ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

227 e XI ನಿದ್ರೆ ಷರಾ * ಇವರೆಲ್ಲ ಹಗಲು ಒಂದು ಮುಹೂರ್ತಕಾಲ ನಿದ್ರೆಮಾಡುವದಕ್ಕೆ ಪ್ರತಿಷೇಧವಿಲ್ಲ ಎಂತಲ, ರಾತ್ರಿ ಜಾಗರಣ ಮಾಡಿದವರು ಜಾಗರಣ ಕಾಲದ ಅರ್ಧದ ಮಟ್ಟಿಗೆ ಹಗಲು ನಿದ್ರೆಮಾಡಬಹುದೆಂತಲೂ ಸುಶ್ರುತ (ಪು 322.) ದಿವಾ ವಾ ಯದಿ ವಾ ರಾತ್ರೆ ನಿದ್ರಾ ಸಾಲ್ಮೀಕೃತಾ ತು ಹೈ || ನ ತೇಷಾಂ ಸ್ವಪತಾಂ ದೋಷೋ ಚಾಗ್ರತಾಂ ಚೋಪಜಾಯತೇ || (ಭಾ. ಪ್ರ.54) ಹಗಲು ಆಗಲಿ, ರಾತ್ರಿಯಾಗಲಿ, ಯಾರು ನಿದ್ರೆಯನ್ನು ಸಾಕ್ಷ್ಯಮಾಡಿಕೊಂಡಿದ್ದಾರೋ, ಅವರಿಗೆ (ಹಗಲು) ನಿದ್ರೆ ಮಾಡಿದ್ದರಿಂದ ದೋಷವಿಲ್ಲ. ನಿದ್ರೆ ಮಾಡದೆ ಜಾಗರಣೆ ಮಾಡಿದ ರೇನೇ, ದೋಷ ಉಂಟಾಗುವದು. ಷರಾ ಇದೇ ತಾತ್ಪರ್ಯ ಸು ದಲ್ಲಿ ಕಾಣುತ್ತದೆ ( 32 ) ತಮೋಭವಾ ಶ್ರೇಷ್ಮಸಮುದ್ಭವಾ ಚ ಮನಃಶರೀರಶ್ರಮಸಂಭವಾ ಚ || ನಾನಾ ಜಾತಿಯ ಆಗಂತುಕೀ ವ್ಯಾಧ್ಯನುವರ್ತನೀ ಚ ರಾತ್ರಿ ಸ್ವಭಾವಪ್ರಭವಾ ಚ ನಿದ್ರಾ || ರಾತ್ರಿ ಸ್ವಭಾವಪ್ರಭವಾ ಮತಾ ಯಾ ತಾಂ ಭೂತಧಾತ್ರೀಂ ಪ್ರವದಂತಿ ನಿದ್ರಾಂ | ತಮೋಭವಾಮಾಹುರಘಸ್ಯ ಮೂಲಂ ಶೇಷಂ ಪುನರ್ವ್ಯಾಧಿಷು ನಿರ್ದಿಶಂತಿ ! (ಚ 119.) ನಿದ್ರೆಯಲ್ಲಿ, ತಮೋಗುಣವೇ ಆಗಿರುವದೊಂದು, ಕಫದಿಂದ ಹುಟ್ಟುವದೊಂದು, ಮನ ಸ್ಸಿನ ಮತ್ತು ಶರೀರದ ಶ್ರಮದ ದೆಸೆಯಿಂದ ಹುಟ್ಟುವದೊಂದು, (ಭಂಗಿ ಇತ್ಯಾದಿಯಿಂದ) ಆಗಂತು ಒಂದು, ವ್ಯಾಧಿಯನ್ನನುಸರಿಸಿ ಬರುವದೊಂದು, ರಾತ್ರಿಯ ಸ್ವಭಾವದಿಂದಲೇ ಹುಟ್ಟುವದೊಂದು, ಹೀಗೆ ಭೇದಗಳಿವೆ. ಅವುಗಳೊಳಗೆ ರಾತ್ರಿ ಸ್ವಭಾವದಿಂದ ಹುಟ್ಟುವ ನಿದ್ರೆಯೇ ಜೀವಿಗಳಿಗೆ ತೊತ್ತಿ ಎನ್ನಿಸಿಕೊಳ್ಳುತ್ತಾಳೆ. ತಮೋಗುಣಜನ್ಯವಾದದ್ದು ಪಾಪಕ್ಕೆ ಮೂಲ, ಮಿಕ್ಕವು ರೋಗಗಳೊಳಗೆ ಸೇರಿದವಾಗಿರುತ್ತವೆ. ವಿಕೃತಿರ್ಹಿ ದಿವಾನ್ವಿಪ್ರೋ ನಾಮ | ತತ್ರ ಸ್ವಪತಾಮಧರ್ಮಃ ಸರ್ವ ದಿವಾನಿದ್ರೆಯ ದೋಷಪ್ರಕೊಪಶ್ವ ! ತತ್ತ್ವಕೋಪಾಚ್ಚ ಕಾಸ-ಶ್ವಾಸ-ಪ್ರತಿಶ್ಯಾಯ ಮತ್ತು ರಾತ್ರಿ ಜಾಗರಣದ ಶಿರೋಗೌರವಾಂಗಮರ್ದಾರೋಚಕ-ಜ್ವರಾಗ್ನಿದೌರ್ಬಲ್ಯಾನಿ ಭವಂತಿ || ದೋಷ ರಾತ್ರಾವಪಿ ಜಾಗರಿತವತಾಂ ವಾತಪಿತ್ತ ನಿಮಿತ್ಯಾಸ ಏವೋಪದ್ರವಾ ಭವಂತಿ | ತಸ್ಮಾನ್ನ ಜಾಗೃಯಾದ್ರಾ ದಿವಾ ಸ್ವಪ್ನಂ ಚ ವರ್ಜಯೇತ್ || ಜ್ಞಾತ್ವಾ ದೋಷಕರಾವೇ ಬುಧಃ ಸ್ವಪ್ನಂ ಮಿತಂ ಚರೇತ್ || (ಸು. 322.) ಹಗಲು ನಿದ್ರೆ ಎಂಬದು ವಿಕಾರವಾಗಿರುತ್ತದೆ. ಆ ನಿದ್ರೆಯಿಂದ ಅಧರ್ಮವೂ, ಸರ್ವ ದೋಷಗಳ ಪ್ರಕೋಪವೂ, ಉಂಟಾಗುವವು. ಆ ಪ್ರಕೋಪದಿಂದ ಕೆಮ್ಮು, ಉಬ್ಬಸ, ನೆಗಡಿ, ತಲೆಭಾರ, ಮೈನೋವು, ಅರುಚಿ, ಜ್ವರ, ಮತ್ತು ಅಗ್ನಿಮಾಂದ್ಯ ಉಂಟಾಗುವವು. ರಾತ್ರಿ ಜಾಗರ ಮಾಡುವದರಿಂದ ವಾತ ಮತ್ತು ಪಿತ್ತದ ನಿಮಿತ್ತವಾಗಿ ಅದೇ ಉಪದ್ರವಗಳು ಉಂಟಾ ಗುವವು. ಆದ್ದರಿಂದ ರಾತ್ರಿ ಜಾಗರಮಾಡಬಾರದು; ಹಗಲು ನಿದ್ರೆಯನ್ನು ಬಿಡಬೇಕು. ಇವೆ ರಡೂ ದೋಷಕರವೆಂಬದನ್ನು ತಿಳಿದು, ಬುದ್ದಿವಂತನು ಮಿತವಾಗಿ ನಿದ್ರೆ ಮಾಡಬೇಕಾಗಿರುತ್ತದೆ.