ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 221 - ಆ XI, ಖದಿರಃ ಕಫಪಿತ್ತಷ್ಟಶೂರ್ಣ೦ ವಾತಬಲಾಸನುತ್ | ಸಂಯೋಗತದೋಷಘ್ನಂ ಸೌಮನಸ್ಯಂ ಕರೋತಿ ಚ || (ಭಾ. ಪ್ರ. 53.) ಕಾಚು ಕಫಪಿತ್ತವನ್ನೂ, ಸುಣ್ಣವು ವಾತಕಫವನ್ನೂ, ಎರಡೂ ಕೂಡಿ ತ್ರಿದೋಷ ಗಳನ್ನೂ ಪರಿಹರಿಸುತ್ತವೆ ಮತ್ತು ಮನಃಸಂತೋಷವನ್ನು ಮಾಡುತ್ತವ. 25. ಏಲಕ್ಕಿಗುಣ ಏಲಾ ಮೂತ್ರವಿಬಂಧ ತೃಟ್ಛರ್ದಿಕಫವಾತಜಿತ್ | (ರಾ. 164,) ಏಲಕ್ಕಿ ಮೂತ್ರಕಟ್ಟನ್ನು ಬಿಡಿಸುವದು ಮತ್ತು ಬಾಯಾರಿಕೆ, ವಾಂತಿ ಮತ್ತು ಕಫವಾತ, ಇವುಗಳನ್ನು ಪರಿಹರಿಸುವದು. ಏಲಾದ್ವಯಂ ಶೀತಲತಿಕ್ಕಮುಕ್ತಂ ಸುಗಂಧಿ ಪಿತ್ತಾರ್ತಿಕಥಾಪಹಾರಿ | ಕರೋತಿ ಹೃದ್ರೋಗಮಲಾರ್ತಿವಸ್ತಿ ಪುಂಸ್ಕೃಘ್ನಮತ್ರ ಸ್ಥವಿರಾ ಗುಣಾಢಾ || (ರಾ, ನಿ. 79.) (ದೊಡ್ಡದು ಮತ್ತು ಸಣ್ಣದು) ಎರಡು ಜಾತಿಯ ಏಲಕ್ಕಿಯೂ ಶೀತಕಾರಿ, ಕಹಿ, ಸುಗಂಧವುಳ್ಳದ್ದು, ಪಿತ್ತಪೀಡೆಯನ್ನು ಮತ್ತು ಕಫವನ್ನು ಪರಿಹರಿಸತಕ್ಕದ್ದು, ಹೃದ್ರೋಗ, ಮಲಪೀಡೆ, ವಸ್ತಿರೋಗ, ಮತ್ತು ಪುಂ ನಾಶಮಾಡುತ್ತದೆ. ಅವುಗಳೊಳಗೆ ದೊಡ್ಡದೇ ವಿಶೇಷಗುಣವುಳ್ಳದ್ದಾಗಿರುತ್ತದೆ. 26. ಲವಂಗಂ ಕಟುಕಂ ತಿಂ ಲಘು ನೇತ್ರಹಿತಂ ಹಿಮಂ || ದೀಪನಂ ಪಾಚನಂ ರುಚ್ಯಂ ಕಫಪಿತ್ತಾಶ್ರನಾಶನಂ || ಲವಂಗದ ಗುಣ ತೃಪ್ಲಾಂ ಛರ್ದಿ೦ ತಧಾಧ್ಯಾನಂ ಶೂಲಮಾಶು ವಿನಾಶಯೇತ್ || ಕಾಸಂ ಶ್ವಾಸಂ ಚ ಹಿಕ್ಕಾಂ ಚ ಕ್ಷಯಂ ಕೃಪಯತಿ ಧ್ರುವಂ || (ಭಾ. ಪ್ರ.94.) ಲವಂಗವು ಕಟು, ಕಹಿ, ಲಘು, ತಂಪು, ದೀಪನಕಾರಿ, ಪಾಚನಕಾರಿ, ರುಚಿಕರ, ಕಫ ಮತ್ತು ಪಿತ್ತರಗಳನ್ನು ನಾಶಮಾಡತಕ್ಕದ್ದು; ಬಾಯಾರಿಕೆ, ವಾಂತಿ, ಹೊಟ್ಟೆಯುಬ್ಬರ, ಮತ್ತು ಶೂಲೆಯನ್ನು ಬೇಗನೆ ನಾಶಮಾಡುತ್ತದೆ; ಮತ್ತು ಕೆಮ್ಮು, ಉಬ್ಬಸ, ಬಿಕ್ಕಟ್ಟು, ಕ್ಷಯ, ಇವುಗಳನ್ನು ನಿಶ್ಚಯವಾಗಿ ಕಡಿಮೆಮಾಡುವದು.

  • ಉಷ್ಣ ಮತ್ತು ತೀಕ್ಷ್ಯ ವಾದಾಗ್ಯೂ, ವಿಪಾಕದಲ್ಲಿ ತುಪ್ಪ (ರಾ ನಿ 104 ) 27. ಜಾತೀಫಲಂ ರಸೇ ತಿಂ ತೀಕ್ರೋಷ್ಠಂ ಲೋಚನಂ ಲಘು |

ಕಟುಕಂ ದೀಪನಂ ಗ್ರಾಹಿ ಸ್ವರ್ಯ೦ ಶ್ಲೇಷ್ಯಾನಿಲಾಪಹಂ || ಗುಣ ನಿಹಂತಿ ಮುಖವೈರಸ್ಯ-ಮಲ-ದೌರ್ಗಂಧ-ಕೃಷ್ಣತಾಃ | ಕೃಮಿ-ಕಾಸ-ವಮಿ-ಶ್ವಾಸ-ಶೋಷ-ಪೀನಸ-ಹೃದ್ರುಜ8 11 (ಭಾ. ಪ್ರ. 93-94.) ಜಾಯಿಕಾಯಿ ಕಹಿ, ತೀಕ್ಷ, ಉಷ್ಣ, ರುಚಿಕರ, ಲಘು, ಕಟು, ಅಗ್ನಿದೀಪನಕಾರಿ, ಗ್ರಾಹಿ, ಸ್ವರಕಾರಿ, ಕಫವಾತಹರ, ಮತ್ತು ಬಾಯಿಯ ಒಣಗುವಿಕೆ, ಮಲ, ದುರ್ವಾಸನೆ, ಜಾಯಿಕಾಯಿ