ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೩೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 295 - e XVI ಪಾನ, ಜುಗಾರಾಟ, ಸೂಳೆಗಾರಿಕೆ, ಇವುಗಳಲ್ಲಿ ರುಚಿಯುಳ್ಳವನಾಗಬಾರದು. ಗೋಷ್ಯ ವಾದದ್ದನ್ನು ಹೊರಗೆ ಹಾಕಬಾರದು. ಯಾರನ್ನಾದರೂ ಅವಮಾನಿಸಬಾರದು. ತಾನೆಂಬ ಅಹಂಕಾರವುಳ್ಳವನಾಗಬಾರದು. ದಕ್ಷನಾಗಿಯೂ, ಸತ್ಯವನ್ನು ಬಿಡದವನಾಗಿಯೂ, ಅಸೂಯೆ ಪಡದವನಾಗಿಯೂ ಇರಬೇಕು. ಬ್ರಾಹ್ಮಣರನ್ನು ದೂಷಿಸಬಾರದು. ಗೋವು ಗಳಿಗೆ ದಂಟೆಯನ್ನೆತ್ತಬಾರದು ವೃದ್ದರನ್ನೂ, ಗುರುಗಳನ್ನೂ, ಜಾತಿಗಳನ್ನೂ (ಸಮಸ್ತ ಸಮೂಹಗಳನ್ನೂ), ಅರಸರನ್ನೂ, ಸಿಂದಿಸಬಾರದು ಮತ್ತು ಅವರಿಗೆ ಮಿಕ್ಕಿ ಮಾತಾಡ ಬಾರದು. ಬಾಂಧವರನ್ನೂ, ಅನುರಾಗ( ಪ್ರೇಮ)ವುಳ್ಳವರನ್ನೂ, ಸಂಕಷ್ಟದಲ್ಲಿರುವವರನ್ನೂ, ಇನ್ನೊಬ್ಬಗೆ ತಿಳಿಯದ ಗುಟ್ಟು ತಿಳಿದವರನ್ನೂ, ಹೊರಗೆ ಹಾಕಬಾರದು. ಧೀರನಾಗಿರಬೇಕು, ಆದರೆ ಕೊಬ್ಬಿದ ಬಲವುಳ್ಳವನಾಗಬಾರದು ತೃಪ್ತನಲ್ಲದ ನೌಕರನುಳ್ಳವನಾಗಬಾರದು. ವಿಶ್ವಾಸಕ್ಕೆ ಪಾತ್ರನಲ್ಲದ ಮತ್ತು ಸ್ವಕೀಯನಲ್ಲದ ಜನವನ್ನು ಹತ್ತಿರ ಇಟ್ಟುಕೊಳ್ಳಬಾರದು. ಒಂಟಿಗನಾಗಿರುವದರಲ್ಲಿ ಸುಖಪಡಬಾರದು. ಶೀಲ, ಆಚಾರ, ಉಪಚಾರಗಳಲ್ಲಿ ದುಃಖ ಪಡುವವನಾಗಬಾರದು ಸರ್ವರಲ್ಲಿಯೂ ನಂಬಿಕೆಯುಳ್ಳವನಾಗಬಾರದು ಸರ್ವರಲ್ಲಿಯೂ ಅವಿಶ್ವಾಸವುಳ್ಳವನಾಗಬಾರದು ಸರ್ವಕಾಲದಲ್ಲಿ ಯೂ ವಿಚಾರಮಾಡು( ಶೋಧಿಸುತ್ತಿರ ಬಾರದು ಕಾರ್ಯಕ್ಕೆ ತಕ್ಕ ಕಾಲವನ್ನು ದಾಟಿಹೋಗಬಿಡಬಾರದು ಪರೀಕ್ಷಿಸದೆ (ಜನ ರನ್ನು) ಒಳಗೆ ಹೊಗಿಸಿಕೊಳ್ಳಬಾರದು. ಇಂದ್ರಿಯಗಳಿಗಧೀನನಾಗಬಾರದು. ಮನಸ್ಸನ್ನು ಚಂಚಲವಾಗಿ ತಿರುಗಬಿಡಬಾರದು. ಬುಧೀಂದ್ರಿಯಗಳನ್ನು ಅತಿಭಾರವಾಗಿ ಹೊರಬಾರದು. ಅತಿಯಾಗಿ ದೀರ್ಘಾಲೋಚನೆಯುಳ್ಳವನಾಗಬಾರದು. ಸಿಟ್ಟಿಗೂ ಹರ್ಷಕ್ಕೂ ಅನುಸರಿಸಿ ನಡೆಯಬಾರದು. ಶೋಕಕ್ಕೆ ಒಳಗಾಗಬಾರದು. ಕಾರ್ಯಲಾಭದಲ್ಲಿ ಚಿಂತಾಪರನಾಗಿರ ಬಾರದು. ಮತ್ತು ಕಾರ್ಯಸಿದ್ದಿಯಾಗಿದ್ದಲ್ಲಿ ದೈನ್ಯಭಾವವನ್ನು ಪಡೆಯಬಾರದು. ಪ್ರಕೃತಿ ಯನ್ನು ಪದೇಪದೇ ನೆನಸುತ್ತಿರಬೇಕು ಹೇತುಎನ (ಫಲದಾಯಕ) ಪ್ರಭಾವದ ಕುರಿತು ಸಂದೇಹವಿಲ್ಲ ದವನಾಗಿರಬೇಕು. ಹೇತುವನ್ನಾರಂಭಿಸುತ್ತಿರುವವನಾಗಿರಬೇಕು. ಮಾಡಿ ಆಯಿತೆಂತ ವಿಶ್ವಾಸ ಮಾಡಬಾರದು. ಉತ್ಸಾಹ (ಅಥವಾ ಪುರುಷಪ್ರಯತ್ನ) ವನ್ನು ಬಿಡ ಬಾರದು. ಅಪವಾದವನ್ನು ನೆನಪುಮಾಡುತ್ತಿರಬಾರದು. 15. ಬ್ರಹ್ಮಚರ್ಯಜ್ಞಾನದಾನಮೈತ್ರೀಕಾರುಣ್ಯ ಹರ್ಷಾಪೇಕ್ಷಾ ಪ್ರಶಮಪ ಬ್ರಹ್ಮಚರ್ಯಾದಿ 8 ರಶ್ಚ ಸ್ಯಾದಿತಿ | (ಚ. 49.) ಪ್ರಧಾನ ಗುಣಗಳು | (ಮೈದುನನಿಯಮ) ಬ್ರಹ್ಮಚರ್ಯ, ಜ್ಞಾನ (ಈಶ್ವರನ), ದಾನ, ಮಿತ್ರಭಾವ, ಕರುಣ ಭಾವ, ಸಂತೋಷ, ಕೋರಿಕೆ, ಪ್ರಶಮಗುಣ (ಸಮಾಧಾನ), ಇವುಗಳಲ್ಲಿ ಆಸಕ್ತನಾಗಿರ ಬೇಕು. 16. ನಾಗ್ನಿಗೋಗುರುಬ್ರಾಹ್ಮಣ ಪ್ರೇಂಖಾದಂಪತ್ಯಂತರೇಣಾಭಿಯಾಯಾ ಆಗ್ನ್ಯಾದಿಗಳ ಮಧ್ಯ ತ್ | ನ ಶವಮನುಯಾಯಾತ್ | (ಸು. 508.) . ಹೋಗಬಾರದು ಅf