ಆ X ಭೋಜ ಪದಾ ವಿಚಾರ ರಾ ನಿಯಮಗಳ ಸಾರಾಂಶ - 202 - ಹೇಳುತ್ತಾರೆ. ಅದು ಕ್ಷಿಪ್ರವಾಗಿ ಕೆಲಸಮಾಡುವ ಸ್ವಭಾವದ್ದಾದ್ದರಿಂದಲೂ, ಪರಸ್ಪರ ವಿರುದ್ಧ ಲಕ್ಷಣಗಳುಳ್ಳದ್ದಾಗಿ ಆರಂಭಿಸುವದರಿಂದಲೂ, (ಚಿಕಿತ್ಸೆಗೆ) ಅತ್ಯಂತ ಅಸಾಧ್ಯವಾಗಿರುತ್ತದೆ. 18. ಪೂರ್ವಂ ಮಧುರಮಯಾನ್ಮಧೈಮ್ ಲವಣ್ರಸೌ | ರ್ಥಗಳ ರಸ ಪಶ್ಚಾಚೇಷಾನ್ ರಸಾನ್ ವೈದ್ಯೋ ಭೋಜನೇಷ್ಟವಚಾರಯೇ ತ್ || (ಸು. 235.) ಆರಂಭದಲ್ಲಿ ಸೀರಸವನ್ನೂ, ಮಧ್ಯದಲ್ಲಿ ಹುಳಿ ಮತ್ತು ಉಪ್ಪು ರಸವುಳ್ಳವುಗಳನ್ನೂ, ಅನಂತರ ಉಳಿದ ರಸವುಳ್ಳವುಗಳನ್ನೂ ಉಣ್ಣಬೇಕಾಗಿ ವೈದ್ಯನು ಭೋಜನಗಳಲ್ಲಿ ವಿಧಿಸಬೇಕು. ಭೋಜನ ಭೋಜನ ಸುಖಮುಚ್ಚೆಃ ಸಮಾಸೀನಃ ಸಮದೇಹೋನ್ನತತ್ಪರಃ | ನಿಯಮಗಳ ಕಾಲೇ ಸಾಂ ಲಘು ೩ಗ್ಗಂ ಕ್ಷಿಪ್ರಮುಷ್ಣಂ ದ್ರವೋತ್ತರಂ || ಬುಧುಕ್ಷಿತೋನ್ನಮಯಾನ್ಮಾತ್ರಾವದ್ವಿದಿತಾಗಮಃ | (ಸು. 236.) ಎತ್ತರಸ್ಥಾನದಲ್ಲಿ ಸಮದೇಹನಾಗಿ, ಸುಖವಾಗಿ ಕೂತು, ಅನ್ನದ ಮೇಲೆಯೇ ಮನಸ್ಸು ಳ್ಳವನಾಗಿ, ಯುಕ್ತ ಕಾಲದಲ್ಲಿ, ಹಸಿವು ಇರುವಾಗ್ಗೆ, ತನಗೆ ಸಾತ್ಮವಾದ, ಲಘುವಾದ, ಸ್ನಿಗ್ಧ ವಾದ, ದ್ರವವೇ ಹೆಚ್ಚಾಗಿರುವ ಮತ್ತು ಬಿಸಿಯಾದ ಆಹಾರವನ್ನು, ಶಾಸ್ತ್ರವನ್ನು ತಿಳಿದವ ನಾಗಿ, ಪ್ರಮಾಣ ತಪ್ಪದೆ, ಬೇಗವಾಗಿ ಉಣ್ಣಬೇಕು. ತಸ್ಮಾತ್ ಸುಸಂಸ್ಕೃತಂ ಯುಕ್ಯಾ ದೋಷ್ಠೆರೇತೈರ್ವಿವರ್ಜಿತಮ್ | ಯಧೋಕ್ತಗುಣಸಂಪನ್ನಮುಪಸೇವೇತ ಭೋಜನಂ | ವಿಭಜ ಕಾಲದೋಷಾದೀನ್ ಕಾಲಯೋರುಭಯೋರಪಿ || (ಸು 23.) ಆದ್ದರಿಂದ ಕಾಲದೋಷಾದಿಗಳನ್ನು ವಿಚಾರಕ್ಕೆ ತಂದುಕೊಂಡು, ಮೊದಲು ಹೇಳಿದ (ಮಾತ್ರಾದಿ) ದೋಷಗಳಿಲ್ಲದಂಧಾ, ತಕ್ಕ ರೀತಿಯಲ್ಲಿ ಒಳ್ಳೇದಾಗಿ ತಯಾರಿಸಲ್ಪಟ್ಟಂಧಾ ಮತ್ತು ಉಕ್ತವಾದ ಗುಣವುಳ್ಳಂಧಾ ಭೋಜನವನ್ನು, ಹಗಲೂ, ರಾತ್ರಿಯೂ, ಎರಡು ವೇಳೆ ಸೇವಿಸಬೇಕು. 20. ರಾತ್ರಿ ಭೋಜನ ರಾತ್ ಚ ಭೂಜನಂ ಕುರ್ಯಾತೃಧಮಪ್ರಹರಾಂತರೇ | ನಿಯಮ ಕಿಂಚಿದೂನಂ ಸಮಯಾದ್ದುರ್ಜರ ತತ್ರ ವರ್ಜಯೇತ್ || (ಭಾ. ಪ್ರ. 57.) ರಾತ್ರಿಯಲ್ಲಿ ಪ್ರಥಮ ಜಾಮದೊಳಗೆ ಭೋಜನವನ್ನು ಮಾಡತಕ್ಕದ್ದು; ಸ್ವಲ್ಪ ಕಡಿಮೆ ಯಾಗಿ ಉಣ್ಣಬೇಕು; ಮತ್ತು ಜೀರ್ಣಕ್ಕೆ ಕಷ್ಟವಾದ ಪದಾರ್ಧವನ್ನು ವರ್ಜಿಸಬೇಕು. 21. ಯಾಮಮಧೈ ನ ಭೋಕ್ತವ್ಯಂ ಯಾಮಯುಗಂ ನ ಲಂಘಯೇತ್ | ಯಾಮಮಧ್ಯೆ ರಸೋತ್ಪತ್ತಿರ್ಯಾಮಯುನ್ಮಾಧ್ವ ಲಕ್ಷಯಂ | (ಭಾ. ಪ್ರ. 49.) ಹಗಲೂಟದ ಕಾಲನಿಯಮ
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೯೨
ಗೋಚರ