ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 47 - ಆ 1f ಆಹಾರವು ಪ್ರಾಣವಾಯುವಿನ ಬಲದಿಂದ ಪ್ರಧಮತಃ ಆಮಾಶಯಕ್ಕೆ ಹೋಗುತ್ತದೆ. ಅದು ಷಡ್ರಸಗಳಿಂದ ಕೂಡಿದುದಾಗಿದ್ದರೂ, ಅಲ್ಲಿ ಸೀಯಾಗುತ್ತದೆ ಮತ್ತು ನೊರೆಯ ರೂಪವನ್ನು ಹೊಂದುತ್ತದೆ. ಅನಂತರ ಪಾಚಕಪಿತ್ತದಿಂದ ಅತಿಯಾಗಿ ಕಾಯಿಸಲ್ಪಟ್ಟರೆ ಹುಳಿಯಾಗುತ್ತದೆ. ಅನಂತರ ಸಮಾನವಾಯುವಿನ ಬಲದಿಂದ ಗ್ರಹಣಿಗೆ ಹೋಗುತ್ತದೆ. ಆ ಗ್ರಹಣೀ ಎಂಬಲ್ಲಿ ಉದರಾಗ್ನಿಯಿಂದ ಪಕ್ವವಾಗಿ, ಖಾರರುಚಿಯುಳ್ಳದ್ದಾಗುತ್ತದೆ. ಸರಿಯಾಗಿ ಪಕ್ವವಾದರೆ, ರಸವಾಗಿ ಪರಿಣಮಿಸುವದು. ಪಕ್ವವಾಗದೆ ಹೋದರೆ, ಆಮವುಂಟಾಗುತ್ತದೆ. ಆ ರಸವು ಅಗ್ನಿ ಬಲದಿಂದ ಪುನಃ ಸೀಯಾಗಿ ಮತ್ತು ಜಿಡ್ಡುಳ್ಳ ಸ್ವಭಾವದ್ದಾಗಿ ಪುಷ್ಟಿ ಮಾಡುತ್ತದೆ. ಪಕ್ವಶಯಕ್ಕೂ ಆಮಾಶಯಕ್ಕೂ ಮಧ್ಯ ಇರುವ ಆ ಕಲೆಯು ಪಿತ್ತಧರಾ ಎಂತ ಪ್ರಸಿದ್ದ ವಾಗಿದೆ. ಅದಕ್ಕೆ ಗ್ರಹಣಿ ಎಂತ ಕರೆಯುತ್ತಾರೆ ಸರಿಯಾಗಿ ಪಕ್ವವಾದ ರಸವು ಅಮೃತ ಸಮಾನವಾಗಿ ಸಮಸ್ತ ಧಾತುಗಳನ್ನು ಪೋಷಿಸುತ್ತದೆ ಆದರೆ ಮಂದಾಗ್ನಿದೆಸೆಯಿಂದ ವ್ಯತಿ ರಿಕ್ತವಾಗಿ ಪಕ್ವವಾದ ರಸವು ಖಾರ ಅಧವಾ ಹುಳಿಯಾಗುವದು, ಅಧವಾ ವಿಷರೂಪವಾಗು ತ್ತದೆ, ಅಥವಾ ಅನೇಕ ರೋಗಗಳನ್ನುಂಟುಮಾಡುತ್ತದೆ. ಆಹಾರದ ಸಾರವೇ ರಸ ಎಂಬದು, ಸಾರ ಹೋಗಿ ಉಳಿದದ್ದು ದ್ರವರೂಪವಾದ ಮಲ, ದ್ರವರೂಪವಾದ ಮಲದ ನೀರು ಸಿರಾನಾಳ ಗಳ ಮುಖವಾಗಿ ವಸ್ತಿಯನ್ನು ಹೊಂದಿ ಮೂತ್ರರೂಪವಾಗುತ್ತದೆ. ಅದರ ಮಡ್ಡೇ ಮಲ ಎಂಬದು. ಅದು ಪ‌ಕ್ವಾಶಯದಲ್ಲಿ ನಿಂತು