ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

-343-

                                                             ಅ XVIII
 ಷರಾ 'ತಾಮ್ಯತಿ' ಎಂದರೆ ಪದೇ ಪದೇ ಮೂಛೆಹೋಗುತ್ತಾನೆಂದರ್ಥವೆಂತ ಸಿ ಸಂ ವ್ಯಾ , ಹರ್ಷವಿಲ್ಲದವ ನಾಗುತ್ತಾನೆ ಎಂದರ್ಥವಾಗಿ ಭಾ ಪ್ರ (ಪು 316) • ಆವಿಲಾಕ್ಷಂ' ಎಂದರೆ ಗಂಜಿನೀರಿನಂತೆ ಕಣ್ಣೀರು ಸುರಿಯುವಂಥವ ನೆಂತ ನಿ ಸಂ ವ್ಯಾ

11. ಅತಿಸಾರದಲ್ಲಿ ಅಶುಭಸೂಚನೆ

        ಶ್ವಾಸಶೂಲಪಿಪಾಸಾರ್ತ೦ ಕ್ಷೀಣಂ ಜ್ವರನಿಪೀಡಿತಂ | 
        ವಿಶೇಷೇಣ ನರಂ ವೃದ್ದ ಮತೀಸಾರೋ ವಿನಾಶಯೇತ್ || (ಸು 123.)  
 ಉಬ್ಬಸ, ಶೂಲೆ, ಬಾಯಾರಿಕೆ, ಕ್ಷೀಣತೆ, ಜ್ವರ, ಇವುಗಳಿಂದ ಪೀಡಿತನಾದ ರೋಗಿಯನ್ನು, ವಿಶೇಷವಾಗಿ (ಅಂಧಾ ಸ್ಥಿತಿಯ) ಮುದುಕನನ್ನು, ಅತಿಸಾರವು ಕೊಲ್ಲುವದು

12. ಯಕ್ಷ್ಮ ರೋಗದಲ್ಲಿ ಅಶುಭಸೂಚನೆ

  (4) ಶುಕ್ಲಾಕ್ಷಮನ್ನಷ್ಟಾರಮೂರ್ಧ್ವಶ್ವಾಸನಿಪೀಡಿತಂ |
      ಕೃಚ್ಛ್ರೇಣ ಬಹು ಮೇಹಂತಂ ಯಕ್ಷ್ಮಾ ಹಂತೀಹ ಮಾನವಂ || 
                                                 (ಸು. 123.) 
 ಕಣ್ಣು ಬೆಳ್ಳಗಾಗಿರೋಣ, ಅನ್ನದ್ವೇಷ, ಊರ್ಧ್ವಶ್ವಾಸ, ಕಷ್ಟದಿಂದ ಬಹು ಸರ್ತಿ ಮೂತ್ರಿಸೋಣ, ಈ ಲಕ್ಷಣಗಳುಳ್ಳ ಮನುಷ್ಯನು ಯಕ್ಷ್ಮರೋಗದಿಂದ ಸಾಯುವನು.
ಷರಾ 'ಮೇಹಂತಂ' ಮಲಬಿಡುವವನೆಂತ ನಿ ಸಂ ವ್ಯಾ ಶುಕ್ರವನ್ನು ಮೂತ್ರಿಸುವವನೆಂತ ಭಾ ಪ್ರ (ಪು 366)
  (5) ಯಕ್ಷ್ಮಾ ಪಾರ್ಶ್ವರುಜಾನಾಹರಕ್ತಛದ್ಯಂ‍ಸತಾವನಂ | (ವಾ. 173.)
 ಯಕ್ಷರೋಗವು ಪಕ್ಕಗಳ ಶೂಲೆ, ಹೊಟ್ಟೆಯುಬ್ಬರ, ರಕ್ತವಾಂತಿ, ಹೆಗಲಲ್ಲಿ ಉರಿ, ಈ ದುರ್ಲಕ್ಷಣಗಳುಳ್ಳವನನ್ನು ಕೊಲ್ಲುವದು.
  
  (6) ಶರೀರಾಂತಾಶ್ಚ ಶೋಭಂತೇ ಶರೀರಶ್ಚೋಪಶುಷ್ಯತಿ |
      ಬಲಂ ಚ ಹೀಯತೇ ಯಸ್ಯ ರಾಜಯಕ್ಷ್ಮಾ ಹಿನಸ್ತಿ ತಂ || (ಚ. 395.) 
 ರಾಜಯಕ್ಷ್ಮರೋಗದವನ ಶರೀರದ ಅಂತ್ಯಭಾಗಗಳಲ್ಲಿ ಶೋಫೆ ಕಂಡು, ಶರೀರವು ಒಣಗುತ್ತಾ, ಬಲವು ಕಡಿಮೆಯಾಗುತ್ತಾ ಬಂದರೆ, ಅವನು ಆ ರೋಗದಿಂದ ಸಾಯುವನು.

13. ಗುಲ್ಮದಲ್ಲಿ ಅಶುಭಸೂಚನೆ

       ಶ್ವಾಸಶೂಲಪಿಪಾಸಾನ್ನವಿದ್ವೇಷಗ್ರಂಧಿಗಮೂಢತಾಃ |  
       ಭವಂತಿ ದುರ್ಬಲತ್ವಂ ಚ ಗುಲ್ಮನೋ ಮೃತ್ಯುಮೇಯತಃ || (ಸು 123 )
 ಉಬ್ಬಸ, ಶೂಲೆ, ಬಾಯಾರಿಕೆ, ಅನ್ನದ್ವೇಷ, ಮೂಢವಾದ ಗಂಟು (ಚೆಂಡು), ಅಶಕ್ತಿ. ಈ ಲಕ್ಷಣಗಳು ಮೃತ್ಯುವನ್ನು ಸವಿಾಪಿಸುವ ಗುಲ್ಮರೋಗಿಯಲ್ಲಿ ಉಂಟಾಗುವವು.

14. ವಿದ್ರಧಿಯಲ್ಲಿ ಅಶುಭಸೂಚನೆ

       ಆಧ್ಮಾತಂ ಬದ್ದ ನಿಷ್ಯಂದಂ ಛರ್ದಿಹಿಕ್ಕಾತೃಡನ್ವಿತಂ |  
       ರುಜಾಶ್ವಾಸಸಮಾವಿಷ್ಟಂ ವಿದ್ರಧಿರ್ನಾಶಯೇನ್ನರಂ  || (ಸು. 124.)