ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 333 ಆ XIII ಬೆರಳುಗಳ ಅಡಿಯಲ್ಲಿ ಸಾವಕಾಶದಿಂದ ಉಬ್ಬು ನದು ಪ್ರಾಯಸ್ಥನಾದ ಗಂಡಸಿನಲ್ಲಿ ನಾಡಿಯು ಮಿನಿಟಿಗೆ 70ರಿಂದ 75ರ ವರೆಗೆ ಬಡಿಯುವದು ಹೊಸದಾಗಿ ಜನಿಸಿದ ಶಿಶುವಿ ನಲ್ಲಿ 130-140ರ ವರೆಗೆ ಇರುವ ನಾಡಿಯು 3 ವರ್ಷ ಪ್ರಾಯವಾಗುವಾಗ್ಗೆ ಸುಮಾರು 100ಕ್ಕ, 10 ವರ್ಷ ಪ್ರಾಯದಲ್ಲಿ ಸುಮಾರು 90ಕ್ಕೆ, 21 ವರ್ಷ ಪ್ರಾಯದಲ್ಲಿ 70-75ಕ್ಕ, ಮತ್ತು ಮುದಿತನದಲ್ಲಿ 65-70ಕ್ಕೆ ಇಳಿಯುವದು, ಅತಿ ವೃದ್ಧಾಪ್ಯದಲ್ಲಿ ಪುನ75-80ಕ್ಕೆ ಪಿರುವದು ನಾಡಿಯು ಮಲದ್ದಾಗಿರುವದಕ್ಕಿಂತ ಕೂತಾಗ್ಗೆ ಹೆಚ್ಚಿರುವದು, ಮಲಗಿದ್ದಾಗಿ ನದಕ್ಕಿಂತ ನಿಂತಾಗ್ಗೆ ಹೆಚ್ಚು ಬಡಿಯುವದು, ವ್ಯಾಯಾಮದಿಂದ, ಗಾಬರಿಯಿಂದ, ಅಥವಾ ಉಂಡದರಿಂದ ನಾಡಿಯ ವೇಗ ಹೆಚ್ಚು ವದು ಚಳಿಯಿಂದಲೂ, ಸಿದ್ರೆಯಿಂದಲೂ, ಉಪವಾಸ ದಿಂದಲೂ ಬಳಲುವಿಕೆಯಿಂದ, ಕಲವ ಔಷಧಗಳ ಸೇವನೆಯಿಂದಲೂ, ನಾಡಿಯ ವೇಗವು ಕಡಿಮೆಯಾಗುತ್ತದೆ ಹೆಂಗಸಿನಲ್ಲಿ ಗಂಡಸಿನಲ್ಲಿಯವಕ್ಕಿಂತ 6-14ರ ವರೆಗೆ ಪೆಟ್ಟು ಗಳು ಹೆಚ್ಚಾಗಿರುವ ಮುದಿತನದಲ್ಲಿ ನಾಡಿಯು ಗಟ್ಟಿಯಾಗುವದು ನಾಡಿಯು ಬಲವಾಗಿಯೂ, ಪೂರ್ಣವಾಗಿಯೂ, ಗಟ್ಟಿಯಾಗಿಯೂ, ವೇಗವುಳ್ಳದ್ದಾಗಿ ಯೂ ಇದ್ದರ. ಒರ ಅಧವಾ ಬಾಕು ಇರುವ ಲಕ್ಷಣವೆಂದರಿಯುವದು. ಷರಾ ಜ್ವರ ಬರುವ ಸಂದರ್ಭದಲ್ಲಿ ನಾಡಿಯು ಗಟ್ಟೆಯಿಲ್ಲದೆ ಮೃದುವಾಗಿರುತ್ತದೆಂತ ಇನ್ನೊಬ್ಬರ ಅಫಿ ಪ್ರಾಯವಿದೆ ಚಿಕ್ಕದಾಗಿ ಅತಿವೇಗದಿಂದ ಚಲಿಸುವದು ಹೆಚ್ಚು ಅಶಕ್ತಯಿಂದ. ನಾಡಿಯು ಒಮ್ಮೆ ಬೇಗನೆ ಮತ್ತು ಬಲವಾಗಿ ಹೊಡದು, ತೆರೆಯು ಹಿಂತಿರುಗಿದಂತೆ ತಟ್ಟನೆ ನಿಂತರೆ, (ಅಂದರೆ ಖಾಲಿಯಿದ್ದ ನಾಳವ ಕ್ಷಣದಲ್ಲಿ ತುಂಬ ತಟ್ಟನೆ ಖಾಲಿಯಾದ ಹಾಗೆ ಕಂಡರೆ) ಹೃದಯ ದ್ವಾರದ ಮುಚ್ಚಳ ಸರಿಯಿಲ್ಲ ಎಂತ ತಿಳಿಯಬೇಕು. ಆಗಾಗ್ಗೆ ಮಧ್ಯದ ಒಂದೆರಡು ನಾಡಿ ಪೆಟ್ಟುಗಳು ತಪ್ಪು ವಂಧಾದ್ದು ಹೃದಯದಲ್ಲಿ ಅಧವಾ ಶ್ವಾಸಕೋಶದಲ್ಲಿ ರಕ್ತ ಚಲಿಸುವಾಗ್ಗೆ ಉಂಟಾಗುವ ಅಭ್ಯಂತರದಿಂದ ಅಥವಾ ಬಾಕುಗಳಿಂದ, ಅಧವಾ ಮೆದುಳು ಮೃದುವಾಗು ವದರಿಂದ, ಅಧವಾ ಮೂರ್ಡ್ನ ಮುಂತಾದ್ದರಿಂದ, ಅಧವಾ ಹೃದಯದೊಳಗಣ ಮುಚ್ಚಳ ಗಳ ವಿಕಾರದಿಂದ, ಅಥವಾ ಅಂತ್ರವೃದ್ಧಿಯಲ್ಲಿ ಒಳಗೆ ದುಷ್ಟ ವ್ರಣವಾಗುವದರಿಂದ, ಅಥವಾ ಅತಿವ್ಯಾಯಾಮ, ಜಾಗರ, ವಿರಾಮವಿಲ್ಲದಿರೋಣ, ವ್ಯಾಕುಲತೆ, ಇವುಗಳಿಂದ, ಅಥವಾ ಸ್ವಲ್ಪ ಮಟ್ಟಿಗೆ ಹೊಟ್ಟೆಯುಬ್ಬರದಿಂದ ಕೂಡಿದ ಅಜೀರ್ಣದಿಂದ, ಅಧವಾ ವೃದ್ಧಾಪ್ಯದಿಂದ, ಅಧವಾ ನರಗಳು ಗಾಬರಿಪಡುವದರಿಂದ ಉಂಟಾಗುತ್ತದೆ. ಇದು ಅತಿಯಾಗಿ ಚಾ ಕುಡಿಯು ವದರಿಂದಲೂ, ಚುಟ್ಟ ಸೇದುವದರಿಂದಲೂ, ಉಂಟಾಗುತ್ತದೆ. ಅಪಸ್ಮಾರದ ವೇಗ ತೊಡ ಗುವ ಸಂದರ್ಭದಲ್ಲಿಯೂ ಈ ದೋಷ ಕಾಣುವದುಂಟು, ಸನ್ನಿಪಾತಜ್ವರ ಮುಂತಾದ ಕೆಲವು ಕಠಿಣ ವ್ಯಾಧಿಗಳಲ್ಲಿ ಅದು ಹೆಚ್ಚಾಗಿ ಭಯಸೂಚಕವಾಗಿರುತ್ತದೆ. ದೇಹದಲ್ಲಿ ರಕ್ತ ಕಡಿಮೆಯಾಗಿ ಬಲಹೀನತೆಯುಂಟಾದಾಗ್ಗೆ ನಾಡಿಯು ಅಬಲಿಯಾಗು ಇದೆ. ನಾಡಿಪೆಟ್ಟುಗಳ ಸಂಖ್ಯೆಯು ಅಂಗದಂಡನೆ ಮುಂತಾದ ವಿಶೇಷ ಕಾರಣವಿಲ್ಲದೆ ಸ್ವಾಭಾವಿಕವಾಗಿರತಕ್ಕ ಸಂಖ್ಯೆಗಿಂತ 8-10 ಹೆಚ್ಚು ಅಥವಾ ಕಡಿಮೆ ಇದ್ದರೆ, ಅಸ್ವಸ್ಥತೆ ಉಂಟೆಂತ ಊಹಿಸಬೇಕು. ಕಡಿಮೆಯಾಗುವದು ಧಾತು ದುರ್ಬಲತೆಯ ಲಕ್ಷಣ. ಹೆಚ್ಚಾ ದರೆ ಅಲ್ಪಸ್ವಲ್ಪವಾದರೂ ಜ್ವರದ ಚಿಹ್ನೆ ಇರಬೇಕೆಂತ ತಿಳಿಯಬಹುದು.