ಅಪಾನವಾಯುವಿನ ಬಲದಿಂದ ಮೂರು ಸುಳಿಗಳುಳ್ಳ ಗುದದ್ವಾರವಾಗಿ ಹೊರಗೆ ಹೋಗುತ್ತದೆ ಆ ಮೂರು ಸುಳಿಗಳ ಹೆಸರು: 1. ಪ್ರವಾಹಿಣೀ, 2, ಸರ್ಜನೀ, 3. ಗ್ರಾಹಿಕಾ, ಆ ರಸವು ಸಮಾನವಾಯುವಿನ ಬಲದಿಂದ ಹೃದಯಕ್ಕೆ ಹೋಗುತ್ತದೆ ಅಲ್ಲಿ ಪಿತ್ತದಿಂದ ಪಕ್ವವಾಗಿ ವರ್ಣ ಬದಲಾದ ಮೇಲೆ, ಅದು ರಕ್ತವೆನಿಸಿ ಕೊಳ್ಳುತ್ತದೆ. ರಕ್ತವು ಶರೀರದ ಸರ್ವ ಕಡೆಯಲ್ಲಿಯೂ ವ್ಯಾಪಿಸಿ ಜೀವಕ್ಕೆ ಉತ್ತಮವಾದ ಆಧಾರವಾಗುತ್ತದೆ. ರಕ್ತವು ಜಿಡ್ಡುಳ್ಳದ್ದಾಗಿಯೂ, ಭಾರವಾಗಿಯೂ, ಸೀಯಾಗಿಯೂ ಇರುತ್ತದೆ. ಪಾಕ ವ್ಯತಿರಿಕ್ತವಾದಲ್ಲಿ ಪಿತ್ತದಂತೆ ಕೆಡಕುಮಾಡುವದು. ಪಿತ್ತದ ಬಿಸಿಯಿಂದ ಪಾಕವಾದ ಹಾಗೆ ರಸಾದಿ ಧಾತುಗಳು ಕ್ರಮವಾಗಿ ಆಗಿ ಒಂದು ತಿಂಗಳ ಸಮಯದಲ್ಲಿ ಶುಕ್ರ ರೂಪವನ್ನು ಹೊಂದುತ್ತವೆ ಹಾಗೆ ಹೆಂಗಸರಲ್ಲಿ ರಜಸ್ಸಾಗುವದಾಗಿರುತ್ತದೆ. 118. ಸುಶ್ರುತ ತತ್ರ ಪಾ0ಚಭೌತಿಕಸೄ ಚತುರ್ವಿಧಸ್ಯ ಷಡ್ರಸಸ್ಯ ದ್ವಿವಿಧವೀರ್ಯ ಸ್ವಾಷ್ಟವಿಧವೀರ್ಯಸ್ಯ ವಾನೇಕಗುಣಸ್ಕೋಪಯುಕ್ತಸ್ಯಾಹಾರಸ್ಯ ಸಮ್ಯಕ್ಷರಿಣತಸ್ಯ ಯಸ್ತೇಜೋಭೂತಃ ಸಾರಃ ಪರಮಸೂಕ್ಷ್ಮಃ ಸ ರಸ ಇತ್ಯುಚ್ಯತೇ | ತಸ್ಯ ಚ ಹೃದಯಂ ಸ್ಥಾನಂ ಸ ಹೃದಯಾಚ್ಚ ತುರ್ವಿಂಶತಿಂ ಧಮನೀರನುಪ್ರವಿಶೋೄಧಗಾ ದಶ ದಶ ಚಾಧೋ ಗಾಮಿನ್ಯಶ್ವತಸ್ರಸ್ತಿರ್ಯಗ್ಲಾಃ ಕೃತ್ಸ್ನ0 ಶರೀರಮಹರಹಸ್ತರ್ಪಯತಿ ವರ್ಧಯತಿ ಧಾರಯತಿ ಯಾಪಯತಿ ಜೀವಯತಿ ಚಾದೃಷ್ಟಹೇತುಕೇನ ಕರ್ಮಣಾ | ತಸ್ಯ ಶರೀರಮನುಧಾವರ್ತೋನುಮಾನಾದ್ಗತಿರುಪ ಲಕ್ಷಯಿತವ್ಯಾ ಕ್ಷಯವೃದ್ಧಿವೈಕೃತೈಃ | ತಸ್ಮಿನ್ ಸರ್ವಶರೀರಾವ ಪ್ರಕಾರ