ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಪೋದ್ಘಾತ

XLV

ಆಯುರ್ವೇದಸಾರದ 12ನೇ ಅಧ್ಯಾಯದಲ್ಲಿ ಹೇಳಿರುವ ಉಪದೇಶಗಳು ಎಷ್ಟು ಸಾರ್ಧಕ
ವೆಂಬದನ್ನು ವಾಚಕರು ಆಲೋಚಿಸಬಹುದು “ಯಾವ ವಾಸನೆಯೂ ಇಲ್ಲದ, ಯಾವ
ರುಚಿಯೂ ಕಾಣದ, ಬಾಯಾರಿಕೆಯನ್ನು ನಿಲ್ಲಿಸತಕ್ಕ, ನಿರ್ಮಲವಾದ, ಶೀತಲವಾದ, ಸ್ವಚ್ಛ
ವದ, ಲಘುವಾದ ಮತ್ತು ಮನೋಹರವಾದ ನೀರು ಗುಣವುಳ್ಳದ್ದೆಂತ ಹೇಳಲ್ಪಡುತ್ತದೆ”
(ಪು. 235), “ನೀರನ್ನು ಕುದಿಸುವಾಗ್ಗೆ ಅದು ಉಕ್ಕದೆ, ಮತ್ತು ಅದರಲ್ಲಿ ನೊರೆ ಬಾರದೆ,
ಅದು ನಿರ್ಮಲವಾಗಿಯೂ ಲಘುವಾಗಿಯೂ ಇದ್ದರೆ, ಅದು ಪ್ರಶಸ್ತ” (ಪು 236).
ಇಷ್ಟರ ಮಟ್ಟಿನ ವಿಚಾರಮಾಡುವದಕ್ಕೆ ಯಾವ ಕಲಿಯುವಿಕೆಯೂ ಆವಶ್ಯಕವಲ್ಲ ಸಾಧಾ
ಣವಾಗಿ ಮಲಿನವಾಗಿ ಕಂಡ ನೀರನ್ನು ಕುದಿಸಿ, ಹನಿಸಿ, ಉಪಯೋಗಿಸತಕ್ಕದ್ದೆಂಬದು
ಸರ್ವರಿಗೂ ಸಾಧ್ಯ. ಹೀಗೆ ಆಯುರ್ವೇದೀಯ ಗ್ರಂಥಗಳಲ್ಲಿ ಆರೋಗ್ಯಶಾಸ್ತ್ರದ ತತ್ವಗಳೆಲ್ಲಾ
ಸರ್ವರಿಗೂ ತಿಳಿಯುವ ಮತ್ತು ಸಾಧ್ಯವಾಗುವ ರೀತಿಯಲ್ಲಿ ವಿವರಿಸಲ್ಪಟ್ಟಿವೆ ಶರೀರದ
ಮತ್ತು ಉಡಿಗೆಗಳ ಶುಚಿತ್ವದ ಕುರಿತು ನಾವು ಇಂಗ್ಲಿಷ ವಿದ್ಯೆಯಿಂದ ಕಲಿತದ್ದು ಸಾಬೂನಿನ
ಉಪಯೋಗ ಸಾಮಾನ್ಯವಾದ ಸಾಬೂನುಗಳ ಉಪಯೋಗದಿಂದ ಶುಚಿಯಾದ ಮೈಯಲ್ಲಿ
ತುರಿಗಜ್ಜಿಯುಂಟಾಗುತ್ತದೆ ಮತ್ತು ವಸ್ತ್ರಗಳು ಬೇಗನೇ ಹಳೇದಾಗಿ ಹರಿದುಹೋಗುತ್ತವೆ.
