ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೬೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ


ಆ XIX - 370 - ವೇಶವಾರ' ಎ೦ದರ ಚಟ್ಣಿ ಎಂತ ಸಿ ಸಂ ವ್ಯಾ ಮಸಾಲೆ ಎಂತ ಭಾ ಪ್ರ (ಪು 164) ಮಾಂಸ ಪಾಕಕ್ರಮ ವನ್ನು ಹೇಳುವಲ್ಲ ದೇಶವಾರದ ಜೀನಸುಗಳು ಒಳದಲೆ, ಅಕ್ಕಿ, ಲವಂಗ ಮತ್ತು ಕಾಳುಮೆಣಸು, ಎಂತ ಭಾ ಪ್ರ ಹೇಳುತ್ತದೆ (ಪು 164) ಯದೆಗೋದಿ, ಎಳ್ಳು, ಹಸರು, ಉದ್ದು , ಇವ್ರಗಳ ಚೂರ್ಣಕ್ಕೆ ನಾನಾ ವಿಧವಾದ ಮಿಾನು ಮಾಂಸಗಳನ್ನು ಕೂಡಿಸಿ ಮಾಡಿದ ವೇಶವಾರವು ವಾತಚಿಕಿತ್ಸೆಯಲ್ಲಿ ಉಪನಾಹಕ್ಕೆ ಉಕ್ತವಾಗಿದ (ಸು 404 ) ಶಾಲ್ವಣ' ಎಂಬದರ ವಿವರ - ಕಾಕೋಲ್ಯಾದಿಃ ಸವಾತಘ್ನಃ ... ಸರ್ವಾಮ್ಲದ್ರವ್ಯ ಸಂಯುತಃ | ಸಾನೂಪೋದಕಮಾಂಸಸ್ತು ಸರ್ವಸ್ನೇಹಸಮಸ್ವಿತಃ || ಸುಖೋಷ್ಣಃ ಸ್ಪಷ್ಟ ಲವಣಃ ಶಾಲ್ವಣಃ ಪರಿಕೀರ್ತಿತಃ | (ಸು 400 ) ಕಾಕೋಲ್ಯಾದಿಗಳಿಂದ ಮತ್ತು ವಾತಹರವಾದ ಔಷಧಗಳಿಂದ ತಯಾರಿಸಲ್ಪಟ್ಟ ಎಲ್ಲಾ ಹುಳಿದ್ರವ್ಯಗಳಿಂದಲೂ, ನಾಲ್ಕು ವಿಧವಾದ ಸ್ನೇಹಗಳಿಂದಲೂ, ಜಲೇಶಯ ಮತ್ತು ಆನೂಪಜಾತಿ ಮಾಂಸಗಳಿಂದಲೂ, ಉಪ್ಪಿನಿಂದಲೂ, ಯುಕ್ತ ವಾದ, ಸುಖಕರವಾಗಿ ಬಿಸಿಯಾಗಿರುವ ಲೇಪವು 'ಶಾಲ್ವಣ' ಎಂದು ಪ್ರಸಿದ್ದವಾಗಿರುತ್ತದೆ

75. ದ್ರವಸ್ವೇದಸ್ತು ವಾತಹರದ್ರವ್ಯಕ್ವಾಧಪೂರ್ಣೇ ಕೋಷ್ಣ ಕಟಾಹೇ ದ್ರೋ ಣ್ಯಾಂ ವಾ ವಿಗಾಹ್ಯ ಸ್ವೇದಯೇತ್ | ಏವಂ ವಯೋಮಾಂಸರಸಯೂ

