ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

XL11 ಉಪೋದ್ಘಾತ ಪುನಃ (ಪು 95 ನೋಡಿ) ವಿಪಾಕದಲ್ಲಿ ಹುಳಿಯನ್ನು ಸೇರಿಸಿ ಮೂರು ವಿಧ ಎಂತ ಹೇಳು ವದು ಸರಿಯಲ್ಲ, ಹುಳಿಯನ್ನು ಪ್ರತ್ಯೇಕವಾದೊಂದು ವಿಪಾಕವಾಗಿ ಎಣಿಸುವದಾದರೆ, ಉಪ್ಪನ್ನು ಸಹ ಒಂದು ವಿಪಾಕವಾಗಿ ಲೆಕ್ಕಿಸಬೇಕಾದೀತು, ಎಂತ ಸಹ ಬರೆದಿದ್ದಾನೆ. ಚರಕನು ಉಪ್ಪು, ಹುಳಿ ಸಹ ವಿಪಾಕಗಳೆಂತ ಎಣಿಸಿ, ವಿಪಾಕವು ನಾಲ್ಕು ವಿಧ ಎಂತ ಬರೆ ದಿರುತ್ತ, ಆ ಪಕ್ಷ ಉಂಟೆಂಬ ಸಂಗತಿಯನ್ನು ತಿಳಿಯದವನ ಹಾಗೆ ಸುಶ್ರುತನು ಯಾಕೆ ಹಾಗೆ ಬರೆದ? (4) ಶಸ್ತ್ರಕರ್ಮದಲ್ಲಿ ಪ್ರವೀಣನಾದ ಸುಶ್ರುತ ಸಹ ಸೂತ್ರಸ್ಥಾನದ 24ನೇ ಅಧ್ಯಾಯ ದಾರಂಭದಲ್ಲಿ – “ವ್ಯಾಧಿಗಳು ಶಸ್ತ್ರ ಸಾಧ್ಯ, ಸ್ನೇಹಾದಿ ಕ್ರಿಯಾಸಾಧ್ಯ, ಎಂತ ಎರಡು ವಿಧ, ಶಸ್ತ್ರ ಸಾಧ್ಯವಾದ ರೋಗಗಳಿಗೆ ಸ್ನೇಹಾದಿಚಿಕಿತ್ಸೆಯನ್ನು ಮಾಡುವದಕ್ಕೆ ಪ್ರತಿಷೇಧವಿಲ್ಲ, ಆದರೆ, ಸ್ನೇಹಾದಿ ಕ್ರಿಯಾಸಾಧ್ಯವಾದ ರೋಗಗಳಲ್ಲಿ ಶಸ್ತ್ರಕರ್ಮವನ್ನು ನಡಿಸುವದಿಲ್ಲ” ಎಂಬ ಅಭಿಪ್ರಾಯ ಬರೆದಿದ್ದಾನೆ - (5) ಚರಕನ ಕಾಲದಲ್ಲಿ ಯೂ ಶಸ್ತ್ರಕರ್ಮದ ಕ್ರಮ ಇತ್ತೆಂಬದು ಚರಕಸಂಹಿತೆಯ ಅನೇಕ ವಚನಗಳಿಂದ ಕಾಣುತ್ತದೆ ಉದರವ್ಯಾಧಿಯಲ್ಲಿ ಔಷಧಗಳಿಂದ ಮಾಡಲ್ಪಟ್ಟ ಚಿಕಿತ್ಸೆಯ ನಿಷ್ಪಲವಾದಾಗ, ಅನುಭವಶಾಲಗಳಿಂದ ಶಸ್ತ್ರಕರ್ಮವನ್ನು ನಡೆಸಬೇಕಾಗಿ ಹೇಳಿ, ನಾಭಿಯ ಕೆಳಗೆ ನಾಲ್ಕು ಅಂಗುಲದಲ್ಲಿ ಹೊಟ್ಟೆಯ ಎಡಪಾರ್ಶವನ್ನು ಮಿತಪ್ರಮಾಣವಾ| ಹೊಗಿಸಿದ ಶಸ್ತ್ರದಿಂದ ಸೀಳಿ, ಕರುಳನ್ನು ಪರೀಕ್ಷಿಸಿ, ಅದರ ದೋಷಗಳನ್ನು ಪರಿಹರಿಸಿ, ಪುನಃ ಅದನ್ನು ಸ್ಥಾನದಲ್ಲಿರಿಸಿ ಹೊಲಿಯುವ ಕ್ರಮ ಮತ್ತು ಜಲೋದರದಲ್ಲಿ ನಳಿಗೆಯನ್ನು