ಸೀಗೆ, ನೊರೆಕಾಯಿ, ಹೆಸರಹಿಟ್ಟು, ಬೊoವು, ಗಂಜಿ, ಇತ್ಯಾದಿಗಳ ಉಪಯೋಗದಿಂದ ಆ ಶುಚಿ
ತ್ವನ್ನು ಸಂಪಾದಿಸುವಾದರೆ, ಒಂದು ವರ್ಷಕ್ಕೆ ತಗಲಬಹುದಾದ ಖರ್ಚು ಸಾಬೂನು
ಬಗ್ಗೆ ಒಂದು ತಿಂಗಳಿಗೆ ಮುಟ್ಟುವ ಖರ್ಚಿಗಿಂತ ಕಡಿಮೆಯಾದೀತು ಬಡವರ ಮನೆಯವ
ರಲ್ಲ ಸಾಬೂನುಗಳನ್ನು ಉಪಯೋಗಿಸುವದೆಂದರೆ, ಮನೆಯವರ ಸಂಪಾದನೆಯ ಹೆಚ್ಚಿನ
ಅಂಶ ಸಾಬೂನಿನ ಖರ್ಚಿಗೆ ಹೋಗುವದು ಹಾಗೆ ಮಾಡದೆ ಮನೆಯವರೊಳಗೆ ಒಂದೆರಡು
ಜನರು ಮಾತ್ರ ತಮ್ಮ ದೇಹವನ್ನೂ ಉಡಿಗೆಗಳನ್ನೂ ಶುಚಿಯಾಗಿಟ್ಟುಕೊಂಡದ್ದರಿಂದ ಹೆಚ್ಚು
ಪ್ರಯೋಜನವಿಲ್ಲ. ಇನ್ನೊಂದು ದುರವಸ್ಥೆಯೇನಂದರೆ ನೊರೆಕಾಯಿ, ಸೀಗೆ ಇತ್ಯಾದಿಗಳನ್ನು
ಕೂಂಡುಕೊಳ್ಳುವವರು ಕಡಿಮೆಯಾದ ಹಾಗೆ, ಆ ವೃಕ್ಷಗಳು ಬೇರೆ ಪ್ರಯೋಜನಕರವಾದ
ವೃಕ್ಷಗಳ ಬೆಳಿಕೆಗೆ ಆತಂಕ ಮಾಡುವದಲ್ಲದೆ ಸಾಕಷ್ಟು ಪ್ರಯೋಜನವುಳ್ಳವಲ್ಲ ಎಂಬ ಗ್ರಹಿಕೆ
ಜನರಲ್ಲಿ ಹಬ್ಬಿ ಅವು ನಿರ್ಮೂಲವಾಗುವದಾಗುತ್ತದೆ ಈ ವಿಧವಾದ ಅನೇಕ ದೃಷ್ಟಾಂತಗಳು
ವಾಚಕರ ನೆನಪಿಗೆ ಸ್ವಲ್ಪ ಆಲೋಚಿಸಿದರೆ ವಿಶದವಾಗಿ ಕಂಡಾವು ಒಟ್ಟಾರೆ ಅನೇಕ ಭಾಗಗಳಲ್ಲಿ
ನಾವು ಪಾಶ್ಚಾತ್ಯರಿಂದ ಸಂಪಾದಿಸಿದ ಆರೋಗ್ಯಶಾಸ್ತ್ರಜ್ಞಾನವು ಸಭಾಭೂಷಣವಲ್ಲದೆ
ಕಾರ್ಯತಃ ಪ್ರಯೋಜನಕರವಲ್ಲ ಸಾಮಾನ್ಯವಾಗಿ ನಮ್ಮ ಪಾಶ್ಚಾತ್ಯ ವಿದ್ಯೆಯನ್ನು ಸಫಲ
ವಗುವಷ್ಟರ ವರೆಗೆ ವೃದ್ಧಿಮಾಡಿಕೊಳ್ಳುವದಕ್ಕೆ ಪ್ರಶಸ್ತ ಅಧ್ಯಾಪಕರಾಗಲಿ, ಉಪಕರಣ
ಳಾಗಲಿ, ಸಂಪತ್ತಾಗಲಿ, ಸಾಕಷ್ಟು ಇರುವದಿಲ್ಲ. ಈಗಿನ ಅಪೂರ್ಣವಾದ ವಿದ್ದೆಯಿಂದ
ಗುಣಗಳಿಗಿಂತಲೂ ದೋಷಗಳು ಹಚ್ಚಾಗಿ ಸಂಭವಿಸುತ್ತವಾದ್ದರಿಂದ, ಅನೇಕರಿಗೆ ಭರ್ತೃ
ಹರಿಯ ಶ್ಲೋಕವು ಪದೇಪದೇ ನೆನಪಿಗೆ ಬರುವದಾಗಿದೆ – ಅಜ್ಞಃ ಸುಖಮಾರಾಧ್ಯಃ ಸುಖತರಮಾರಾಧ್ಯತೇ ವಿಶೇಷಜ್ಞಃ | ಜ್ಞಾನಲವದುರ್ವಿದಗ್ಧಂ ನರಂ ಬ್ರಹ್ಮಾಽಪಿ ನ ರಂಜಯತಿ || ಇಂಧಾ ಅಲ್ಪವಿದ್ಯೆಯನ್ನು ತಮ್ಮ ಮಕ್ಕಳಿಗೆ ಕೊಡಿಸುವದಕ್ಕಿಂತಲೂ ಆ ವಿದ್ಯೆ ಅವರಿಗೆ ಇಲ್ಲ
ದಿದ್ದರೇನೇ ಸುಖವಾಗುತ್ತಿತ್ತೆಂತ ಹಿರಿಯರು ಆಲೋಚಿಸುವದಕ್ಕೆ ಕಾರಣವಾಗಿದೆ.