ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಡಿ - 59 - ಆ 1, ಪ್ರವಹಿಸುತ್ತದೆ. (ಯಾತದ ಮರಿಗೆಯ ನೀರು, ತುಂಬಿದ ತೋಡಿಗೆ ಸೇರಿದಷ್ಟಕ್ಕೆ ಹ್ಯಾಗೆ ತೆರೆಯಾಗಿ ಮುಂದೆ ಮುಂದೆ ಹೋಗುತ್ತದೋ, ಹಾಗೆ) ಒಂದೊಂದು ಸರ್ತಿ ಧಮನಿಗೆ ಸೇರಿದ ರಕ್ತವು ಒಂದೊಂದು ತೆರೆಯ ರೂಪವಾಗಿ ಮುಂದೆ ಪ್ರವಾಹವಾಗುತ್ತದೆ. ಇದೇ ನಾಡಿ ಯೆಂಬದು. ಹೃದಯದಿಂದ ರಕ್ತವನ್ನು ಮುಂದೆ ಸಾಗಿಸುವ ಧಮನಿಗಳು ಮತ್ತು ಅವುಗಳ ಎಗಲುಗಳು ಎಲ್ಲೆಲ್ಲಾ ಇರುತ್ತವೋ, ಅಲ್ಲೆಲ್ಲಾ ನಾಡಿಗಳು ಕಾಣುವವು. ಆದರೆ ಬಹುಸೂಕ್ಷ್ಮವಾದ ಕೊನೆಗಳಲ್ಲಿ ನಾಡಿಯು ಸ್ಪರ್ಶವಾಗದು. (ಹೃದಯದ ಬಲಬದಿಯ ಮೇಲಿನ ಅಂಕಣಕ್ಕೆ ಎರಡು ಮುಖ್ಯವಾದ ರಕ್ತನಾಳಗಳು ಸೇರುತ್ತವೆಂತ ಹೇಳಿದೆಯಷ್ಟೆ. ಹಿಂದೂ ವೈದ್ಯಗ್ರಂಧಗಳಲ್ಲಿ ಕಾಣುವ ಊರ್ಧ್ವಗವಾದ ಹತ್ತು ಧಮನಿಗಳಲ್ಲಿ ವಾತ, ಪಿತ್ತ, ಕಫ, ರಸ, ರಕ್ತ ಇವುಗಳ ಒಂದೊಂದಕ್ಕೆ ಎರಡರ ಪ್ರಕಾರ ಹತ್ತು ಎಂತಲೂ ಈ ಧಾತುಗಳಿಗೆಲ್ಲಾ ಪ್ರತಿಪತ್ಯೇಕ ನಾಳಗಳಿಲ್ಲದೆ ಒಂದರಲ್ಲಿಯೇ ಎಲ್ಲವೂ ಇರುತ್ತವೆಂತಲೂ, ಹೇಳಿರುವದರಿಂದ ಪಾಶ್ಚಾತ್ಯ ಶೋಧನೆಯಲ್ಲಿ ಕಾಣುವ (supenor Venacava and infenor Vena Cava) 'ಸುಪೀರಿಯರ್ ವೆನಕಾವಾ' ಮತ್ತು 'ಇನ್ ಫೀರಿಯರ್ ವೆನಕಾವಾ' ಎಂಬ ಎರಡು ರಕ್ತನಾಳಗಳೇ ಹತ್ತು ಧಮನಿಗಳಾಗಿ ವರ್ಣಿಸಲ್ಪಟ್ಟಿರಬಹುದು.) ಸಾಮಾನ್ಯವಾಗಿ ಮನುಷ್ಯನ ನಾಡಿಯು ಮಿನಿಟಿಗ 72 ಇರುವದು. ವಯೋಭೇದ ಗಳಿಂದಲೂ, ಧಾತುಭೇದಗಳಿಂದಲೂ, ದೋಷಗಳಿಂದಲೂ, ನಾಡಿಯು