಮತ್ತು ಎದೆಯ ಮರ್ಮಗಳು:

ಉದರೋರಸಸ್ತು | ಗುದವಸ್ತಿನಾಭಿಹೃದಯಸ್ತನಮೂಲ

ಸ್ತನರೋಹಿತಾಪಲಾಪಾನ್ಯಪಸ್ತಂಭೌ ಚೇತಿ | (ಸು. 337.)