ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ XVII - 322 - ಮತ್ತು ತ್ರಿದೋಷಗಳು ಕೂಡಿದಾಗ, ಅದರಲ್ಲಿ ಮೂರು ವಿಧವಾದ ಲಕ್ಷಣಗಳು ಬೆರಸಿ ಇರು ವವು. ವಾತಾಧಿಕವಾದ ನಾಡಿ ಮುಂಭಾಗದಲ್ಲಿ (ಹೆಬ್ಬೆ ರಳಿನ ಮೂಲದಲ್ಲಿ) ವೆಗ್ಗಳವಾಗಿ ನಡೆಯುವದು; ಪಿತ್ತಾಧಿಕವಾದಲ್ಲಿ ಮಧ್ಯನಾಡಿ ವೆಗ್ಗಳವಾಗಿ ನಡೆಯುವದು; ಶ್ಲೇಷ್ಮಾಧಿಕ ವಾದರೆ ಕಡೇ ನಾಡಿ ವೆಗ್ಗಳವಾಗಿ ನಡೆಯುವದು; ಮತ್ತು ಸನ್ನಿಪಾತದಲ್ಲಿ ಮೂರೂ ವೆಗ್ಗಳವಾಗಿ ನಡಯುವವು. (1)ಪಿತ್ತಶ್ಲೇಷ್ಷ್ಮಗತಿರ್ನಾಸ್ತಿ ವಾತಸ್ಯ ಗಮನೆ ಗತಿಃ | ವಾತ ಪಿನಾ ಪಿತ್ತಕಫ ತಸ್ಮಾತ್ತ್ವಗ್ರೇ ವಹೇದ್ವಾಒ೯ಲೂಕಾ ವಕ್ರಗಾ ಯಧಾ || (ನಾ. ಪ್ರ. 20 ) ಗಳಿಗೆ ಗತಿಯಿಲ್ಲ ಪಿತ್ತ ಕಫಗಳ ಗತಿಯು ವಾತದ ಗತಿಯ ಮೇಲೆ ಹೊಂದಿರುತ್ತದೆ. ವಾತ ಚಲಿಸಿದ ವಿನಾ ಅವುಗಳು ಚಲಿಸಲಾರವು. ಆದ್ದರಿಂದ ವಾತನಾಡಿಯು, ಜಿಗಳೆಯಂತೆ ವಕ್ರಗತಿಯಿಂದ, ಮುಂದಿನ ಭಾಗದಲ್ಲಿ ಚಲಿಸುತ್ತಿರುವದು (4) ಮುಹಃ ಸರ್ಪಗತಿರ್ನಾಡೀ ಮುಹುಭೇ೯ಕರ್ಗತಿಸ್ತಧಾ| ಗಾತಪಿತ್ತದ ನಾಡಿ ವಾತಪಿತ್ತ ದ್ವಯೋದ್ಭೂತಾಂ ತಾಂ ವದಂತಿ ವಿಚಕ್ಷಣಾಃ || (ಧ, 6 ) (ಗ್ರಂಥಾಂತರ) ಪದೇ ಪದೇ ಸರ್ಪ (ವಕ್ರ) ಗತಿ, ಹಾಗೆಯೇ ಪದೇ ಪದೇ ಕಪ್ಪೆಯ (ಹಾರುವ) ಗತಿ, ಎರಡೂ ನಾಡಿಯಲ್ಲಿ ಕಂಡರೆ, ಅದು ವಾತಪಿತ್ತಗಳೆಂಬ ದ್ವಂದ್ವ ದೋಷದಿಂದ ಹುಟ್ಟಿದ್ದೆಂತ ಬುದ್ದಿವಂತರು ಹೇಳುತ್ತಾರೆ. ) ಭುಜಗಾದಿಗತಿಸ್ತಸ್ಯಾ ರಾಜಹಂಸಗತಿಸ್ತಧಾ || ಕವರ್ವತದ ನಾಡಿ ವಾತಶ್ಲೇಷ್ಮದ್ವಯೋದ್ಫ ತಾಂ ಭಾಷಂತೇ ತದ್ವಿದ ಜನಾಃ || (ಗ್ರಂವಾಂತರ) (ನಾ. ಪ್ರ. 21-2) ಆ ನಾಡಿಯಲ್ಲಿ ಸರ್ಪಾದಿಗಳ (ವಕ್ರ) ಗತಿಯೂ, ಹಾಗೆಯೇ ರಾಜಹಂಸದ (ಮಂದ) ಗತಿಯೂ ಕಂಡರೆ, ಅದು ವಾತಶ್ಲೇಷ್ಮಗಳೆಂಬ ದ್ವಂದ್ವದ್ದೋಷದಿಂದುಂಟಾದದ್ದೆಂತ ಬಲ್ಲವರು ಹೇಳುತ್ತಾರೆ () ಮಂಡೂಕಾದಿಗತಿಂ ನಾಡೀಂ ಮಯೂರಾದಿಗತಿಂ ಧರಾಂ | - ಪಿತ್ತಶ್ಲೇಷ್ಮಸಮುದ್ಭೂ ಪ್ರವದಂತಿ ಮನೀಷಿಣಃ | ಕಫ ಪಿತ್ತದ ನಾಡಿ ಸೂಕ್ಷಾಶೀತಾ ಸ್ಥಿರಾ ನಾಡೀ ಪಿತ್ತಶ್ಲೇಷ್ಮಸಮುದ್ಭವಾ | (ನಾ, ಪ್ರ. 22.) (ಗ್ರಂಥಾಂತರ) ನಾಡಿಯಲ್ಲಿ (ಪಿತ್ತದ) ಮಂಡೂಕಾದಿಗತಿಯೂ, (ಕಫದ) ನವಿಲು ಮುಂತಾದವುಗಳ ಗತಿಯೂ ಕಂಡರೆ, ಅದು ಕಫಪಿತ್ತಗಳೆಂಬ ದ್ವಂದ್ವದೋಷದಿಂದುಂಟಾದದ್ದೆಂತ ಬುದ್ದಿಶಾಲಿಗಳು ಹೇಳುತ್ತಾರೆ; ಕಫಪಿತ್ತದಲ್ಲಿ ನಾಡಿಯು ಸೂಕ್ಷ್ಮವಾಗಿಯೂ, ಶೀತವಾಗಿಯೂ, ಸ್ಥಿರ ವಾಗಿಯೂ ಕಾಣುವದು.