ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 439 - ಆ XXII. ಮತ್ತು ವಾಯು ಕ್ರಮವಾಗಿ ಹೊರಗೆ ಬಂದು, ಲಘುತ್ವ ಉಂಟಾಗುತ್ತದೋ, ಅವನ ನಿರೂಹ ಣವು ಸರಿಯಾಯಿತೆಂತ ತಿಳಿಯಬೇಕು. 36, ಸುನಿರೂಢಂ ತತೋ ಜಂತುಂ ಸ್ನಾನವಂತಂ ತು ಭೋಜಯೇತ್ | ಪಿತ್ತಶ್ಲೇಷ್ಯಾನಿಲಾವಿಷ್ಟಂ ಕ್ಷೀರಯೂಷರಸೈಃ ಕ್ರಮಾತ್ || ನಿರೂಹ ಕೊಟ್ಟ ಸರ್ವಂ ವಾ ಚಾಂಗಲರಸ್ತೆರ್ಭೋಜಯೇದವಿಕಾರಿಭಿಃ | ದಿನದ ಭೋ ಜನನಿಯಮ ಭಾಗಹೀನಮರ್ಧಂ ವಾ ಹೀನಮಾತ್ರ ಮಧಾಪಿ ವಾ || ಯಧಾಗ್ನಿದೋಷಂ ಮಾತ್ರೆಯಂ ಭೋಜನಸ್ಯ ವಿಧೀಯತೇ || (ಸು. 579.) ನಿರೂಪಣ ಸರಿಯಾಗಿ ಆದಂಧವನನ್ನು ಸ್ನಾನಮಾಡಿಸಿ, ಪಿತ್ತದೋಷವುಳ್ಳವನಾದರೆ ಹಾಲಿನಿಂದ, ಕಫದೋಷವುಳ್ಳವನಾದರೆ ಸಾರಿನಿಂದ, ವಾತದೋಷವುಳ್ಳವನಾದರೆ ಮಾಂಸ ರಸದಿಂದ, ಉಣ್ಣಿಸಬೇಕು, ಅಧವಾ ಯಾರನ್ನಾದರೂ ದೋಷಕರವಲ್ಲದ ಜಾಂಗಲಮಾಂಸ ರಸಗಳಿಂದ ಉಣ್ಣಿಸಬಹುದು. ಆದರೆ ಆಹಾರದ ಪ್ರಮಾಣವನ್ನು ಕಾಲಂಶಕ್ಕೆ, ಅರ್ಧಾಂಶಕ್ಕೆ, ಅಧವಾ ಸ್ವಲ್ಪ ಮಟ್ಟಿಗೆ, ದೋಷ ಮತ್ತು ಅಗ್ನಿ ನೋಡಿಕೊಂಡು, ಕಡಿಮೆ ಮಾಡಿಕೊಳ್ಳಬೇಕು. ಪರಿಹಾರ 37. ಅನಾಯಾಂತಂ ಮುಹೂರ್ತಾತ್ತು ನಿರೂಹಂ ಶೋಧನೈರ್ಹರೇತ್ | ನಿರೂಹ ಹಿಂದೆ ತೀಕ್ಷೇರ್ನಿರೂಹೈರ್ಮತಿಮಾನ್ ಸ್ಟಾರಮೂತ್ರಾಮ್ ಸಂಯುತೈತಿ || ಬಾರದ್ದಕ್ಕೆ (ಸು. 579.) ಒಂದು ಮುಹೂರ್ತಕಾಲದಲ್ಲಿ ನಿರೂಹವು ಹಿಂದಕ್ಕೆ ಬಾರದಿದ್ದರೆ, ಅದನ್ನು ಶೋಧನ ಕರವಾದ, ತೀಕವಾದ ಮತ್ತು ಯವಕ್ಷಾರ, ಗೋಮೂತ್ರ ಮತ್ತು ಹುಳಿಗಂಜಿ, ಇವುಗಳಿಂದ ಕೂಡಿದ, ಬೇರೆ ನಿರೂಹಗಳನ್ನು ಕೊಟ್ಟು ಹೊರಗೆ ತೆಗೆದುಬಿಡಬೇಕು. 38. ವಸ್ತೆರುತ್ತರಸಂಜ್ಞಸ್ಯ ವಿಧಿಂ ವಕ್ಷಾಮ್ಯತಃ ಪರಂ || ಚತುರ್ದಶಾಂಗುಲಂ ನೇತ್ರಮಾತುರಾಂಗುಲಸಮ್ಮಿತಂ || ಮಾಲತೀಪುಪ್ಪವೃಂತಾಗ್ರಂ ಛಿದ್ರಂ ಸರ್ಷಪನಿರ್ಗಮಂ | ಮೇಢಾಯಾಮಸಮಂ ಕೇಚಿದಿಚ್ಛಂತಿ ಖಲು ತದ್ವಿದಃ || ಸ್ನೇಹಪ್ರಮಾಣಂ ಪರಮಂ *ಕುಚ್ಚಶ್ಚಾತ್ರ ಪ್ರಕೀರ್ತಿತಃ | ಪಂಚವಿಂಶಾದಧೋ ಮಾತ್ರಾಂ ವಿದಧ್ಯಾದ್ಭುದ್ಧಿ ಕಲ್ಪಿತಾಂ | ಉತ್ತರವಸ್ತಿಯ ವಿಧಿ ನಿವಿಷ್ಟಕರ್ಣಿಕಂ ಮಧೈ ನಾರೀಣಾಂ ಚತುರಂಗುಲೇ | ಮೂತ್ರಸೋತಃ ಪರಿಣಾಹಂ ಮುದ್ದವಾಹಿ ದಶಾಂಗುಲಂ || ತಾಸಾಮಪತ್ಯಮಾರ್ಗೇ ತು ನಿದಧ್ಯಾಚತುರಂಗುಲಂ | ದಂಗುಲಂ ಮೂತ್ರಮಾರ್ಗೇ ತು ಕನ್ಯಾನಾಂ ತೈಕಮಂಗುಲಂ || ವಿಧೇಯಂ ಚಾಂಗುಲಂ ತಾಸಾಂ ವಿಧಿವದ್ಯಕ್ಷತೇ ಯಧಾ | ಸ್ನೇಹಸ್ಯ ಪ್ರಕೃತಂ ಚಾತ್ರ ಸ್ವಾಂಗುಲೀಮೂಲಸಮ್ಮಿತಂ ||