ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



 ಆ  xvII                                  - 320 -
      
          (c) ವಾತಪಿತ್ತಶ್ಲೇಷ್ಮಭೇದಾ ತ್ರಿವಿಧಾ ನಾಡಿರುಚ್ಯತೇ |
              ಸಾ ಚ ನಾಡೀ ಮನುಷ್ಯಾಣಾಂ ಯಾವತ್ಪ್ರಾಣಾವಧಿ ಸ್ಥಿರಾ || 
              ಯಸ್ಯಾ ಪ್ರಕೋಪಾಸ್ಟಜ್ಜಾಯಂತೇ ನಾನಾರೋಗಾಃ ಪೃಧಗ್ವಿಧಾಃ | 
              ಮಣಿಬಂಧಾಂಗುಷ್ಠ ಮೂಲೇ ಪಾದಮೂಲೇ ಗಲೇ ಹೃದಿ || 
              ಕುಕ್ಷೌ ರ್ಮುಧ್ಯ ಭ್ರುವೌ ರುಂಡಮಧ್ಯೇ ಚೈವೋಪಲಕ್ಷ್ಯತೇ |
              ಯಧಾಕ್ರಮಂ ಪರೀಕ್ಷ್ಯಾದೌ ಸಾಧ್ಯಾಸಾಧ್ಯಂ ವದೇತ್ಸುಧೀಃ || ಮನುಷ್ಯ ಮೃಗ ಮೂಸ್ರ್ಲ್ವಬಾಲ್ಯೇ ವಹೇನ್ನಾಡೀ ಕೌಮರೇ ಭ್ರೂಯುಗಾಂತರೇ |ಪಕ್ಷಿಗಳಲ್ಲಿ

ಸದಾ ಕಂರೇ ಹೃತ್ಪ್ರದೇಶೇ ಕುಕ್ಷೌ ಪಾದದ್ವಯೇ ತಧಾ || ನಾಡೀಸ್ಥಾನಗಳು ಕರಮೂಲೇ ಮುಷ್ಕಮಧ್ಯೆ ಮಧ್ಯೆ ವಯಸಿ ದೃಶ್ಯತೇ ||

              ತತ್ಪರೀಕ್ಷಾವಿಧಿಂ ವಕ್ಷೇ ಮೃಗೇ ವಾ ಖಗಜಾತಿಷು || 
              ನರಾಣಾಂ ದಕ್ಷಿಣೇ ಹಸ್ತೇನಾರೀಣಾಮಿತರೇ ಕರೇ | 
              ಗವಾಂ ನಾಸಾವುದೇ ದ್ವಂದ್ವೇ ವಾಜೀನಾಂ ಶ್ರವಣದ್ವಯೇ ||
              ಮುಖನಾಸಾಗ್ರಫುಚ್ಛೇಷು ನಾಗಾನಾಂ ಗಂಡಯೋದ್ವ| 
              ಅನ್ಯೇಷಾಮಪಿ ಜಂತೂನಾಂ ತತ್ತದ್ದೇಹಾನುಸಾರತಃ || 
              ನಾಡ್ಯಃ ಸ್ಥಾನವಿಶೇಷೇಷು ನಿವಸಂತಿ ಪೃಧಕ್ ಪೃಧಕ್ ||  (ಗ್ರಂಧಾಂತರ.)
  ನಾಡಿಯಲ್ಲಿ ವಾತ ಪಿತ್ತ ಕಫಗಳೆಂಬ ಮೂರು ಭೇದಗಳಿವೆ. ಆ ನಾಡಿಯು ಮನುಷ್ಯರ ಪ್ರಾಣಾಂತ್ಯದ ವರೆಗೆ ಸ್ಥಿರವಾಗಿರುವದು. ಅದರ ಪ್ರಕೋಪದಿಂದ ನಾನಾ ವಿಧವಾದ ಬೇರೆ