ವ್ಯತ್ಯಾಸವಾಗುತ್ತದೆ. ನಾಡಿಯು (ಅಂದರೆ ರಕ್ತದ ತೆರೆಯು) ಒಂದು ಸೆಕುಂದಿಗೆ (ಮಿನಿಟಿನ 6೦ನೇ 1 ಅಂಶದ ಕಾಲ) 30 ಅಡಿ ಪ್ರಕಾರ ಸಂಚರಿಸುವದರಿಂದ, ಹೃದಯದಿಂದ ಕೈ ಮಣಿಗಂಟಿಗೆ ಹೋಗಲಿಕ್ಕೆ 1 ಸೆಕುಂದಿನ 1೦ನೇ 1 ಅಂಶದ ಕಾಲ ಸಾಕಾಗುತ್ತದೆ. ಆದರೆ ರಕ್ತಪ್ರವಾಹವು ಅದಕ್ಕಿಂತ ಮೆಲ್ಲಗಾಗಿರುವದರಿಂದ, ಹೃದಯದಿಂದ ಹೊರಟ ರಕ್ತವೂ ಕೈಮಣಿಗಂಟಿಗೆ ಸೇರುವದಕ್ಕೆ ಸುಮಾರು 5 ಸೆಕುಂದಕಾಲ ಬೇಕಾಗುವದು. ರಕ್ತವು ಪುನಃ ಹೃದಯಕ್ಕೆ ಬರುವ ನಾಳ ಗಳಲ್ಲಿ ನಾಡಿಯ ಬಡತ ಇರುವದಿಲ್ಲ. ಒಬ್ಬ ಮನುಷ್ಯನು ಸಾಧಾರಣವಾಗಿ ಮಿನಿಟಿಗೆ 17 ಅಧವಾ 18 ಸಾರಿ ಶ್ವಾಸ ಬಿಡುತ್ತಾನೆ ಆದರೆ ಇದು ಸಹ ನಾಡಿ ಬಡತದಂತೆ ವ್ಯತ್ಯಾಸವಾಗುತ್ತದೆ. ಒಂದು ಕಪ್ಪೆಯ ಹೃದಯವು ದೇಹದಿಂದ ಕತ್ತರಿಸಿ ಪ್ರತ್ಯೇಕಿಸಲ್ಪಟ್ಟ ಮೇಲೆ, ಒಣಗದ ಹಾಗೆ ಜಾಗ್ರತೆ ತೆಗೆದುಕೊಂಡರೆ, ಕೆಲವು ಘಂಟೆಗಳ ವರೆಗೂ ಬಡೆಯುತ್ತಾ ಇರುವದು. ಇದರಿಂದ ಹೃದಯಕ್ಕೆ ಮೆದುಳಿನ ಸಹಾಯವು ಅಗತ್ಯವಾದದ್ದಲ್ಲ ಎಂತ ಸ್ಪಷ್ಟವಾಗುತ್ತದೆ. 128 ಬಾಯಿಯೊಳಗೆ ಶ್ವಾಸಕೋಶಕ್ಕೆ ಹೋಗುವ ಶ್ವಾಸಕೊಳಿವೆಯ ದ್ವಾರದ ಹಿಂದ ಕಡೆಯಿಂದ ಅನ್ನನಾಳವು ಅಧವಾ ಅನ್ನವಾಹಿಯು ಪ್ರಾರಂಭವಾಗಿ ಕೆಳಗೆ ಅನ್ನನಾಳ ಹೋಗಿ ಎದೆಯ ಮಧ್ಯದೆಲುಬಿನ ಸ್ವಲ್ಪ ಎಡಕ್ಕೆ ವಪಾವಹನದೊಳಗಿನ ದ್ವಾರದಿಂದ ಆಮಾಶಯಕ್ಕೆ ಕೊಡುತ್ತದೆ 129, ಈ ಆಮಾಶಯವು (ಅನ್ನಕೋಶವು) ವಪಾವಹನದ ಕೆಳಗೆ ಅಡ್ಡವಾಗಿಯೂ, ತೋರವಾಗಿಯೂ, ಒಂದು ಚೀಲದಂತೆ ಕಾಣುವ ಅನ್ನನಾಳದ ಒಂದು ವಿಸ್ ಭಾಗ. (ತೋರ