ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



                      - 353 -         ಅ XIX                           


23.  ವಿಗಂಧೇನಾಪರಾಮೃಷ್ವಮವಿಪನ್ನಂ ರಸಾದಿಭಿಃ| 
     ನವಂ ದ್ರವ್ಯಂ ಪುರಾಣಂ ವಾಗ್ರಾಹ್ಯಮೇವ ವಿನಿರ್ದಿಶೇತ್ ||  
     ವಿಡಂಗಂ ಪಿಪ್ಪಲೀ ಕ್ಷೌದ್ರಂ ಸರ್ಪಿಶ್ಚಾಪ್ಯನವಂ ಹಿತಂ | 
     ಶೇಷಮನ್ಯತ್ತ್ವಭಿನವಂ ಗೃಹ್ಣೀಯಾದ್ದೋಷವರ್ಜಿತಂ|| (ಸು.138.) 
  [ಪ್ರಶಸ್ತ ಔಷಧ ಲಕ್ಷಣ, ವಿಡಂಗಾದಿ ಹಳೇದು ಪ್ರಶಸ್ತ]
ಅನ್ಯವಾಸನೆಯಿಲ್ಲದ್ದಾಗಿಯೂ, ರಸಾದಿಗಳು ಕೆಡದ್ದಾಗಿಯೂ, ಇರುವ ಔಷಧವನ್ನು ನೋಡಿ, ಹೊಸತಾಗಬೇಕಾದ್ದಲ್ಲಿ ಹೊಸತಾಗಿಯೂ, ಹಳೇದಾಗಬೇಕಾದ್ದಲ್ಲಿ ಹಳೇದಾಗಿಯೂ ಉಪಯೋಗಿಸಬೇಕು. ವಾಯುವಿಳಂಗ, ಹಿಪ್ಪಲಿ, ಜೇನು, ತುಪ್ಪ, ಇವು ಹೊಸತಲ್ಲದ್ದು ಹಿತ; ಮಿಕ್ಕಾದ್ದೆಲ್ಲ ಹೊಸತಾದದ್ದನ್ನೇ ದೋಷವಿಲ್ಲದ್ದನ್ನು ನೋಡಿಕೊಂಡು ಉಪಯೋಗಿಸತಕ್ಕದ್ದು.
*ಷರಾ ಬೆಲ್ಲ, ಅಕ್ಕಿ ಸಹ ಹಾಗೆಯೇ ಹಳೇದಾಗಬೇಕೆಂತ ಧಾ ಪ್ರ (ಪು 49)

24.  ಜಂಗಮಾನಾಂ ವಯಸ್ಧಾನಾಂ ರಕ್ತರೋಮನಖಾದಿಕಂ | 
     ಕ್ಷೀರಮೂತ್ರಪುರೀಷಾಣಿ ಜೀರ್ಣಾಹಾರೇಷು ಸಂಹರೇತ್ ||   
 [ಜಂಗಮಜಾತಿ ಔಷಧಗಳ ಸಂಗ್ರಹ]             (ಸು. 138.)
ಜಂಗಮ ಜಾತಿಗಳಿಂದ ಸ್ವೀಕರಿಸುವ ರಕ್ತ, ರೋಮ, ಉಗುರು, ಮುಂತಾದವು ಪ್ರಾಯದಲ್ಲಿರುವ ಪ್ರಾಣಿಗಳದಾಗಿರಬೇಕು, ಮತ್ತು ಹಾಲು, ಮೂತ್ರ, ಮಲ (ಸಗಣಿ)ಗಳನ್ನು ಆಹಾರವು ಜೀರ್ಣವಾಗಿರುವ ಕಾಲಗಳಲ್ಲಿ ಸಂಗ್ರಹಿಸಬೇಕು.
25.  ಪ್ಲೋತಮೃದ್ಭಾಂಡಫಲಕಶಂಕುವಿನ್ಯಸ್ತಭೇಷಜಂ |
     ಪ್ರಶಸ್ತಾಯಾಂ ದಿಶಿ ಶುಚೌ ಭೇಷಜಾಗಾರಮಿಷ್ಯತೇ || (ಸು. 138.) 
 [ಔಷಧಗಳ ಜೋಪಾಸನೆ ಕ್ರಮ]
ಔಷಧಿಯನ್ನು ವಸ್ತ್ರದ ತುಂಡಿನಲ್ಲಿ, ಮಣ್ಣಿನ ಗಡಿಗೆಯಲ್ಲಿ, ಹಲಿಗೆ ಮೇಲೆ, ಅಥವಾ ಗೂಟದಲ್ಲಿ ಅನುಕೂಲಕ್ಕೆ ಸರಿಯಾಗಿ ಇಡುವದು ಒಳ್ಳೇದು, ಮತ್ತು ಮದ್ದಿನ ಕೋಣೆಯು ಶುಚಿಯಾದ ಮತ್ತು ಪ್ರಶಸ್ತವಾದ ಕಡೆಯಲ್ಲಿರಬೇಕು.
   ಧೂಮವರ್ಷಾನಿಲಕ್ಲೇದೈಃ ಸರ್ವರ್ತುಷ್ವನಭದ್ರುತೇ |
   ಗ್ರಾಹಯಿತ್ವಾ ಗೃಹೇ ನ್ಯಸ್ಯೇದ್ವಿಧಿನೌಷಧಸಂಗ್ರಹಂ || (ಸು. 145.)
ಔಷಧಸಂಗ್ರಹವನ್ನು ವಿಧಿಪ್ರಕಾರ ಮಾಡಿಸಿ, ಹೊಗೆ, ಮಳೆ, ಗಾಳಿ, ತ್ಯಾವ, ಇವುಗಳಿಂದ ಎಲ್ಲಾ ಋತುಗಳಲ್ಲಿಯೂ ಕೆಡದಹಾಗಿನ ಕೋಣೆಯಲ್ಲಿರಿಸಬೇಕು.
26. ಸೂಕ್ಷ್ಮಾಣಿ ಹಿ ದೋಷಭೇಷಜದೇಶಕಾಲಬಲಶರೀರಾಹಾರಸಾತ್ಮ್ಯ
    ಸತ್ವಪ್ರಕೃತಿವಯಸಾಮವಸ್ಧಾಂತರಾಣಿ | ಯಾನ್ಯನುಚಿಂತ್ಯಮಾನಾನಿ     
    ವಿಮಲವಿಪುಲಬುದ್ಧೇರಪಿ ಬುದ್ದಿಮಾಕುಲೀಕುರ್ಯುಃ ಕಿಂ ಪುನರಲ್ಪ 
    ಬುದ್ದೇಃ | (ಚ. 83.)     
 [ವೈದ್ಯನು ಆಲೋಚಿಸಬೇಕಾದ ಅವಸ್ಥಾಭೇದಗಳು]