  • ಷತೈಲಧಾನ್ಯಾಮ್ಮಘೃತವಸಾಮೂತ್ರೇಷ್ವವಗಾಹೇತ | ಸುಖೋಷ್ಲೃಃ

ಕಷಾಯೈಃ ಪರಿಷಿಂಚೇದಿತಿ | (ಸು 544 ) . ದ್ರವಸ್ವೇದ ಎಂಬದು ವಾತಹರವಾದ ದ್ರವ್ಯಗಳ ಕಷಾಯದಿಂದ ತುಂಬಿದ ಸುಖೋಷ್ಣವಾದ ಕಟಾಹ ಅಧವಾ ದೋಣಿಯಲ್ಲಿ ಕೂತುಕೊಂಡಿದ್ದು (ದೇಹವನ್ನು ಮುಳುಗಿಸಿ) ಬೆವ ರಿಸುವದಾಗಿರುತ್ತದೆ. ಹೀಗ ಹಾಲು, ಮಾಂಸದ ರಸ, ಸಾರು, ತೈಲ, ಧಾನ್ಯಾಮ್ಲ, ತುಪ್ಪ, ವಸೆ, ಮೂತ್ರ, ಇವುಗಳಲ್ಲಿ ದೇಹವನ್ನು ಮುಳುಗಿಸಿ ಕೂತುಕೊಳ್ಳಬೇಕು. ಸುಖೋಷ್ಣವಾದ ಕಷಾಯಗಳಿಂದ ಧಾರಾರೂಪವಾಗಿ ಪರಿಷಿಂಚನ ಮಾಡಬೇಕು. ನಾಭೆಭೇಃ ಷಡಂಗುಲಂ ಯಾವನ್ಮಗ್ನಂ ಕ್ಯಾಧಸ್ಯ ಧಾರಯಾ | ಕೋಷ್ಣಯಾ ಸ್ಕಂಧಯೋಃ ಸಿಕ್ತಸ್ತಿಷೇೈತ್ ಸ್ನಿಗ್ಧತನುನರಃ || (ಭಾ. ಪ್ರ. 229-30.) (ತೈಲಾದಿಗಳನ್ನು ಹಚ್ಚಿಕೊಂಡು) ಸ್ನಿಗ್ಧಶರೀರನಾಗಿ, ಹೊಕ್ಕುಳಿನ ಮೇಲೆ ಆರಂಗುಲ ಮುಳುಗುವ ಹಾಗೆ (ಕಷಾಯ ತುಂಬಿದ ಕಟಾಹದಲ್ಲಿ) ಕೂತು, ಉಗುರುಬಿಸಿಯಾದ ಕಷಾಯದ ಧಾರೆಯನ್ನು ಹೆಗಲುಗಳ ಮೇಲೆ ಸುರಿಸಿಕೊಂಡು ಇರಬೇಕು.

  • ಕಟಾಹ ತುಂಬುವ ವರೆಗೆ ಎಂತ ಭಾ ಪ್ರ ವ್ಯಾಖ್ಯಾನ

5 76. ತತ್ರ ತಾವೋಷ್ಮನ್ವೇದೌ ವಿಶೇಷತಃ ಶ್ಲೇಷ್ಮಫ್ನೆೌ | ಉಪನಾಹಸ್ವೇದೋ ನಾಲ್ಕು ವಿಧವಾದ ವಾತಘ್ನಃ | ಅನ್ಯತರಸ್ಮಿನ್ ಪಿತ್ತಸಂಸೃಷ್ಟೇ ದ್ರವಸ್ವೇದ ಇತಿ | ಭೇದಗಳು (ಸು. 544.) ನಾಲ್ಕು ವಿಧವಾದ ಸೈದಗಳೊಳಗೆ ತಾಪ-ಉಷ್ಮಸ್ವೇದಗಳು ವಿಶೇಷವಾಗಿ ಕಫನಾಶ ಕರವಾದವು. ಉಪನಾಹಸ್ವೇದವು ವಾತಹರ. ಆ ಕಫ ಅಧವಾ ವಾತಕ್ಕೆ ಪಿತ್ತ ಕೂಡಿದ ಸಂಗತಿಯಲ್ಲಿ ದ್ರವಸ್ವೇದವು ಪ್ರಶಸ್ತ.