ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 55 - ಆ !! ಯಿಟ್ಟು, ಸ್ನಾಯುಗಳಿಂದ ಕೂಡಿಸಿ ಬಿಗಿಯಲ್ಪಟ್ಟಿರುವದರಿಂದ ಕೋಲು ಒಂದೇ ಎಲುಬಾಗಿ ಕಾಣುವದಲ್ಲದೆ, ಗೊಣಸುಗಳ ಮಧ್ಯ ಒಂದೇ ನಾಳವುಂಟಾಗಿ, ಅದರೊಳಗೆ ನರದ ಮುಖ್ಯ ಹಗ್ಗ ಹೋಗಿ, ತಲೆಯೊಳಗಣ ಮೆದುಳಿಗೆ ಕೂಡುವದು. ಮೇಲಿನ ತದಿಯ ಎರಡು ಎಲುಬಿನ ತುಂಡುಗಳು ತಲೆಯನ್ನೂ ಕೊರಳನ್ನೂ ಬೇಕಾದ ಹಾಗೆ ತಿರುಗಿಸಲಿಕ್ಕೆ ಅನುಕೂಲವಾಗಿ ಇರುತ್ತವೆ. ಮಿಕ್ಕ ತುಂಡುಗಳು ಅಲ್ಪ ಸ್ವಲ್ಪ ಚಲನೆಗೆ ಎಡೆಕೊಡುತ್ತವೆ ತಲೆಯೆಲುಬು ಗಳಲ್ಲಿ ಕೆಳಗಿನ ದವಡೆ ಮಾತ್ರ ಬಿಜಾಗರಿರೂಪದ ಸಂದಿನಲ್ಲಿ ಆಧರಿಸಿದ್ದು, ಚಲನೆಗೆ ಅನು ಕೂಲವಾಗಿರುವದು ಹೊರತು, ಉಳಿದ ಎಲುಬುಗಳೆಲ್ಲಾ ಒಂದಾಗಿ ಬಿಗಿಯಲ್ಪಟ್ಟಿವೆ. ಇದ ರಲ್ಲಿ ಎದುರಲ್ಲಿ ಕಣ್ಣುಗಳಿಗೆ ರಂಧ್ರಗಳು ಅಲ್ಲದೆ, ಬೆನ್ನ ಕೋಲಿನೊಳಗಿನ ನರದ ಹಗ್ಗಕ್ಕೆ ಒಂದು ರಂಧ್ರ ಇರುತ್ತದೆ. ಎದೆಕೊಲೆಲುಬಿನ ಕೆಳಗಿನ ತುದಿಯು ಮದ್ರಸ್ತಿಯಾಗಿರುತ್ತದೆ. ಇದಕ್ಕೆ ಪಕ್ಕದೆಲುಬುಗಳು 12ರಲ್ಲಿ ಮೇಲಿನ ಏಳು ಕೂಡಿಕೊಂಡಿವೆ; ಅನಂತರದ 3 ಪಕ್ಕೆಲುಬು ಗಳು ಅದನ್ನು ಸೇರುವ ಮೊದಲೇ ಒಂದಕ್ಕೊಂದು ಕೂಡಿಕೊಳ್ಳುತ್ತವೆ. ಉಳಿದ ಎರಡು ಎದೆಕೋಲಿಗೆ ಮುಟ್ಟಿದೆ, ಮಧ್ಯದಲ್ಲಿಯೇ ಅಂತ್ಯವಾಗಿ, ತೇಲಿ ನಿಂತ ಹಾಗೆ ಇವೆ. ಇವು ಹನ್ನೆ ರಡೂ ಹಿಂದೆ ಬೆನ್ನ ಕೋಲಿಗೆ ಕೂಡಿವೆ. ಸೊಂಟದಲ್ಲಿ ಅಂಡುಗಳ ಎರಡು ಎಲುಬುಗಳು ಮುಂದಿನಿಂದ ಒಂದಕ್ಕೊಂದು ಕೂಡಿವೆ; ಹಿಂದಿನ ಬೆನ್ನ ಕೋಲಿನ (9 ತುಂಡುಗಳಿಂದ ಕೂಡಿರುವ) ಕಡೇ ತುಂಡುಗಳೆರಡಕ್ಕೆ ಇಟ್ಟು ಕೂಡುತ್ತವೆ. ಈ ಕೂಟಿನ ಮೇಲ್ಬದಿಯು ಹೊಟ್ಟೆಯ ಕೆಳಭಾಗಕ್ಕೆ ಆಧಾರವಾಗಿದೆ. ಹೊರಬದಿ ಇಟ್ಟು ತೊಡೆ ಎಲುಬುಸಂದು ಗಳು ಇರುತ್ತವೆ. _124. ದೇಹದ ಮುಂಡವು ಮಾಂಸಖಂಡಗಳಿಂದಲೂ, ಸ್ನಾಯುಗಳಿಂದಲೂ, ಮಾಡ ಲ್ಪಟ್ಟ ಕಮಾನಾಕಾರ (ಕೆಳಮುಖವಾದ ಅರ್ಧಚಂದ್ರಾಕಾರವಾಗಿರುವ ಒಂದು ಹಾಳೆ ಯಿಂದ ಎರಡು ಅಂತಸ್ತುಗಳಾಗಿ ವಿಭಾಗಿಸಲ್ಪಟ್ಟಿದೆ ಈ ಹಾಳೆಗೆ ವಪಾವಹನ ಎಂದು ಹೆಸರು. ಎದುರು ಭಾಗದಲ್ಲಿ ಈ ಹಾಳೆಯ ಮೇಲಿನ ತುದಿಯು ಎದೆಕೋಲಿನ ಕೆಳಗಿನ ತುದಿಗೂ, ಅಲ್ಲಿ ಕೂಡುವ ಪಕ್ಕದೆಲುಬುಗಳ ತುದಿಗಳಿಗೂ ಬಿಗಿಯಲ್ಪಟ್ಟಿದೆ; ಹಿಂಬದಿ. ವಪಾವಹನ - ಕಂಬಗಳ ಹಾಗೆ ಇರುವ ಎರಡು ಬಲವಾದ ಸ್ನಾಯುಗಳಿಂದ ಬೆನ್ನಿನ ಕೋಲೆಲುಬಿಗೂ, ಪಕ್ಕಗಳಲ್ಲಿ, ಕೆಳಗಿನ ಪಕ್ಕೆಲುಬುಗಳಿಗೂ, ವಪಾವಹನವು ಜೋಡಿಸ ಲ್ಪಟ್ಟಿದೆ. ಈ ಹಾಳೆಯಲ್ಲಿ ಅನ್ನನಾಳಕ್ಕೂ, ಕೆಲವು ಧಮನೀಗಳಿಗೂ ಬೇಕಾದಷ್ಟು ಮಾತ್ರ ರಂಧ್ರಗಳಿವೆ. ವಪಾವಹನದ ಮೇಲ್ಗಡೆಯ ಅಂತಸ್ತಿನಲ್ಲಿ ಚೇತನಾಸ್ಥಾನವಾದ ಹೃದಯವೂ, ಶ್ವಾಸಕೋಶಗಳೂ, ಇವುಗಳ ಮೂಲವಾದ ಕಫಾಶಯವೂ ಇರುತ್ತವೆ. ಯಕೃತ್, ಫೀಹ, ಆಮಾಶಯ, ಮುಂತಾದವುಗಳಿಂದ ಕೂಡಿದ ಹೊಟ್ಟೆ ಅಥವಾ ಕೋಷ್ಠವು ವಪಾವಹ ನದ ಕೆಳಗೆ ಇರುತ್ತದೆ. 125. ಉಚ್ಚಾಸಕಾಲದಲ್ಲಿ ಈ ವಷಾವಹನದ ಮಧ್ಯಭಾಗವು ತಗ್ಗುವದರಿಂದ ಕಮಾನು ಕಡಿಮೆಯಾಗುತ್ತದೆ; ಎದೆಯ ಕೋಲೆಲುಬಿನ ತುದಿ ಸ್ವಲ್ಪ ಎದುರು ಬರುತ್ತದೆ; ಮತ್ತು ಶ್ವಾಸಕೋತ ಪಕ್ಕದ ಎಲುಬುಗಳು ಸ್ವಲ್ಪ ಮೇಲಕ್ಕೆ ಹೋಗುತ್ತವೆ. ಮಾಂಸಖಂಡಗಳ