ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 105 – e v ಮತ್ತು ಕ್ಷಿಪ್ರ ಕೆಲಸಮಾಡತಕ್ಕ ಗುಣಗಳುಳ್ಳವನಾಗಿ, ಪಾಕ್ವಾಶಯಗುದಗಳನ್ನು ಮನೆಯ ನ್ನಾಗಿ ಮಾಡಿಕೊಂಡು ಇರುತ್ತಾನೆ ದೇಹದಲ್ಲಿ ಸಂಚರಿಸುತ್ತಿರುವ ಆ ವಾಯುವಿನ ಲಕ್ಷಣ ಗಳನ್ನು ನಾನು ಹೇಳುವದನ್ನು ಕೇಳು. ಕೋಪಗೊಳ್ಳದ ವಾಯುವು, ದೋಷಗಳ, ಧಾತು ಗಳ ಮತ್ತು ಅಗ್ನಿಯ ಸಮತ್ವವನ್ನೂ, (ಶಬ್ದಾದಿ) ವಿಷಯಗಳಲ್ಲಿ ಒಳ್ಳೇ ಪ್ರಾಪ್ತಿಯನ್ನೂ, ಕ್ರಿಯೆಗಳ ಕ್ರಮವಾದ ಪ್ರವೃತ್ತಿಯನ್ನೂ ಮಾಡುತ್ತದೆ ಅಗ್ನಿಯು ಹಾಗೆ ಹೆಸರು, ಸ್ಥಾನ, ಮತ್ತು ಕರ್ಮಗಳ ಮೇಲೆ ಐದು ವಿಧವಾಗಿ ಭಿನ್ನವಾಗಿದೆಯೋ ಹಾಗೆಯೇ ಒಂದೇಯಾದ ವಾಯುವಿನಲ್ಲಿ ಹೆಸರು, ಸ್ಥಾನ, ಕ್ರಿಯೆ ಮತ್ತು ವಿಕಾರಗಳಿಂದ ಐದು ಭೇದಗಳಾಗಿವೆ. ಪ್ರಾಣ, ಉದಾನ, ಸಮಾನ, ವ್ಯಾನ, ಅಪಾನ ಎಂಬ ಐದು ವಾಯುಗಳು ತಮ್ಮ ತಮ್ಮ ಸ್ಥಾನಗಳಲ್ಲಿದ್ದು, ದೇಹಿಯನ್ನು ಆಧರಿಸುತ್ತವೆಬಾಯಿಯಲ್ಲಿ ಸಂಚರಿಸುವ ವಾಯುವೇ ಪ್ರಾಣ, ಅದು ದೇಹವನ್ನು ಧರಿಸುತ್ತದೆ, ಅನ್ನವನ್ನು ಒಳಗೆ ಪ್ರವೇಶಮಾಡಿಸುತ್ತದೆ, ಮತ್ತು ಅದರ ಮೇಲೆ ಪ್ರಾಣಗಳು (ಪ್ರಾಣಸ್ಥಾನಗಳು) ಹೊಂದಿರುತ್ತವೆ, ಮತ್ತು ಆ ಪ್ರಾಣ ವಾಯುವು ಕೆಟ್ಟರೆ, ಹೆಚ್ಚಾಗಿ ಬಿಕ್ಕಟ್ಟು, ಉಬ್ಬಸ ಮುಂತಾದ ರೋಗಗಳನ್ನುಂಟುಮಾಡು ತ್ತದೆ, ಉದಾನ ಎಂಒದು ಮೇಲಕ್ಕೆ ಬರುವ ಉತ್ತಮವಾದ ವಾಯು; ಅದರಿಂದ ಮಾತು, ಗಾನಾದಿ ವಿಶೇಷಗಳು ನಡೆಯುತ್ತವೆ, ಅದು (ಕೆಟ್ಟರ) ವಿಶೇಷವಾಗಿ ಕುತ್ತಿಗೆ ಮೇಲಿನ ರೋಗ ಗಳನ್ನುಂಟುಮಾಡುತ್ತದೆ. ಆಮಾಶಯ ಪಕ್ವಾಶಯಗಳಲ್ಲಿ ಸಂಚರಿಸುವ ವಾಯುವು