ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ XII ವಿಚಾರ ಗುಣಭೇದ - 246 – ಕಡೆಯೋಣ ಮೊದಲಾದ ಕ್ರಮಗಳಿಂದ ಸ್ನೇಹ (ಬೆಣ್ಣೆ) ಪ್ರತ್ಯೇಕಿಸಲ್ಪಟ್ಟಿರುವ, ಅರ್ಧಾಂಶ ನೀರುಳ್ಳ, ಅತಿಮಂದವೂ ಅತಿ ತೆಳ್ಳಗೂ ಅಲ್ಲದ, ಮತ್ತು ರಸದಲ್ಲಿ ಸೀ, ಹುಳಿ ಮತ್ತು ಚೊಗರು ಮಿಶ್ರವಾಗಿರುವ ಮಜ್ಜಿಗೆಗೆ ತಕ್ರವೆನ್ನುವದು. 50. ತಕ್ರಂ ನೈವ ಕ್ಷತೇ ದದ್ಯಾನ್ನೋಷ್ಣ ಕಾಲೇ ನ ದುರ್ಬಲೇ | ಮಜಿ ಗೆಯ ನ ಮೂರ್ಜ್ವಾಶ್ರಮದಾಹೇಷು ನ ರೋಗೇ ರಕ್ತ ಪೈತಿಕೇ || ಪಥ್ಯಾಪಥ್ಯ ಶೀತಕಾಲೇಗ್ನಿಮಾಂದ್ಯ ಚ ಕಪೋತೇಷ್ಠಾ ಮಯೇಷು ಚ | ಮಾರ್ಗಾವರೋಧೇ ದುಷ್ಟೇ ಚ ವಾಯೌ ತಕ್ರಂ ಪ್ರಶಸ್ಯತೇ || (ಸು. 178-79.) ತಕ್ರವನ್ನು ದುರ್ಬಲನಿಗೂ, ಕೃತನಾದವನಿಗೂ, ಮೂರ್ಚ್ಛೆ, ಭ್ರಮೆ, ಉರಿ ಮತ್ತು ರಕ್ತ ಪಿತ್ತ, ಈ ರೋಗಗಳಲ್ಲಿಯೂ, ಉಷ್ಣ ಕಾಲದಲ್ಲಿಯೂ, ಉಪಯೋಗಿಸಕೂಡದು. ಶೀತಕಾಲ ದಲ್ಲಿ, ಅಗ್ನಿಮಂದವಾದಾಗ್ಗೆ, ಕಫದಿಂದ ಹುಟ್ಟಿದ ವ್ಯಾಧಿಗಳಲ್ಲಿ, (ಪ್ರೋತಸ್ಸುಗಳು ಮಾ ರ್ಗದ ತಡೆಯಲ್ಲಿ, ಮತ್ತು ವಾಯು ಕೆಟ್ಟಾಗೆ ತಕ್ರವು ಪ್ರಶಸ್ತವಾದದ್ದಾಗಿರುತ್ತದೆ. 51. ತತ್ ಪುನರ್ಮಧುರಂ ಶ್ರೇಷ್ಠ ಪ್ರಕೋಪಣಂ ಪಿತ್ತಪ್ರಶಮನಂ ಚ | ಮಜ್ಜಿಗೆ ಸೀ ಅಮ್ಮಂ ವಾತಘ್ನಂ ಪಿತ್ತ ಕರಂ ಚ | ಹುಳಿಯಾದದ್ದರ ವಾತೇಷ್ಣುಂ ಸೈಂಧವೋಪೇತಂ ಸ್ವಾದು ಪಿತ್ತೇ ಸಶರ್ಕರಂ |