ಬೇರೆ ರೋಗಗಳುಂಟಾಗುವವು ಕೈಮಣಿಗಂಟಿನ ಹೆಬ್ಬೆಟ್ಟಿನ ಬುಡದಲ್ಲಿಯೂ, ಪಾದಗಳ ಬುಡದಲ್ಲಿಯೂ, ಗಂಟಲಲ್ಲಿಯೂ, ಹೃದಯದಲ್ಲಿಯೂ, ಹೊಟ್ಟೆಯಲ್ಲಿಯೂ ತಲೆಯಲ್ಲಿಯೂ, ಹುಬ್ಬಿನಲ್ಲಿಯೂ, ರುಂಡದ ಮಧ್ಯದಲ್ಲಿಯೂ, ಆ ನಾಡಿಯು ಕಾಣುತ್ತದೆ. ಬುದ್ಧಿವಂತನು ಕ್ರಮಪ್ರಕಾರ ಆ ನಾಡಿಯನ್ನು ಮೊದಲಾಗಿ ಪರೀಕ್ಷಿಸಿ, ರೋಗದ ಸಾಧ್ಯಾಸಾಧ್ಯತೆಯನ್ನು ಹೇಳಬೇಕು. ಬಾಲಕರ ನೆತ್ತಿಯಲ್ಲಿ, ಕುಮಾರರ ಹುಬ್ಬುಗಳ ನಡುವೆ, ಸದಾಕಾಲ ಕಂರ ದಲ್ಲಿ, ಹೃದಯದಲ್ಲಿ, ಕುಕ್ಷಿಯಲ್ಲಿ, ಎರಡು ಪಾದಗಳಲ್ಲಿ, ಕೈಬುಡದಲ್ಲಿ ಮತ್ತು ಮಧ್ಯ ವಯಸ್ಸಿನವನ ಅಂಡದ ಮಧ್ಯದಲ್ಲಿ ನಾಡಿಯು ಕಾಣುತ್ತದೆ. ಮೃಗ-ಪಕ್ಷಿ ಜಾತಿಗಳಲ್ಲಿಸಹ ನಾಡಿಯು ಸಿಕ್ಕುತ್ತದೆ. ಆ ನಾಡೀಪರೀಕ್ಷೆಯ ಕ್ರಮ ಹ್ಯಾಗಂದರೆ - ಮನುಷ್ಯರೊಳಗೆ ಗಂಡ ಸಿನ ಬಲಕೈಯಲ್ಲಿ ಮತ್ತು ಹೆಂಗಸಿನ ಎಡ ಕೈಯಲ್ಲಿ, ಗೋವುಗಳ ಎರಡು ಮೂಗುತುದಿ ಯಲ್ಲಿ, ಕುದುರೆಗಳ ಎರಡು ಕಿವಿಗಳಲ್ಲಿ, ಮುಖದಲ್ಲಿ, ಮೂಗಿನ ತುದಿಯಲ್ಲಿ ಮತ್ತು ಬಾಲ ದಲ್ಲಿ, ಆನೆಗಳ ಎರಡು ಗಂಡಸ್ಥಳಗಳಲ್ಲಿ ಮತ್ತು ಇತರ ಜಂತುಗಳಲ್ಲಿ ಆಯಾ ದೇಹಾನುಸಾರ ವಾಗಿ ಬೇರೆಬೇರೆ ಸ್ಥಾನಗಳಲ್ಲಿ ನಾಡಿಗಳು ಪ್ರತಿಪ್ರತ್ಯೇಕವಾಗಿ ಕಾಣುತ್ತವೆ.

              ತಾಸಾಂ ಪರೀಕ್ಷಾ ಕರ್ತವ್ಯಾ ಭಿಷಜಾ ಸೂಕ್ಷ್ಮ ಬುದ್ದಿನಾ |ಕದಲೀಮುಕುಳಾಕಾರಮಧವಾ ಪಂಕಜೋಪಮಂ ||    
          ಪಾಣಿಮಾಲಭ್ಯ ವಾಮೇನ ರೂಪಂ ಸಮ್ಯಗ್ವಿಲೋಕಯೇತ್ | (ಗ್ರಂಧಾಂತರ.)