- 73 - ಆ III 15. ರಸಾಯನ=ಮುದಿತನವನ್ನೂ ವ್ಯಾಧಿಗಳನ್ನೂ ನಾಶಮಾಡತಕ್ಕದ್ದು. ಉದಾ: ಅಮೃತಬಳ್ಳಿ, ಅಡವೀಕಡಲೆ, ಗುಗ್ಗುಳ ಮತ್ತು ಅಣಿಲೆಕಾಯಿ. (ಪಾಠಾಂತರದಲ್ಲಿ. ಅಣಿಲೆ ಕಾಯಿ, ದಂತಿ, ಗುಗ್ಗುಳ ಮತ್ತು ಶಿಲಾಜತು) (ಭಾ. ಪ್ರ.) 16. ವಾಜೀಕರ=ಸ್ತ್ರೀಯರ ವಿಷಯದಲ್ಲಿ ಹರ್ಷವನ್ನುಂಟುಮಾಡತಕ್ಕದ್ದು. ಉದಾ ಆನೆಕಡೀರು ಆದಿಯಾದ ವರ್ಗ. ಮತ್ತು ನಾಯಿಸೊಣಗಿನ ಬೀಜ. (ಪಾರಾಂತರದಲ್ಲಿ. ಅಶ್ವಗಂಧಿ, ನೆಲತಾಳಿಗಡ್ಡೆ, ಸಕ್ಕರೆ ಮತು ಶತಾವರಿ.) (ಭಾ. ಪ್ರ.) 17. ಶುಕ್ರಲ= ಶುಕ್ರವನ್ನು ವೃದ್ಧಿಮಾಡತಕ್ಕದ್ದು. ಉದಾ ಅಶ್ವಗಂಧಿ, ನೆಲತಾಳಿಗಡ್ಡೆ, ಸಕ್ಕರೆ, ಶತಾವರಿ. (ಪಾರಾಂತರದಲ್ಲಿ ಆನೆಕಡೀರು ಆದಿಯಾದ ವರ್ಗ ಮತ್ತು ನಾಯಿ ಸೊಣಗಿನ ಬೀಜ.) (ಭಾ. ಪ್ರ) ರೇತೋಜನಕ ಮತ್ತು ರೇತಃಪ್ರವರ್ತಕ. ಉದಾ ಹಾಲು, ಉದ್ದುಗಳು, ಗೇರು ಕಾಯಿಪೊಪ್ಪು ಮತ್ತು ಸಣ್ಣನೆಲ್ಲಿ ಶುಕ್ರಪ್ರವರ್ತನಿ- ಉದಾ ಸ್ತ್ರೀ. ಶುಕ್ರರೇಚಕ - ಉದಾ ಗುಳ್ಳದಕಾಯಿ ಶುಕ್ರಸ್ತಂಭನ - ಉದಾ ಚಾಯಿಕಾಯಿ ಶುಕ್ರಕ್ಷಯಕಾರಿ - ಉದಾ ಕಲ್ಲಂಗಡಿ ( ಬಚ್ಚಂಗಾಯಿ). 18. ಸೂಕ್ಷ್ಮ=ದೇಹದೊಳಗಣ ಸೂಕ್ಷ್ಮವಾದ ರಂಧ್ರಗಳೊಳಗೆ ಪ್ರವೇಶಮಾಡ ತಕ್ಕದ್ದು. ಉದಾ ಸೈಂಧವಲವಣ, ಜೇನು, ಕಹಿಬೇವು ಮತ್ತು ಹರಳಣ್ಣೆ. 19. ವ್ಯವಾಯಿ= ಮುಂದಾಗಿ ಇಡೀ ಶರೀರವನ್ನು ವ್ಯಾಪಿಸಿ, ಅನಂತರ ಪಾಕವಾಗು ವಂಧಾದ್ದು. ಉದಾ ಭಂಗಿ ಮತ್ತು ಅಫೀಮು. 20. ವಿಕಾಸಿ= ಧಾತುಗಳಿಂದ ಓಜಸ್ಸನ್ನು ಪ್ರತ್ಯೇಕಿಸಿಬಿಟ್ಟು, ದೇಹದ ಸಂದುಕಟ್ಟುಗಳನ್ನು ಸಡಿಲುಮಾಡತಕ್ಕದ್ದು. ಉದಾ. ಅಡಿಕೆ ಮತ್ತು ಕೋದ್ರವ ಧಾನ್ಯ (ಹಾರಕ?). 21. ಮದಕಾರಿ= ತಮೋಗುಣ ಪ್ರಧಾನವಾಗಿ, ಬುದ್ದಿಯನ್ನು ಕೆಡಿಸತಕ್ಕದ್ದು. ಉದಾ. ಮದ್ಯ, ಸಾರಾಯಿ ಮುಂತಾದದ್ದು 22. ವಿಷ = ವ್ಯವಾಯಿ, ವಿಕಾಸಿ, ಮದಕಾರಿ, ಕಫಛೇದಕರ, ಆಗ್ನೇಯ (ಸುಡುವ) ಯೋಗವಾಹಿ (ಜೊತೆದ್ರವ್ಯದ ಗುಣವನ್ನು ವಹಿಸಿಕೊಳ್ಳುವ) ಮತ್ತು ಪ್ರಾಣಹರ ಈ ಗುಣಗಳಿಂದ ಕೂಡಿದ್ದು. 23. ಪ್ರಮಾಧಿ= ತನ್ನ ವೀರ್ಯದಿಂದ ಸ್ರೋತಸ್ಸುಗಳೊಳಗಣ ದೋಷಸಂಗ್ರಹವನ್ನು ಹೋಗಲಾಡಿಸತಕ್ಕದ್ದು. ಉದಾ ಕಾಳುಮೆಣಸು ಮತ್ತು ಬಜೆ. 24. ಅಭಿಷ್ಯನ್ದಿ = ತನ್ನ ಪಿಚ್ಛಿಲತೆಯಿಂದಲೂ, ಗುರುತ್ವದಿಂದಲೂ ರಸವಾಹಿಗಳಾದ ಸಿರಾನಾಳಗಳಲ್ಲಿ ತಡೆಯಾಗಿ ನಿಂತು, ಗುರುತ್ವವನ್ನುಂಟುಮಾಡತಕ್ಕದ್ದು. ಉದಾ. ಮೊಸರು. ವಿದಾಹಿ ವಿದಾಹಿದ್ರವ್ಯಮುದ್ಗಾರಮಮ್ಲಂ ಕುರ್ಯಾತ್ರಧಾ ತೃಷಾಮ್ | ಹೃದಿ ದಾಹಂ ಚ ಜನಯೇತ್ಪಾಕಂ ಗಚ್ಚತಿ ತಚ್ಚಿರಾತ್ || (ಭಾ. ಪ್ರ. 76.)
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೬೩
ಗೋಚರ