ಈ ಪುಟವನ್ನು ಪರಿಶೀಲಿಸಲಾಗಿಲ್ಲ.
339. - C XVII . ರಿಂದಲೂ, ಉಂಟಾಗುತ್ತದೆ. ರಕ್ತವು ಹೆಚ್ಚಾಗಿದ್ದರೆ ಕೆಂಪುವರ್ಣವೇ ಕಾಣುವದು. ಒಳಗೆ ವ್ರಣ ಇದ್ದರೆ, ಅದರ ದೆಸೆಯಿಂದ ಮಲದಲ್ಲಿ ಕೀವು ಕಾಣಬಹುದು. ವಾಸನೆಯ ಭೇದಗಳು ಸಹ ರೋಗನಿಶ್ಚಯಕ್ಕೆ ಪ್ರಯೋಜನಕರವಾದವಾಗಿರುತ್ತವೆ. ತೆಳ್ಳಗಿನ ಮಲವು ವಿಷಚಿ ಯಲ್ಲಿ ಅಕ್ಕಚ್ಚಿನ ರೂಪವಾಗಿಯೂ, ಆಮಭೇದಿಯಲ್ಲಿ ಹೆರದ ಮಾಂಸದಂತೆಯೂ ಕಾಣು ವದು. ಬಿಳೇ ವರ್ಣವು ಪಿತ್ತ ಕಡಿಮಯಾದದ್ದರಿಂದ ಉಂಟಾಗುವದು. ಮೂಲವ್ಯಾಧಿ ಮೊಳೆಗಳಿಂದ, ಆಸನದ ಕುರುವಿನಿಂದ, ಅಧವಾ ಕಳಕರುಳು ಗಾಯಪಟ್ಟಿದ್ದರಿಂದ, ಹೊರಟು ಬರುವ ರಕ್ತವು ಕೆಂಪಾಗಿಯೇ ಇರುವದು. ಮಕ್ಕಳ ಅತಿಸಾರದಲ್ಲಿ ಮಲವು ವಾಡಿಕೆಯಾಗಿ ಹಸುರಾಗಿರುವದು; ಮತ್ತು ಅತಿಸಾರ ವಾಸಿಯಾದ ಮೇಲೆ ಚಿರಕಾಲದ ವರೆಗೆ ಆ ವರ್ಣವೇ ನಿಂತಿರುವದು ಅರಸಿನವಾದ ಮಲ ಸ್ವಲ್ಪ ಹೊತ್ತು ಇರಿಸಲ್ಪಟ್ಟರೆ, ಹಸುರಾಗುವದುಂಟು. ಮಲದ ಜೊತೆಯಲ್ಲಿ ಹುಳ ಉಂಟೋ, ಇದ್ದರೆ ಆ ಹುಳ ಯಾವ ಜಾತಿಯದು, ಎಂದಿದನ್ನು ಸಹ ವಿಚಾರಿಸಿ ಆಲೋಚಿಸಬೇಕು