ಹೊಗಿಸಿ ನೀರನ್ನು ತೆಗೆಯುವ ಕ್ರಮ ಸಹ ಚರಕಸಂಹಿತೆಯಲ್ಲಿ ಹೇಳಲ್ಪಟ್ಟಿವ (ಚಿಕಿತ್ಸಾಸ್ಥಾನದ 18ನೇ ಅಧ್ಯಾಯ), ಪುನಃ ಅರ್ಶಸ್ಸು ವ್ಯಾಧಿಯಲ್ಲಿ – “ಮೂಳೆಗಳನ್ನು ಶಸ್ತ್ರದಿಂದ ಕತ್ತರಿಸು ವದು ಒಳ್ಳೇದೆಂತ ಒಂದು ಪಕ್ಷ, ಕ್ಷಾರವನ್ನು ಉಪಯೋಗಿಸಿ ಸುಡುವದು ಒಳ್ಳೇದೆಂತ ಒಂದು ಪಕ್ಷ, ಬೆಂಕಿಯಿಂದಲೇ ಸುಡುವದು ಒಳ್ಳೇದೆಂತ ಇನ್ನೊಂದು ಪಕ್ಷ, ಹೀಗೆ ಮೂರು ಪಕ್ಷಗಳಿವೆ, ವೈದ್ಯನು ಅನುಭವಸ್ಥನಾದರೆ, ಆ ಮೂರು ಕ್ರಮಗಳೂ ಶಾಸ್ತ್ರ ರೀತ್ಯಾ ಸರಿಯಾ ದವುಗಳೇ ಮತ್ತು ಅವುಗಳನ್ನು ನಡಿಸುವಲ್ಲಿ ವ್ಯತ್ಯಾಸವಾಗಿ ಹೋದರೆ ಬೇರೆ ಬೇರೆ ಅನರ್ಧಗಳು ಉಂಟಾಗುತ್ತವೆ” ಎಂಬ ಅಭಿಪ್ರಾಯ ಹೇಳಲ್ಪಟ್ಟಿದೆ, (ಚಿಕಿತ್ಸಾಸ್ಥಾನದ ನೇ ಅಧ್ಯಾಯ ನೋಡಿ). ಅಶ್ವಿನೀದೇವತೆಗಳು ನಡಿಸಿದ ಅದ್ಭುತ ಶಸ್ತ್ರಾದಿ ಕರ್ಮಗಳನ್ನು ಪ್ರಸ್ತಾಪಿಸಿ ಅವರ ಶ್ಲಾಘನೆಯು ಚಿಕಿತ್ಸಾಸ್ಥಾನದ ಪ್ರಧಮ ಅಧ್ಯಾಯದಲ್ಲಿ ವಿಸ್ತ್ರತವಾಗಿದೆ ಗರ್ಭದಲ್ಲಿ ಶಿಶು ಮೃತವಾದ ಲಕ್ಷಣಗಳನ್ನೆಲ್ಲಾ ವರ್ಣಿಸಿ, ಆ ಶಿಶುವನ್ನು ಹೊರಗೆ ಹಾಕುವದಕ್ಕೆ ಸಂಶಮನರೂಪವಾದ ಚಿಕಿತ್ಸೆ ನಡಿಸಬೇಕಾಗಿ ಕೆಲವರು, ಅಧರ್ವವೇದದಲ್ಲಿ ವಿಹಿತವಾದ ಮಂತ್ರಾದಿ ಕ್ರಮಗಳನ್ನು ನಡಿಸಬೇಕಾಗಿ ಕೆಲವರು ಚೆನ್ನಾಗಿ ಅನುಭವವುಳ್ಳ ಶಸ್ತ್ರಕರ್ಮದ ವೈದ್ಯರಿಂದ ಅದನ್ನು ತೆಗಿಸಬೇಕಾಗಿ ಕೆಲವರು ಹೇಳುತ್ತಾರೆಂತ ಹೇಳಿ ಬಿಟ್ಟಿ ದ್ದಾನಲ್ಲದೆ, ತನ್ನ ಮತವನ್ನು ಚರಕಾಚಾರ್ಯನು ಹೇಳಿರುವದಿಲ್ಲ. (ಶರೀರಸ್ಥಾನದ ಎಂಟನೇ ಅಧ್ಯಾಯ ನೋಡಿರಿ.) (6) ಗರ್ಭದಲ್ಲಿ ಪ್ರಧಮದಲ್ಲಿ ಉಂಟಾಗುವ ಅಂಗ ಯಾವದೆಂಬದರ ಕುರಿತು ಭರ ದ್ವಾಜ, ವಾಹ್ಲೀಕ,ಭದ್ರಕಾವ್ಯ, ಭದ್ರಶೌನಕ, ವಡಿಶ, ಜನಕ, ಮತ್ತು ಕಶ್ಯಪ ಕೊಟ್ಟ ಬೇರೆ