ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಆ 11 - 66 - ವಾಯುವಿನ ತೆರೆಗಳು 1 ಸೆಕುಂದಿಗೆ 30ಕ್ಕೂ ಕಡಿಮೆಯಾಗಿ ಬಂದರೆ, ಆ ಸ್ವರವು ಮನುಷ್ಯರಿಗೆ ಕೇಳದು. ತಾರಕದಲ್ಲಿ ಸೆಕುಂದಿಗೆ 30,000 ತೆರೆಗಳಂತೆ ಬರುವದರಿಂದ, ಉಂಟಾದ ಶಬ್ದವನ್ನು ಕೂಡ ಕೇಳಲಿಕ್ಕೆ ಸಾಮಧ್ಯವುಳ್ಳವರು ಕೆಲವರು ಇದ್ದರೂ, ಅದಕ್ಕಿಂತ ಬಹು ತಗ್ಗಿನ ಸ್ವರವಾದ ಬಾವಲಿಯ ಕೂಗನ್ನು, ಅಥವಾ ಇಲಿಯ ಕಿರಿಕಿರಿಯನ್ನು ಸಹ ಕೇಳಲಿಕ್ಕೆ ಕೂಡದವರೂ ಇರುವದುಂಟು.

 142. ಬಾಲ್ಯದಲ್ಲಿ 6 ತಿಂಗಳನಂತರ 2½ ವರ್ಷಗಳ ಒಳಗೆ 20 ಹಲ್ಲುಗಳು ಬರುತ್ತವೆ. ಈ ಹಂಗಾಮಿ ಹಲ್ಲುಗಳು 6 ವರ್ಷ ಪ್ರಾಯದನಂತರ 13ನೇ ವರ್ಷದೊಳಗೆ ಬಿದ್ದು ಹೋಗಿ, ಅವುಗಳ ಸ್ಥಾನದಲ್ಲಿ ಹೊಸ ಹಲ್ಲುಗಳು ಬರುತ್ತವೆ. ಅನಂತರ ಬೇರೆ 12 ಹಲ್ಲುಗಳು ಹುಟ್ಟಿ, 21ನೇ ವರ್ಷ ಪ್ರಾಯದೊಳಗೆ 32 ಹಲ್ಲುಗಳು ಭರ್ತಿಯಾಗುತ್ತವೆ. ಪ್ರತಿ ಸಾಲಿನ 16ರಲ್ಲಿ ಎಡಬಲಗಳಲ್ಲಿ ಎಂಟೆಂಟು ಯಧಾಕ್ರಮವಾಗಿ ಒಂದಕ್ಕೊಂದು ಹಬ್ಬಗಳು

ಸದೃಶವಾಗಿವೆ ಪ್ರತಿ ಹಲ್ಲಿಗೆ ತಲೆ, ಕುತ್ತಿಗೆ ಮತ್ತು ಬೇರು, ಎಂಬ 3 ಭಾಗಗಳು ಇವೆ. ಸಿಜಿಯ (ವಸಡಿನ) ಮೇಲಿನ ಭಾಗ, ತಲೆ, ಅದಕ್ಕೆ ಎನೇಮಲ್ ಎಂಬ ಗಟ್ಟಿ ಅಂಟಿನ ಕವಚವಿದೆ. ನಿಚಿಯಲ್ಲಿ ಅಡಗಿರುವ ಭಾಗವು ಕುತ್ತಿಗೆ ಬೇರು ಅಧವಾ ಬೇರುಗಳು ದವಡೆ ಎಲುಬಿನಲ್ಲಿರುವ ಗುಣಿಗಳಲ್ಲಿ ಹುಗಿದಿರುತ್ತವೆ ಹಲ್ಲು ಬೇರೆ ಎಲುಬುಗಳಿಗಿಂತ ಗಟ್ಟಿಯಾಗಿರುತ್ತದೆ. ಅದರೊಳಗಿನ ತಿರುಳಿನಲ್ಲಿ ಸೂಕ್ಷ್ಮವಾದ ರಕ್ತಸಿರೆಗಳು ಮತ್ತು ನರಗಳು ತುಂಬಿರುವವು.

