ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

201 ~ X ಪುನಃ ಅತಿ ಪ್ರಮಾಣವಾಗಿ ಉಣ್ಣುವದರಿಂದ ಸರ್ವ ದೋಷಗಳೂ ಪ್ರಕೋಪಗೊಳ್ಳುತ್ತ ವೆಂದು ಸರ್ವವನ್ನೂ ತಿಳಿದವರು ಒಪ್ಪುತ್ತಾರೆ. ಯಾವನು ನಾನಾ ವಿಧವಾಗಿ ತಯಾರಿಸಿದ ಮೂರ್ತಾಹಾರಗಳನ್ನು ಹೊಟ್ಟೆ ತುಂಬ ಉಂಡು, ಅನಂತರ ದ್ರವಪದಾರ್ಥಗಳಿಂದ ಪುನಃ ತೃಪ್ತಿ ಪಡಿಸಿಕೊಳ್ಳುತ್ತಾನೋ, ಅವನ ಆಮಾಶಯದಲ್ಲಿರುವ ವಾತ-ಪಿತ್ತ-ಕಫಗಳು ಅತಿಯಾಗಿ ಭುಂಜಿಸಿದ ದೆಸೆಯಿಂದ ಅತಿಯಾಗಿ ಪೀಡಿಸಲ್ಪಟ್ಟು, ಎಲ್ಲವೂ ಒಂದೇ ಸಾರಿ ಪ್ರಕೋಪ ಗೊಳ್ಳುತ್ತವೆ. ಪ್ರಕೋಪಗೊಂಡ ಅವುಗಳು ಪಕ್ಕ ವಾಗದ ಅದೇ ಆಹಾರರಾಶಿಯೊಳಗೆ ಹೊಕ್ಕು, ಹೊಟ್ಟೆಯ ಯಾವದಾದರೊಂದು ಸ್ಥಳವನ್ನು ಆಶ್ರಯಿಸಿ, ಅಕಸ್ಮಾತ್ತಾಗಿ ಜಿಗಿದು ಹಿಡಿದು, ಅಧವಾ ಮೇಲಿನ ಮತ್ತು ಕೆಳಗಿನ ಮಾರ್ಗಗಳೆರಡರಿಂದ ಹೊರಗೆ ಹಾಕುತ್ತಾ, ಅತಿ ಯಾಗಿ ಉಂಡವನಲ್ಲಿ ಬೇರೆಬೇರೆ ವಿಕಾರಗಳನ್ನುಂಟುಮಾಡುತ್ತವೆ. ಅವುಗಳೊಳಗೆ ವಾತವು, ಶೂಲೆ, ಅನಾಹ, ಅಂಗನೋವು, ಬಾಯಿಒಣಗುವಿಕೆ, ಮೂರ್ಚೆ, ಭ್ರಮ, ವಿಷಮಾಗ್ನಿ ಮತ್ತು ಸಿರಾನಾಳಗಳ ಸಂಕೋಚ ಮತ್ತು ಸ್ತಂಭ, ಇವುಗಳನ್ನುಂಟುಮಾಡುತ್ತದೆ; ಪುನಃ ಪಿತ್ತವ, ಜ್ವರ, ಅತಿಸಾರ, ದೇಹದೊಳಗೆ ಉರಿ, ಬಾಯಾರಿಕೆ, ಮದ, ಭ್ರಮ, ಪ್ರಲಾಪ, ಇವು ಗಳನ್ನುಂಟುಮಾಡುತ್ತದೆ, ಮತ್ತು ಕಫವು, ವಾಂತಿ, ಅರುಚಿ, ಅಜೀರ್ಣ, ಶೀತಜ್ವರ, ಆಲಸ್ಯ, ಮೈಭಾರ, ಇವುಗಳನ್ನುಂಟುಮಾಡುವದಾಗುತ್ತದೆ. 