ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

203 -- ಅ X ಪೂರ್ವಾಗ್ಲದಲ್ಲಿ ಒಂದು ಜಾಮದೊಳಗೆ ಉಣ್ಣಲೂ, ಎರಡು ಜಾಮ ಉಪವಾಸ ವಿರಲೂ, ಬಾರದು, ಪ್ರಧಮಜಾಮದ ಮಧ್ಯದಲ್ಲಿ ಉಂಡರೆ (ದೋಷಕರವಾದ) ರಸ ಉತ್ಪತ್ತಿ ಯಾಗುವದು ಮತ್ತು ಎರಡು ಜಾಮದ ಮೇಲೆ ಉಪವಾಸ ಮಾಡಿದರೆ ಬಲವು ಕ್ಷಯಿಸುವದು. ಷರಾ ಬೆಳಿಗ್ಗೆ ಗೊದಿರೊಟ್ಟಿ, ಸಜ್ಜಿಗೆ ಉಪ್ಪಿಟ್ಟು, ಅವಲಕ್ಕಿ, ಕರಿದ ಪದಾರ್ಥಗಳು ಮುಂತಾದ ಗುರುವಾದ ಆಹಾರವನ್ನು ಭುಂಜಿಸಿ ಕಾಫಿ ಕುಡಿಯುವ ಅಭ್ಯಾಸ ಮಾಡಿಕೊಂಡವರು ಈ 21ನೇ ಸಂ ಯ ಮತ್ತು ಹಿಂದಿನ 5ನೇ ಸಂ ಯ ಸೂತ್ರಗಳಿಗೆ ಮನಸ್ಸು ಕೊಡಬೇಕು ಅಂದಿನ ದಿನದ ಕಡೇ ಊಟದನಂತರ 12 ಘಂಟೆ ಸಮಯ ಕಳೆಯುವ ವರೆಗೆ ಉಣ್ಣಬಾರದೆಂಬ ತಾತ್ಪರ್ಯವಾದ್ದರಿಂದ ಸಂಜೆಯೊಳಗೆ ರಾತ್ರಿ ಊಟವನ್ನು ತೀರಿಸುವ ನಮ್ಮ ದೇಶದ ಜೈನ ಮತಸ್ಥರಿಗ, ವಿಲಾಯತಿ ಜನರಿಗೂ, ಅಂಧಾ ಬೆಳಿಗ್ಗಿನ ವರಾರಾದಿಗಳು ಉತವಾಗುವದಲ್ಲದೆ, ಇತರರಿಗೆ ಅದು ಬಹಳ ಅನಾರೋಗ್ಯಕರವೆಂಬುವದರಲ್ಲಿ ಸಂದೇಹವಿಲ್ಲ 22 ಅಶೋಕ್ಷಂ ದುಷ್ಟ ಮುಚ್ಚಿ ಷ್ಟಂ ಪಾಷಾಣತೃಣಲೋಷವತ್ | ದ್ವಿಷ್ಟಂ ವ್ಯಷಿತಮಸ್ಸಾದು ಪೂತಿ ಚಾನ್ನಂ ವಿವರ್ಜಯೇತ್ | ನಿಂದ್ಯಾನ್ನ ಚಿರಸಿಸ್ಟಂ ಸ್ಥಿರಂ ಶೀತಮನ್ನಮುಷ್ಠಿ ಕೃತಂ ಪುನಃ | ಅಶಾಂತಮುಪದಗ್ಗಂ ಚ ತಧಾ ಸ್ವಾದ, ನ ಲಕ್ಷ್ಯತೇ || (ಸು. 237.) ನಿರ್ಮಲವಲ್ಲದ, (ವಿಷಾದಿ ತಗಲಿ) ಕೆಟ್ಟು ಹೋದ, ಉಚ್ಚಿಷ್ಟವಾದ (ಉಂಡು ಉಳಿದ). ತನಗೆ ಇಷ್ಟವಲ್ಲದ, ಹಳಸಿದ ಅಧವಾ ತಣಿದ, ರುಚಿಯಿಲ್ಲದ, ದುರ್ವಾಸನೆಯುಳ್ಳ ಮತ್ತು ಕಲ್ಲು, ಹಲ್ಲು ಅಥವಾ ಮಣ್ಣು ಉಳ್ಳ, ಅನ್ನವನ್ನು ವರ್ಜ್ಯ ಮಾಡಬೇಕು. ತಯಾರಿಸಿ ಕಾಲ ವಾದ, ಕಲ್ಲಾದ, ತಣಿದದ್ದನ್ನು ಪುನಃ ಬಿಸಿಮಾಡಿದ, ಬಸಿಯದ (ಗಂಜಿ ಸಿಕ್ಕಿಕೊಂಡ), ಮತ್ತು ಸುಟ್ಟು ಹೋದ (ಅಡಿ ಹಿಡಿದ), ಅನ್ನವನ್ನು ಸಹ, ಸ್ವಾದುವಾಗಿದ್ದರೂ, ವರ್ಜಿಸಬೇಕು 23. ಯದ್ಯತ್ಸಾ ದುತರಂ ತತ್ರ ಎದಧ್ಯಾದುತ್ತರೋತ್ತರ | (ಪು. 237.) ಪದಾರ್ಥಗಳು ಒಂದಕ್ಕೊಂದು ಹೆಚ್ಚು ಸ್ವಾದುವಾಗಿರುವಲ್ಲಿ, ಹೆಚ್ಚು ಸ್ವಾದುವಾದ ಪದಾರ್ಥಗಳನ್ನು ಕಡೆಕಡೆಗೆ (ಉತ್ತರೋತ್ತರವಾಗಿ) ಉಪಯೋಗಿಸತಕ್ಕದ್ದು. ಸ್ವಾದುಭೋ ಭುಕ್ತಾ ಚ ಯತ್ಸಾರ್ಧಯತೇ ಭೂಯಸ್ತ್ರಾದುಭೋಜನಂ | ನದ ನಿಯಮ (ಸು. 237.) ಭುಂಜಿಸಿದ ಮೇಲೆ ಪುನಃ ಅದರ ಆಶಯನ್ನು ಯಾವದು ಹುಟ್ಟಿಸುತ್ತದೋ, ಆ ಭೋಜ ನವು ಸ್ವಾದು ಎನ್ನಿಸಿಕೊಳ್ಳುತ್ತದೆ. 24. ಜಲಪಾನ ವಿಧಿ ಅಶಿತಲ್ಲೋದಕಂ ಯುಕ್ತಾ, ಭುಂಜಾನಶ್ಯಾಂತರಾ ಪಿಬೇತ್ | (ಸು. 237.) ಉಂಡ ಮೇಲೆಯೂ, ಉಣ್ಣುತ್ತಿರುವಾಗ ಎಡೆಯಲ್ಲಿಯೂ, ನೀರನ್ನು ಯುಕ್ತವಾಗಿ ಕುಡಿಯಬೇಕು. 25. ಅತ್ಯಂಬುಪಾನಾದ್ವಿಷಮಾಶನಾದ್ವಾ ಸಂಧಾರಣಾತೃವಿಪರ್ಯಯಾಚ್ಚ | ಅತಿ ಜಲಪಾನಾ ಅತಿ ಜಲಪಾನಾ ಕಾಲೇsಪಿ ಸಾಂ ಲಘು ಚಾಪಿ ಭುಕ್ತಮನ್ನಂ ನ ಪಾಕಂ ಭಜತೇ ನರಸ್ಯ || ದಿಗಳ ದೋಷ (ಸು. 239.) " 26*