  _143, ನಾಲಿಗೆಯು ಮುಖ್ಯವಾಗಿ ಎರಡು ಸರಿಸಮವಾದ ಮಾಂಸದ ಸಂಯೋಗದಿಂದ ರಚಿತವಾಗಿ, ಎರಡು ಪರೆಗಳಿಂದ ಹೊದಿಸಲ್ಪಟ್ಟ ಅಂಗವಾಗಿದೆ. ಅದು ಉಚ್ಚಾರಕ್ಕೂ, ಅಗಿಯುವದಕ್ಕೂ, ನುಂಗುವದಕ್ಕೂ ಮುಖ್ಯ ಸಹಾಯ ಮಾಡುತ್ತದೆ. ಅದರ ಮೇಲಿನ ಕಫಯುಕ್ತವಾದ ಹೊದಿಕೆಯಲ್ಲಿ ರುಚಿಗೆ ಕಾರಣವಾದ ಸೂಕ್ಷ್ಮವಾದ ಮೊನೆಗಳು (ನಾಲಿಗೆಯ ಮುಳ್ಳು) ಇವ. ಮತ್ತು ಆ ಹೊದಿಕೆಯ ಅಡಿಯಲ್ಲಿ ಎಂಜಲಿನ ಚಿಕ್ಕ ಗ್ರಂಧಿಗಳು ಇವೆ. ಬಾಯಿಯಲ್ಲಿ ಬರತಕ್ಕ ರಸಗಳಿಗೆ ಮೂಲವಾದ ಗ್ರಂಧಿಗಳು ಮುಖ್ಯವಾಗಿ ನಾಲಿಗೆಯ
         ಹಿಂಬದಿಯಲ್ಲಿಯೂ ಬದಿಗಳಲ್ಲಿಯೂ,         
ನಾಲಿಗೆ     ತುದಿಯಲ್ಲಿಯೂ , ತುದಿಯ ಬುಡದ 
         ಎರಡು ಪಕ್ಕಗಳಲ್ಲಿಯೂ ವಿಸ್ತರಿಸಿವೆ. ಇವಲ್ಲದೆ ಪ್ರತಿ ಕಿವಿಯ ಎದುರು ಒಂದೊಂದರಂತೆ ಎರಡು, ಕೆಳಗಿನ ದವಡೆಯ ಅಡಿ ಇತ್ತಟ್ಟು ಒಂದೊಂದರಂತೆ ಎರಡು, ನಾಲಿಗೆಯ ಅಡಿಯಲ್ಲಿ ಒಂದು ಜೋಡು, ಹೀಗೆ ಆರು ದೊಡ್ಡ ಗ್ರಂಧಿಗಳು ಸಹ ಬಾಯಿಯಲ್ಲಿ ಬರುವ ರಸ ಅಧವಾ ಎಂಜಲಿಗೆ ತಮ್ಮ ರಸವನ್ನು ಚಿಕ್ಕನಾಳಗಳ ದ್ವಾರಾ ಕಳುಹಿಸುತ್ತವೆ. ರುಚಿಜ್ಞಾನಕ್ಕೆ ವಸ್ತುವು ಒದ್ದೆ ಯಾಗಿರುವದು ಅಗತ್ಯ; ಆ ಕೆಲಸವನ್ನು ಎಂಜಲು ಮಾಡುತ್ತದೆ; ಮತ್ತು ಹಿಟ್ಟು ಮುಂತಾದವುಗಳ ಜೀರ್ಣಕ್ಕೆ ಎಂಜಲು ಬಹಳ ಉಪ ಯೋಗಕರವಾದದ್ದು. ಬಾಯಿಯೊಳಗೆ ಎಂಜಲು ದಿನ 1ರ 1 ಕುತ್ತಿ*ಯಿಂದ 2 ಕುತ್ತಿ ವರೆಗೆ ಇಳಿಯುತ್ತದೆಂತ ಎಣಿಸಿದ್ದಾರೆ.
  • ಷರಾ 1 ಕುತ್ತಿ=2 ಪೈಂಟ್ (Pint)