  • ಪಿಬೇತ್ರಕ್ರಂ ಕಥೇ ಚಾಪಿ ವ್ಯೂಷಕ್ಷಾರಸಮಾಯುತಂ || (ಸು. 179.) ಆ ತಕ್ರವು ಸೀಯಾಗಿದ್ದರೆ ಕಫವನ್ನು ಪ್ರಕೋಪಿಸುತ್ತದೆ ಮತ್ತು ಪಿತ್ತವನ್ನು ಶಮನ ಮಾಡುತ್ತದೆ; ಹುಳಿಯಾದರೆ, ವಾತ ನಾಶಮಾಡುವದಲ್ಲದೆ, ಪಿತ್ತ ವೃದ್ದಿ ಮಾಡುತ್ತದೆ. ವಾತ ರೋಗದಲ್ಲಿ ಹುಳಿಮಜ್ಜಿಗೆಯನ್ನು ಸೈಂಧವ ಉಪ್ಪು ಕೂಡಿಸಿಕೊಂಡು, ಪಿತ್ತರೋಗದಲ್ಲಿ ಸೀ

ಮಜ್ಜಿಗೆಯನ್ನು ಸಕ್ಕರೆ ಕೂಡಿಸಿಕೊಂಡು, ಮತ್ತು ಕಫರೋಗದಲ್ಲಿ (ಹುಳಿ ) ಮಜ್ಜಿಗೆ ಯನ್ನು ಕಟು ಚೂರ್ಣ ಮತ್ತು ಕ್ಷಾರ ಕೂಡಿಸಿಕೊಂಡು ಕುಡಿಯಬೇಕು 52. ಎಕಲ್ಪ ಏಷ ದಧ್ಯಾದಿಃ ಶ್ರೇಷ್ಟೋ ಗವೋSಭಿವರ್ಣಿತಃ | ಗೋವಿನ ದಧ್ಯಾ ವಿಕಲ್ಪಾನವಶಿಷ್ಟಾಂಸ್ತು ಕ್ಷೀರವೀರ್ಯಾತೃಮಾದಿಶೇತ್ | ವಿ ಪ್ರಶಂಸಾ - (ಸು. 179.) ನಾನಾ ದಧ್ಯಾದಿಗಳಲ್ಲಿ ದನದ ದದ್ಯಾದಿಗಳೇ ಶ್ರೇಷ್ಠವಾದವುಗಳಾದ್ದರಿಂದ, ಅವುಗಳ ಕುರಿತಾದ ಶಾಸ್ತ್ರವಿಧಿಯನ್ನು ವರ್ಣಿಸಿಯದೆ. ಉಳಿದ ಜಾತಿಯ ದಧ್ಯಾದಿಗಳ ಕುರಿತಾದ ವಿಧಿ ಗಳನ್ನು ಆಯಾ ಜಾತಿ ಹಾಲಿನ ವೀರ್ಯದ ವಿಚಾರದಿಂದ ಹೇಳತಕ್ಕದ್ದು. 53. ಈ ಅಧ್ಯಾಯದಲ್ಲಿ ಮೇಲೆ ಪ್ರಸ್ತಾಪಿಸಿದ ಪಾನೀಯಗಳನ್ನು ಬಿಟ್ಟು ಕಾಫಿ, ಚಾ, ಕಾಫಿ ಚಾ ಅಧವಾ ಕೋಕೊ ಕಷಾಯವನ್ನು ಸೇವಿಸುವ ಅಭ್ಯಾಸವು ದಿನೇದಿನೇ ಹಬ್ಬಿ ಮತ್ತು ಕೂ ಬೆಳೆಯುತ್ತಾ ಬರುವದರಿಂದ, ಆ ನವೀನ ಪಾನೀಯಗಳ ಗುಣದೋಷಗಳ ಕ ಉಪ ಯೋಗದ ವಿಷಯದಲ್ಲಿ ಕೆಲವರು ಪಾಶ್ಚಾತ್ಯ ಶಾಸ್ತ್ರಜ್ಞರೇ ಬರೆದಿರುವ ಅಭಿಪ್ರಾಯವನ್ನು ದೋಷಗಳು ಇಲ್ಲಿ ಸಂಕ್ಷೇಪವಾಗಿ ಸೂಚಿಸುವದು ಯುಕ್ತವಾಗಿ ಕಾಣುತ್ತದೆ |