16. ನ ಐಲು ಕೇವಲಮತಿಮಾತ್ರಮೇವಾಹಾರರಾಶಿಮಾಮಪ್ರದೋಷಕಾ ರಣಮಿಚ್ಛಂತಿ | ಅಪಿ ತು ಖಲು ಗುರುರೂಕ್ಷಶೀತಶುಷ್ಕಷ್ಟವಿಷ್ಟಂಭಿ ಆಮದೋಷಕ್ಕೆ ವಿದಾಹ ಶುಚಿವಿರುದ್ದಾ ನಾಮಕಾಲೇ ಅನ್ನಪಾನಾನಾಮುಪಸೇವನಂಕಾ ಬೇರೆ ಹೇತು ಮ-ಕ್ರೋಧ-ಲೋಭ-ಮೋಹೇರ್ಷ್ಯಾ-ಸ್ತ್ರೀ - ಶೋಕ-ಲೋಭೋದ್ವೇಗಭಯೋಪತನ ಮನಸಾ ವಾ ಯದನ್ನ ಪಾನಮುಪಯುಜ್ಯತೇ ತದಪಿ ಆಮಮೇವ ಪ್ರದೂಷಯತಿ | (ಚ 245.) | ಆದರೆ ಅತಿಯಾಗಿ ಭುಂಜಿಸಿದ ಆಹಾರರಾಶಿ ಮಾತ್ರವೇ ಆಮಪ್ರದೋಷಗಳಿಗೆ ಕಾರಣ ವೆಂತ ಅಂಗೀಕರಿಸಲ್ಪಡುವದಿಲ್ಲ. ಅದಲ್ಲದೆ, ಗುರು, ರೂಕ್ಷ, ಶೀತ, ಒಣಗಿದ್ದು, ದ್ವೇಷಿಸಲ್ಪಡು ವಂಧಾದ್ದು, ಹೊಟ್ಟೆ ಬಿಗಿಯತಕ್ಕಂಧಾದ್ದು, ಉರಿ ಉಂಟುಮಾಡತಕ್ಕಂಧಾದ್ದು, ಅರುಚಿ ಮತ್ತು ವಿರುದ್ಧ, ಆದ ಅನ್ನಪಾನಗಳನ್ನು ಅಕಾಲದಲ್ಲಿ ಸೇವಿಸುವದು, ಅಥವಾ ಕಾಮ, ಕ್ರೋಧ, ಲೋಭ, ಮೋಹ, ಮತ್ಸರ, ನಾಚಿಕೆ, ಶೋಕ, ಲೋಭದಿಂದುಂಟಾದ ದುಃಖ, ಮತ್ತು ಭಯ, ಇವುಗಳಿಂದ ಮನಸ್ಸು ಕಾದಿರುವಾಗ ಉಪಯೋಗಿಸಲ್ಪಟ್ಟ ಅನ್ನಪಾನ ಸಹ, ಆಮದೋಷಗಳನ್ನೇ ಉಂಟುಮಾಡುತ್ತದೆ ಗಳು ಆವ 17, ವಿರುದ್ದಾ ಧೃಶನಾಜೀರ್ಣಾಶನಶೀಲಿನಃ ಪುನರೇವ ದೋಷಮಾಮವಿಷ ಆಮವಿಷ ಮಿತ್ಯಾಚಕ್ಷತೇ ಭಿಷಜೊ ವಿಷಸದೃಶಲಿಂಗತ್ವಾತ್, ತತ್ ಪರಮಸಾಧ್ಯ ಮಾರುಕಾರಿತ್ವಾತ್, ವಿರುದ್ಧೋಪಕ್ರಮಾಜೇತಿ | (ಚ. 246.) ವಿರುದ್ಧವಾಗಿ, ಅಧವಾ ಅತಿಯಾಗಿ, ಅಧವಾ ಜೀರ್ಣವಾಗಿರದೆ, ಅಶನಮಾಡುವ ಶೀಲ ವುಳ್ಳವನ ದೋಷವು, ವಿಷಸದೃಶವಾದ ಲಕ್ಷಣವುಳ್ಳದ್ದಾದ್ದರಿಂದ, ಆಮವಿಷ ಎಂತ ವೈದ್ಯರು 26