ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ. XXIII. - 456 - ಸಮವಾದ, ಕಿವಿಗೆ ಕಟ್ಟುವ ಹಾಗಿನ, ದನದ ಅಧವಾ ಎಮ್ಮೆಯ ಚರ್ಮದ ಹಾಳೆಯನ್ನು ವಸ್ತ್ರದ ಪಟ್ಟಿಯಿಂದ ಕಟ್ಟಿ, ಸುತ್ತು ಉದ್ದಿನ ಹಿಟ್ಟಿನ ಕಲ್ಕದಿಂದ ಲೇಪಮಾಡಿ, ಅದರ ಮೇಲೆ ವ್ಯಾಧಿಗೆ ತಕ್ಕದಾಗಿ ಕಾಯಿಸಲ್ಪಟ್ಟ ಸ್ನೇಹವನ್ನು ಸುಖವಾದ ಬಿಸಿಯಾಗಿ ತಲೆಯಿಂದ ಎರಡು ಅಂಗುಲ ಪ್ರಮಾಣ ಮೇಲೆ ಏರುವಷ್ಟು ಹೊಯ್ಯಬೇಕು. ಆ ಸ್ನೇಹವನ್ನು, ಬಾಯಿಯಿಂದಲೂ, ಮೂಗಿನಿಂದಲೂ ದ್ರವ ಇಳಿಯುವ ಪರ್ಯಂತ, ಇರಿಸಬೇಕು. ವಾತರೋಗದಲ್ಲಿ ಹತ್ತು ಸಹಸ್ರ ಮಾತ್ರಾಕಾಲ, ಪಿತ್ತದಲ್ಲಿ ಎಂಟು ಸಹಸ್ರ ಮಾತ್ರಾಕಾಲ ಮತ್ತು ಕಫದಲ್ಲಿ ಆರು ಸಹಸ್ರ ಮಾತ್ರಾಕಾಲ, ರೋಗವಿಲ್ಲದಾಗ್ಗೆ ಒಂದು ಸಹಸ್ರ ಮಾತ್ರಾಕಾಲ, ಇಟ್ಟುಕೊಳ್ಳತಕ್ಕದ್ದು, ಸ್ನೇಹವನ್ನು ತೆಗೆದ ಮೇಲೆ ಹೆಗಲು ಮುಂತಾದವುಗಳನ್ನು (ತಲೆ, ಕುತ್ತಿಗೆ, ಬೆನ್ನು, ಹಣೆ ಮತ್ತು ಮುಖವನ್ನು ಕೈಗಳಿಂದ) ತಿಕ್ಕಬೇಕು ಏಳು ದಿನ ಅದನ್ನು ಸೇವಿಸಬಹುದು. (0) ರೋಗಾನ್ ಶಿರಸಿ ಸಂಭೂತಾನ್ ಹತ್ರಾತಿಪ್ರಬಲಾನ್ ಗುಣಾನ್ | ಕರೋತಿ ಶಿರಸೋ ವಸ್ತಿರುಕ್ತಾ ಯೇ ಮೂರ್ದ್ದಶೈಲಿಕಾಃ || ಶುದ್ಧ ದೇಹಸ್ಯ ಸಾಯಾಹ್ನ ಯಧಾವ್ಯಾಧ್ಯಶಿತಸ್ಯ ತು | ಸುಶ್ರುತ ಪ್ರಕಾರ ಖಾಸೀನಸ್ಯ ಬದ್ದೀಯಾದ್ವಕೋಶಂ ತತೋ ದೃಢಂ || ಯಧಾವ್ಯಾಧಿಶೃತಸ್ನೇಹಪೂರ್ಣ೦ ಸಂಯಮ್ಮ ಧಾರಯೇತ್ | ತರ್ಪಣೋಕ್ತಂ ದಶಗುಣಂ ಯಧಾದೋಷಂ ವಿಧಾನವಿತ್ || (ಸು. 709.10.) ಶಿರೋವಸ್ತಿಯಿಂದ, ತಲೆಯಲ್ಲಿ ಉಂಟಾದ ಪ್ರಬಲವಾದ ರೋಗಗಳು ಪರಿಹಾರವಾಗಿ, ಮೂರ್ಧತೈಲಕ್ಕೆ ಹೇಳಲ್ಪಟ್ಟ ಗುಣಗಳು ಸಿದ್ಧಿಸುವವು. ಶುದ್ಧ ದೇಹನಾದ ರೋಗಿಯನ್ನು ವ್ಯಾಧಿಗೆ ತಕ್ಕವಾದ ಪದ್ಧದಿಂದ ಉಣ್ಣಿಸಿ, ಸಾಯಂಕಾಲದಲ್ಲಿ ನೆಟ್ಟಗೆ ಕೂತುಕೊಳ್ಳಿಸಿ, ಅವನ ತಲೆಗೆ ವ್ಯಾಧಿಗೆ ತಕ್ಕದಾಗಿ ಕಾಯಿಸಲ್ಪಟ್ಟ ಸ್ನೇಹವನ್ನು ತುಂಬಿಸಿದ ವಸ್ತಿಚೀಲವನ್ನು ಗಟ್ಟಿ ಯಾಗಿ ಕಟ್ಟಬೇಕು. ಅದನ್ನು ಅವನು ತರ್ಪಣಕ್ರಮಕ್ಕೆ ಹೇಳಲ್ಪಟ್ಟ ಕಾಲದ ಹತ್ತು ಪಾಲಷ್ಟು ಕಾಲ ದೋಷಕ್ಕೆ ತಕ್ಕವಾಗಿ ಧರಿಸಬೇಕು. ಷರಾ ಭೋಜನವಿಲ್ಲದೆ ಶಿರೋವಸ್ತಿ ಪ್ರಶಸ್ತವೆಂತ ಶಾ ದಲ್ಲಿ ಕಾಣಿಸಿದ್ದು ರಾತ್ರಿ ಭೋಜನಕ್ಕೆ ಮೊದಲೆಂಬ ಅರ್ಥ ದಲ್ಲಿಯಾಗಿರಬೇಕು ಚಿ ಸಾ ಸಂ ಪ್ರಕಾರ ತಲೆ ಮುಚ್ಚತಕ್ಕ ಪ್ರಮಾಣದ ಚರ್ಮವನ್ನು ಸುತ್ತು ಎಂಟು ಅಂಗುಲ ಎತ್ತ ರಿಸಿ ತಲೆಗೆ ಕಟ್ಟಿ, ಅದರ ಕೆಳಗೆ ಉದ್ದಿನ ಹಿಟ್ಟಿನ ಲೇಪವನ್ನು ಮಾಡಿ, ರೋಗಿಯನ್ನು ಅಲ್ಲಾಡದಿರುವ ಹಾಗೆ ಕೂತು ಕೊಳ್ಳೆಸಿ, ಚರ್ಮದ ಮೇಲೆ ಬಿಸಿ ತೈಲವನ್ನು ತುಂಬಿಸಬೇಕಾಗಿಯೂ, ಹಾಗೆ ತೈಲವನ್ನು ನೋವು ಶಾಂತವಾಗುವ ತನಕ, ಅಥವಾ ಒಂದು ಅಥವಾ ಅರ್ಧ ಜಾಮಕಾಲ, ಅಥವಾ ಕಫದಲ್ಲಿ 500, ಪಿತ್ತದಲ್ಲಿ 800, ವಾತದಲ್ಲಿ 1000 ಮಾತ್ರಾ ಕಾಲ, ಅಥವಾ ವೃದ್ದ ವೈದ್ಯೋಪದೇಶ ಪ್ರಕಾರ ಎಂಟೂವರೆ ಗಳಿಗೆ ಕಾಲ, ಧರಿಸಿಕೊಳ್ಳಬೇಕಾಗಿಯೂ, ಹೀಗೆ ಐದು ದಿವಸ ಅಥವಾ ಏಳು ದಿವಸ ಇಡಬಹುದಾಗಿಯೂ ಕಾಣುತ್ತದೆ (ಪು 765 ) ತಲೆಯ ಸುತ್ತು ಒಂದು ಚರ್ಮದ ಸುಮಾರು ಮೂರು ಅಂಗುಲ ಅಗಲವಾದ ಉಂಗುರವನ್ನು ಕಟ್ಟಿ, ಅದರ ಸಂದಿನಲ್ಲಿ ಎಣ್ಣೆ ಇಳಿಯದ ಹಾಗೆ ಉದ್ದಿನ ಹಿಟ್ಟನ್ನು ಹಚ್ಚಿ, ಮೇಲೆ ಬರೇ ತಲೆಗೆ ತೈಲವನ್ನು ಹಾಕಿ ಧರಿಸುವ ವಾಡಿಕೆ ಇದ್ದ ಹಾಗೆ ಕಾಣುತ್ತದೆ 25. ವಿಮೋಚ್ಯ ಶಿರಸೋ ವಸ್ತಿಂ ಗೃಘೀಯಾಶ್ಚ ಸಮಂತತಃ | ಶಿರೋವಸ್ತಿಯ ಊರ್ಧ್ವಕಾಯಂ ತತಃ ಕೋಷ್ಣ ನೀರೈಃ ಸ್ನಾನಂ ಚ ಕಾರಯೇತ್ || ನಂತರ ಸ್ನಾನ (ಶಾ. 175-76.)