e XXVIII - 492 - ಯೋಜ್ಯಂ ಸಭೋಜ್ಯಂ ಭೈಷಜ್ಯಂ ಭೋಜೈಶ್ವತ್ರೆರರೋಚಕೇ || ಕಂಪಾಕ್ಷೇಪಕಹಿಕ್ಕಾಸು ಸಾಮುದ್ಧಂ ಲಘುಭೋಜಿನಾಂ | ಊರ್ಧ್ವಜತ್ತು ವಿಕಾರೇಷು ಸ್ವಪ್ನ ಕಾಲೇ ಪ್ರಶಸ್ಯತೇ || (ವಾ. 68.) ರೋಗಿಯ ರೋಗವೂ ಬಲವಾಗಿರುವಾಗ್ಗೆ ಕಫೋದ್ರೇಕದ ರೋಗದಲ್ಲಿ ಅನ್ನವಿಲ್ಲದೆ ಔಷಧವನ್ನು ಕೊಡುವದು ಪ್ರಶಸ್ತ, ಅಪಾನವಾಯುವು ಕೋಪಗೊಂಡಾಗ ಊಟದ ಆದಿ ಯಲ್ಲಿ, ಸಮಾನವಾಯುವು ಕೋಪಗೊಂದಾಗ ಊಟದ ಮಧ್ಯದಲ್ಲಿ, ವ್ಯಾನವಾಯುವು ಕೆಟ್ಟಾಗ ಬೆಳಿಗ್ಗೆ ಊಟದ ಅಂತ್ಯದಲ್ಲಿ, ಉದಾನವಾಯುವು ಕೋಪಗೊಂಡಾಗ ಸಂಜೆ ಊಟದ ಅಂತ್ಯದಲ್ಲಿ, ಪ್ರಾಣವಾಯುವಿನ ದೋಷದಲ್ಲಿ ತುತ್ತುಗಳೊಂದಿಗೆ ಮತ್ತು ತುತ್ತುಗಳ ನಡುವೆ, ವಿಷ, ವಾಂತಿ, ಬಿಕ್ಕಟ್ಟು, ಬಾಯಾರಿಕೆ, ಉಬ್ಬಸ ಮತ್ತು ಕೆಮ್ಮು, ಈ ವ್ಯಾಧಿಗಳಲ್ಲಿ ಪದೇ ಪದೇ, ಅರುಚಿಯಲ್ಲಿ ವಿಚಿತ್ರವಾದ ಭೋಜನಪದಾರ್ಥಗಳೊಂದಿಗೆ, ಕಂಪ, ಆಕ್ಷೇಪಕ ಮತ್ತು ಬಿಕ್ಕಟ್ಟು, ಈ ರೋಗಗಳಲ್ಲಿ ಲಘುವಾದ ಊಟಗಳಿಗೆ ಸಾಮುದ್ಧವಾಗಿ, ಕುತ್ತಿಗೆ ಸಂಧಿಗೆ ಮೇಲಿನ ಅಂಗಗಳ ವ್ಯಾಧಿಗಳಲ್ಲಿ ನಿದ್ರೆ ಕಾಲದಲ್ಲಿ, ಔಷಧವನ್ನು ಕೊಡುವದು ಪ್ರಶಸ್ತವಾಗಿರುತ್ತದೆ. ರಾಮಕೃಷ್ಣ ವರ್ಯನಾಮಧಾರಿಣಾಓಂಣರಾಮಚಂದ್ರವಿಪ್ರಸೂನುನಾ | ದೇಶನಾಮ ಯೇನ ಕೀರ್ತಿತಂ ಪಣಂ ಬೂರಿತಿ ಪ್ರಕಾಶಿತೋSಯವಾಕರಃ || ನೀತೋ ಹ್ಯಾಯುರ್ವೇದಸಾರಾದ್ಯಭಾಗ ವೈದ್ಯಶ್ರೇಷ್ಮೆಸ್ಸುಶ್ರುತಾದ್ಯ ಪ್ರಣೀತಾತ್ | ಸಕಾಜ್ಞೆಸ್ಸಂಹಿತಾಬ್ಲೆರಮೋಘ ಜ್ಞಾನಾಗ್ನಿಂ ಸಂಧುಕ್ಷಿತುಂ ಮಂದಭೂತಂ || ಅನುಮೋದಿತೋ ಭವತು ಮೇಲ್ಪ ಉದ್ಯಮೋ ಗುಣದರ್ಶಿಭಿರ್ನಿಖಿಲಪಂಡಿತೋತ್ತಮೈಃ | ಜನತಾಸುಖೋಪಚಯಟೋದಿತೋ ಹಿ ಸಃ ಜಗದೇಕನಾಧಕೃಪಯಾ ಚ ಸಾಧಿತಃ || ಇತಿ ಆಸ್ಪಂಣ ರಾಮಚಂದ್ರ ಉಪಾಧ್ಯಾಯರ ಮಕ್ಕಳು ಪಣಂಬೂರು ರಾಮಕೃಷ್ಣಯ್ಯ ನವರು ಸುಶ್ರುತಾದಿ ವೈದ್ಯಶ್ರೇಷ್ಠರುಗಳಿಂದ ರಚಿಸಲ್ಪಟ್ಟ ಸಂಹಿತೆಗಳಿಂದ ಲೋಕೋಪಕಾರಾರ್ಧ ವಾಗಿ ಸಂಗ್ರಹಿಸಿ ಕನ್ನಡಾರ್ಧ ಸಹಿತವಾಗಿ ಬರೆದ ಆಯುರ್ವೇದಸಾರದ ಪ್ರಧಮ ಭಾಗವು ಸಂಪೂರ್ಣವು. ++
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೮೨
ಗೋಚರ