ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಉಪೋದ್ಘಾತ LXVII ಮತ್ತು ಜ್ವರಪ್ರದೇಶಕ್ಕೆ ಹೋಗುವ ಮಕ್ಕಳುಮರಿಗಳು ಹಿಡಿದು ಎಲ್ಲವರು ಅಲ್ಪ ಪ್ರಮಾಣ ದಲ್ಲಿ ಕ್ಲಿನೀನನ್ನು ಸೇವಿಸುತ್ತಿರುವದು ಒಳ್ಳೇದು ಎಂಬದು ಅದರ ಯಾವ ಗುಣಕ್ಕಾಗಿ? ಒಮ್ಮೆ ಸೇವಿಸಿದ ಕ್ವಿನೀನಿನ ಶಕ್ತಿಯು ಆರು ತಿಂಗಳ ವರೆಗೆ ಇರುತ್ತದೊ? ಹೌದಾದರೆ, ಆ ಕ್ವಿನೀನು ಕ್ರಿಮಿಗಳನ್ನು ನಾಶಮಾಡದೆ ಜ್ವರವನ್ನು ಬಾರದ ಹಾಗೆ ತಡೆಯುವದು ಹ್ಯಾಗೆ? ಈ ವಿಧದ ಇನ್ನೂ ಅನೇಕ ಸಹಜವಾದ ಜಿಜ್ಞಾಸೆಗಳು ಹುಟ್ಟುತ್ತವೆ. ಇವುಗಳಿಗೆ ಸಮಾಧಾನ ನಾವು ನೋಡಿದ ಯಾವ ಪಾಶ್ಚಾತ್ಯ ವೈದ್ಯಗ್ರಂಧಗಳಲ್ಲಿಯೂ ಕಾಣುವದಿಲ್ಲ.

   21. ಪಾಶ್ಚಾತ್ಯ ವೈದ್ಯರು ತೊಲೆ ಲೆಕ್ಕದಲ್ಲಿ ಕ್ವೀನಿನನ್ನು ಕೊಟ್ಟು ಗುಣವಾಗದ ವಿಷಮಜ್ವರವನ್ನು ಐದು ಗ್ರೈನ ಕ್ವಿನೀನಿನಿಂದಲೇ, ಆಯುರ್ವೇದ ಪ್ರಕಾರ ತಯಾರಿಸಿದ ಕಷಾಯದ ಸಹಾಯದಿಂದ, ಗುಣ ಮಾಡಿದ ಹಿಂದು ಸಂಗತಿಯನ್ನು ಹಿಂದಿನ 14ನೇ ಪ್ರಕರಣ ದಲ್ಲಿ ಎತ್ತಿದೆವು. ಆ ಕ್ವಿನೀನಿನಿಂದ ವಿಷಮವಾದ ಹಿಂದು ಸಂಗತಿಯನ್ನು ಇಲ್ಲಿ ಹೇಳುವೆವು ಒಂದು ಹೆಂಗಸಿಗೆ ವಿಷಮಜ್ವರಕ್ಕೆಂತ ಕ್ವಿನೀನನ್ನು ಒಬ್ಬರು ಹಳ್ಳಿ ಪಂಡಿತರು ಕೊಟ್ಟರು ಅದರಿಂದ ಆ ಹೆಂಗಸು ಸ್ಮೃತಿಯಿಲ್ಲದೆಯೂ ಯಾವ ಅಂಗಚೇಷ್ಟೆಗಳನ್ನಾದರೂ ಮಾಡಲಾರದೆಯೂ ಬಿದ್ದುಕೊಂಡಿದ್ದ ಸ್ಥಿತಿಯನ್ನು ಕುರಿತು ಪಂಡಿತರನ್ನು ವಿಚಾರಿಸಿದ್ದಲ್ಲಿ, ಅವರು ಪ್ರಯೋ ಜನವಿಲ್ಲ ಎಂದು ಬಿಟ್ಟರು ಆ ಕೂಡಲೇ ನೆಲದ ಮೇಲೆ ದರ್ಭೆಗಳನ್ನು ಬಿಡಿಸಿ ಬ್ರಾಹ್ಮಣ ವಿಧವೆಯಾಗಿದ್ದ ಆ ಹಂಗಸನ್ನು ಮಲಗಿಸಿ ತುಳಸೀ ಮಾಲೆ ಹಾಕಿ ಬಾಯಿಯೊಳಗೆ ತೀರ್ಧ ಹೊಯ್ದರು ಹೀಗೆ ಮಾಡಿ ಸುಮಾರು 24 ತಾಸುಗಳಾದರೂ, ಅವಳು ಸಾಯದೆ ಇದ್ದ ಹಾಗೆಯೇ ಇದ್ದಳು ಅಷ್ಟರಲ್ಲಿ ಬೇರೆ ಕೆಲಸದ ಮೇಲೆ ಆ ಗ್ರಾಮಕ್ಕ ಹೋಗಿದ್ದ ನಮ್ಮನ್ನು ಕರದು ರೋಗಿಯನ್ನು ಪರೀಕ್ಷಿಸಬೇಕಾಗಿ ಅಲ್ಲಿ ನೆರದಿದ್ದ ಗ್ರಾಮಸ್ಥರು ಅಪೇಕ್ಷಿಸಿದ ಮೇರೆಗೆ, ನಾವು ರೋಗಿ ಇದ್ದಲ್ಲಿಗೆ ಹೋಗಿ ನೋಡುವಾಗ್ಗೆ, ಅವಳ ನಾಡಿಯು ವಿರಳವಾಗಿ ನಡಿಯು ತ್ತಿದ್ದು, ಅಶುಭ ಸೂಚನೆಗಳೇನೂ ಕಾಣದರಿಂದ, ರೋಗಿಯನ್ನು ಉಪವಾಸಮಾಡಿಸಿ ಕೊಲ್ಲ ದಿದ್ದರೆ ಅವಳು ಸಾಯಳೆಂತ ಹೇಳಿ, ಸಾಯಾಹ್ನ ಸವಿಾಪಿಸಿದ್ದ ಆ ಕಾಲದಲ್ಲಿಯೇ ಒಂದು ಮಾತ್ರೆಯನ್ನು ಕೊಟ್ಟು, 2ನೆ ಒಂದು ಮಾತ್ರೆಯನ್ನು ಮಧ್ಯರಾತ್ರಿ ಕೊಡುವ ಹಾಗೂ, ತನ್ಮಧ್ಯ ಹಾಲನ್ನು ಕೊಡುವ ಹಾಗೂ ಹೇಳಿ ಹೋದೆವು ಬೆಳಿಗ್ಗೆ ಆ ಹೆಂಗಸಿಗೆ ಎಚ್ಚರವಾಗಿ, ಎದ್ದು ಕೂತು, ತನಗೆ ಹಲ್ಲು ನಾಲಿಗೆಗಳನ್ನು ಉಜ್ಜುವದಕ್ಕೆ ಒಂದು ಕಡ್ಡಿ ಬೇಕೆಂತ ಕೇಳಿದಳು. ಹೀಗೆ ಅನೇಕರಿಗೆ ವಿಚಾರವಿಲ್ಲದೆ ಕ್ವಿನೀನನ್ನು ಕೊಟ್ಟದರಿಂದ ಮೆದುಳಿನ ಅಕ್ರಮ ಉಂಟಾ ಗಿದೆ ಮುಂಬಯಿ ಮುಂತಾದ ದೇಶಗಳಿಗೆ ಹೋಗಿ ಸಂಪಾದಿಸಿದ ವಿಷಮಜ್ವರವು ಕ್ರಿನೀನಿ ನಿಂದ ಪರಿಹಾರವಾಗದೆ, ಬಹುಕಾಲ ದಣಿದು, ನಮ್ಮಲ್ಲಿಗೆ ಚಿಕಿತ್ಸೆಗೆ ಆಗಾಗ್ಗೆ ಬಂದ ರೋಗಿ ಗಳು ಬಹಳ ಮಂದಿ ಇದ್ದಾಗ್ಯೂ, ನಾವ್ರ ಕಳದ ಐದು ವರ್ಷಗಳಿಂದ ಕ್ಲಿನೀನನ್ನು ಉಪ ಯೋಗಿಸಿದ್ದಿಲ್ಲ. ನಮ್ಮಲ್ಲಿಯ ಚಿಕಿತ್ಸೆಯಿಂದ ಅಂಥಾ ರೋಗಿಗಳಲ್ಲಿ ಯಾರಿಗಾದರೂ ವಾಸಿ ಯಾಗಲಿಲ್ಲ ಎಂಬ ವರ್ತಮಾನ ನಾವು ಕೇಳಲಿಲ್ಲ |
  22. ಅದೆಲ್ಲ ಹ್ಯಾಗಿದ್ದರೂ, ಕ್ವಿನೀನು ಪ್ರಾಯಶಃ ವಿಷಮಜ್ವರವನ್ನು ತಡೆದು ನಿಲ್ಲಿ ಸುತ್ತದೆಂಬದಕ್ಕೆ ಸಂದೇಹವಿಲ್ಲ ನಮ್ಮ ಅನುಭವ ಹ್ಯಾಗಂದರೆ ಚಳಿಯುಕ್ತವಾದ ಮತ್ತು ಪೂರ್ಣವಾಗಿ ಬಿಟ್ಟು ಬರುವ ವಿಷಮಜ್ವರದಲ್ಲಿ ಚಳಿ ಬರುವ ಕಾಲದಿಂದ 4 ಘಂಟೆ ಪೂರ್ವ ದಲ್ಲಿ 3-4 ಗ್ರೈನ, ಅನಂತರ 2 ಘಂಟೆಯಲ್ಲಿ 3-4 ಗ್ರೈನ ಕ್ವಿನೀನನ್ನು ಪ್ರಾಯಸ್ಧನಾದ