ಸಮಾನ. ಅದು ಅಗ್ನಿಯಿಂದ ಕೂಡಿಕೊಂಡು, ಅನ್ನವನ್ನು ಪಚನ ಮಾಡಿ, ಅದರಿಂದ ಹುಟ್ಟಿದ (ರಸಮಲಾದಿ) ವಿಶೇಷಗಳನ್ನು ಪ್ರತ್ಯೇಕಿಸುತ್ತದೆ. ಮತ್ತು ಅದು (ಕೆಟ್ಟರೆ) ಗುಲ್ಮ, ಅಗ್ನಿ ಮಾಂದ್ಯ, ಅತಿಸಾರ, ಮುಂತಾದ ರೋಗಗಳನ್ನುಂಟುಮಾಡುತ್ತದೆ. ವ್ಯಾನ ಎಂಬ ವಾಯು ವು ರಸವನ್ನು ಸಾಗಿಸುವ ಕೆಲಸವನ್ನು ಹಿಡಕೊಂಡು, ಇಡಿ ದೇಹವನ್ನು ಸಂಚರಿಸುತ್ತದೆ, ಬೆವರನ್ನೂ ರಕ್ತವನ್ನೂ ಸ್ರವಿಸತಕ್ಕಂಧಾದ್ದು ಮತ್ತು ಪಂಚವಿಧವಾದ ಅಂಗಚೇಷ್ಟೆಗಳನ್ನು ನಡಿಸುತ್ತದೆ, ಮತ್ತು ಅದು ಸಿಟ್ಟುಗೊಂಡರೆ, ಹೆಚ್ಚಾಗಿ ಇಡೀ ದೇಹವ್ಯಾಪಿಯಾದ ರೋಗ ಗಳನ್ನುಂಟುಮಾಡುತ್ತದೆ. ಅಪಾನವಾಯುವಿಗೆ ಮನೆಯು ಪಕ್ವಾಶಯ; ಈ ವಾಯುವು ಆಯಾ ಕಾಲಗಳಲ್ಲಿ ಮಲ, ಮೂತ್ರ, ಶುಕ್ರ, ಗರ್ಭ, ಶೋಣಿತ, ಇವುಗಳನ್ನು ಕೆಳಗೆ ದೂಡುತ್ತದೆ; ಕೆಟ್ಟಾಗ್ಗೆ, ವಸ್ತಿ ಮತ್ತು ಗುದ ಇವುಗಳನ್ನು ಆಶ್ರಯಿಸಿದ ಘೋರವಾದ ರೋಗಗಳನ್ನುಂಟುಮಾಡುತ್ತದೆ. ಶುಕ್ರದೋಷ ಮತ್ತು ಪ್ರಮೇಹಗಳು ವ್ಯಾನಾಪಾನ ವಾಯುಗಳೆರಡರ ಪ್ರಕೋಪದಿಂದ ಉಂಟಾಗುವಂಧವು ಐದು ವಾಯುಗಳೂ ಒಂದೇ ಸಾರಿ ಕೋಪಗೊಂಡರೆ, ನಿಃಸಂಶಯವಾಗಿ ದೇಹವನ್ನು ನಾಶಮಾಡುವವು 7. ರೋಗಗಳೊಳಗೆ ತತ್ರ ವಿಕಾರಾಃ ಸಾಮಾನ್ಯಜಾ ನಾನಾತ್ಮಚಾಶ್ವ | ಸಾಮಾನ್ಯಜನಾನಾ ತ್ಮಜ ಎಂಬ ಭೇದ (ಚ. 110,) ವಾತ ಪಿತ್ತ ಶ್ಲೇಷ್ಮಗಳಿಂದ ಹುಟ್ಟುವ ವಿಕಾರಗಳೊಳಗೆ ಸಾಮಾನ್ಯವಾದವೆಂತಲೂ, ಪ್ರತ್ಯೇಕ ಅವುಗಳಿಂದ ಹುಟ್ಟಿದವು ಎಂತಲೂ ಎರಡು ವಿಧ. (ನಾನಾತ್ಮಜಾ...) ಅಶೀತಿರ್ವಾತವಿಕಾರಾಃ ಚತ್ವಾರಿಂಶತ್ಪಿತ್ತವಿಕಾರಾಃ ವಿಂಶತಿಃಶ್ಲೇಷ್ಮವಿಕಾರಾಃ | (ಚ. 110.)