ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ XVIII -, 346 - ಬಲದಲ್ಲಿಯೂ, ಮಾಂಸದಲ್ಲಿಯೂ, ಬಹಳ ಕ್ಷೀಣವಾಗಿರುವ ರೋಗಿಯ ವ್ಯಾಧಿಯು ಸರಿಯಾಗಿ ಚಿಕಿತ್ಸೆ ನಡಿಸುತ್ತಾ ಬಂದಾಗಲೂ ವೃದ್ಧಿಯಾಗುತ್ತಾ ಹೋದರೆ, ಅವನು ಆಯುಷ್ಯತೀರಿದವನೆಂದು ತಿಳಿಯಬೇಕು. 26. ನಿವರ್ತತೇ ಮಹಾವ್ಯಾಧಿಃ ಸಹಸಾ ಯಸ್ಯ ದೇಹಿನಾಃ|| ಮಹಾವ್ಯಾಧಿಗಳು ಫಕ್ಕನೆ ನ ಚಾಹಾರಫಲಂ ಯಸ್ಯ ದೃಶ್ಯತೇ ಸ ವಿನಶ್ಯತಿ || (ಸು, 122. ವಾಸಿಯಾಗುವದು ರೋಗಿಯ ಮಹಾ ರೋಗವು ಫಕ್ಕನೆ ನಿವೃತ್ತಿಯಾಗಿ, ಅವನಿಗೆ ಕೊಟ್ಟ ಆಹಾರದ ಫಲವು ಕಾಣುವದಿಲ್ಲವಾದರೆ, ಅವನು ಸಾಯುವನು


2 27. ವಿಷೇ ಕುಪ್ಸ್ಮಾಷ್ಠೇಪ್ಯಪಸ್ಯಾರೇ ದುರ್ನಾಮೋದರಕಾಮಿಲೇ | ಕಾಲಹರಣವಿಂದ ಆದೌ ಪ್ರತಿಕ್ರಿಯಾಂ ಕುರ್ಯಾತ್ಪಶ್ಚಾತ್ಸಾಧ್ಯಂ ನ ಯಾನ್ತಿ ತೇ | ಕ ಅಸಾಧ್ಯವಾಗುವ ರೋಗಗಳು (ವೈ. ಸಾ. ಸಂ. 27.) ವಿಷ, ಕುಷ್ಠ, ಅಪಸ್ಮಾರ, ಮೂಲವ್ಯಾಧಿ, ಉದರವ್ಯಾಧಿ, ಕಾಮಿಲೆ, ಈ ರೋಗಗಳಿಗೆ ಪ್ರತಿಕ್ರಿಯೆಯನ್ನು ಆರಂಭದಲ್ಲಿಯೇ ಮಾಡತಕ್ಕದ್ದು ; ಕಾಲ ಕಳೆದರೆ ಅವು ಸಾಧ್ಯವಾಗುವದಿಲ್ಲ. 28. ಅತಿಸಾರೇ ಜ್ವರೇ ಚೈವ ರಕ್ತಪಿತ್ತೇ ದೃಗಾಮಯೇ || ಚಿರಪ್ರತಿಕಾರ್ಯ ಆದೌ ನ ಪ್ರತಿಕರ್ತವ್ಯಂ ವ್ಯಾಧಿವೇಗೋ ಹಿ ದುರ್ಜಯಃ || ವಾದ ರೋಗಗಳು (ವೈ. ಸಾ. ಸಂ. 27.) ಅತಿಸಾರ, ಜ್ವರ, ರಕ್ತಪಿತ್ತ, ನೇತ್ರರೋಗ, ಇವುಗಳಿಗೆ ಆರಂಭದಲ್ಲಿ ಪ್ರತಿಕ್ರಿಯೆಯನ್ನು ಮಾಡಬಾರದು; ಯಾಕಂದರೆ, ಅವುಗಳ ವೇಗವು ಜಯಿಸಲಶಕ್ಯವಾಗಿರುತ್ತದೆ.