ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

LXX ಉಪೋದ್ಘಾತ ರ್ಯಾದಿ ಮಾತ್ರೆಗಳನ್ನು ಕೊಡುವದರಿಂದ ಆ ರೋಗಿಗೆ ಒಂದೆರಡು ಮಾತುಗಳನ್ನಾದರೂ ಆಡುವ ಶಕ್ತಿ ಬರುವದುಂಟು. ಆದರೆ ಅದರಿಂದ ಅವನ ಮೃತಿಯು ದೂರವಾಗಲಾರದು. ಆದ್ದರಿಂದ ಅಂಧಾ ಮಾತ್ರೆಗಳನ್ನು ಸಾಧಾರಣವಾಗಿ ಕೊಡದೆ ಇರುವದು ಪ್ರಶಸ್ತ ಎಂಬ ಹಾಗಿನ ವಿಚಾರವನ್ನೇ ಮದ್ಯಾದಿಗಳ ಉಪಯೋಗದಲ್ಲಿ ಮಾಡತಕ್ಕದ್ದು. 23 ಈಗ ಆಯುರ್ವೇದಗ್ರಂಧಗಳಲ್ಲಿ ಉಕ್ತವಾಗಿರುವ ಜ್ವರಚಿಕಿತ್ಸೆಯ ಕೆಲವು ತತ್ವ ಗಳನ್ನು ನಿರ್ದೇಶಿಸುವದು ನಮ್ಮ ವಾಚಕರಿಗೆ ಆಯುರ್ವೇದೀಯ ಮತ್ತು ಪಾಶ್ಚಾತ್ಯ ಕ್ರಮ ಗಳ ಗುಣದೋಷಗಳನ್ನು ತೋಲನ ಮಾಡಿ ನೋಡುವದಕ್ಕೆ ಸಹಾಯಕರವಾಗಬಹುದು. ಆಯುರ್ವೇದದಲ್ಲಿ ಪ್ರಸಂಗ-ಗಾತ್ರ ಸ್ಪರ್ಶ-ನಿಶ್ವಾಸ-ಸಹಭೋಜನ-ಸಹಶಯ್ಯ-ಸಹಾಸನ-ವಸ್ತ್ರ ವಾಲ್ಯಾನುಲೇಪನಗಳಿಂದ ಒಬ್ಬರಿಂದೊಬ್ಬರಿಗೆ ಅಂಟುವ ಸಾಂಕ್ರಾಮಿಕ ರೋಗಗಳೊಳಗೆ ಜ್ವರವು ಒಂದಾಗಿ ಉಕ್ತವಾಗಿದೆ. ಚರಕಾಚಾರ್ಯನು ದ್ವಂದ್ವಜ-ತ್ರಿದೋಷಜ ಜ್ವರಗಳ (ಟಾಯ್ತಂಬದು ಇವುಗಳೊಳಗೊಂದು) ನಿದಾನ ಹೇಳುವಲ್ಲಿ ಎಷಕಲಿತಿದ್ದ ನೀರಿನ ಉಪ ಯೋಗ, thರಿಗಳಲ್ಲಿರುವ ವಿಷಪದಾರ್ಥಗಳ ತಗಲುವಿಕೆ, ಅಸಾತ್ಮವಾದ ವಾಸನೆಯು ಮೂಗಿನೊಳಗೆ ಸೇರುವದು, ಋತುದೋಷ ಸಹ, ಆ ಒರಗಳ ಕಾರಣಗಳೊಳಗೆ ಸೇರಿದ ವಾಗಿ ಹೇಳಿದ್ದಾನೆ. ಪಾಶ್ಚಾತ್ಯ ಡಾಕ್ಟರರು ಶೋಧಿಸಿ ಕಂಡುಹಿಡಿದ ಕ್ರಿಮಿಗಳು ಆಯು ರ್ವೇದದಲ್ಲಿ ಉಕ್ತವಾದ ವಿಷದಲ್ಲಿರುವಂಧವಾಗಿರಬಾರದೊ? ಹಾಗಿದ್ದರೆ ಕ್ರಿಮಿಗಳನ್ನು ನಾಶಪಡಿಸುವ ಪ್ರಯತ್ನಕ್ಕಿಂತ ಆ ಕ್ರಿಮಿಗಳಿಗೆ ಕಾರಣವಾದ ವಿಷದ ಪರಿಹಾರಕ್ಕೆ ಯತ್ನಿಸು ವದೇ ಉಚಿತವಲ್ಲ ವೋ? ಬೇರೆಬೇರ ಕ್ರಿಯೆಗಳಿಂದ ಉತ್ಪನ್ನವಾದ ಬೇರೆಬೇರೆ ಜಾತಿ ಎಷಮ ಜ್ವರಗಳು ಕ್ರಿ ನೀನಿನಿಂದಲೇ ಪರಿಹಾರವಾಗುತ್ತವೆಂಬದರಿಂದ ಆ ಕ್ರಿಮಿಗಳೆಲ್ಲಾ ಒಂದೇ ಜಾತಿ ವಿಷದಿಂದ ಉದ್ಭವವಾಗುವದಾಗಿರಬಹುದೆಂಬ ಅಭಿಪ್ರಾಯವು ಬಲಪಡುವದಿಲ್ಲವೋ? ಗೊಬ್ಬರದ ದೋಷಪಹಾರಕ್ಕೆ ಗೊಬ್ಬರದ ಹುಳಗಳ ನಾಶನಕ್ಕೆ ಯತ್ನಿಸುವದಕ್ಕಿಂತ ಗೊಬ್ಬರ ವನ್ನೆ ದೂರಹಾಕುವದು ಒಳ್ಳೇದಲ್ಲ ವೋ? ಪ್ಲೇಗರೋಗದಲ್ಲಿ ಕಾಣುವ ಕ್ರಿಎಯನ್ನು ಬೇರೊಂದು ಕ್ರಮದಲ್ಲಿ ಬೆಳಿಸಿದರೆ, ಅದು ರೂಪಾಂತರವನ್ನು ಹೊಂದುತ್ತದೆಂತ ಒಬ್ಬರು ಪಾಶ್ಚಾತ್ಯ ಶಾಸ್ತ್ರಜ್ಞರು ಕಂಡುಹಿಡಿದಿದ್ದಾರೆ ಎಂತ ವರ್ತಮಾನಪತ್ರಗಳು ಕಲವು ಕಾಲದ ಹಿಂದೆ ಪ್ರಕಟಿಸಿದ್ದು ನೆನಪು ಬರುತ್ತದೆ ಅದು ಹಾಗಿದ್ದರೂ ನಾನಾ ರೋಗಗಳಲ್ಲಿ ಕಾಣುವ ನಾನಾ ಕ್ರಿಮಿಗಳು ಆಯಾ ರೋಗಗಳ ಲಕ್ಷಣಗಳಲ್ಲದೆ, ಆ ರೋಗಗಳಿಗೆ ಹೇತುವಲ್ಲ ಎಂಬ ಮತವು ನಿರ್ಧಾರಣೀಯವಾಗಿ ಉಂಟು. ಸಾಧಾರಣವಾಗಿ, ವಿಷಮವಲ್ಲದ ಬಿಡದೆ ಬರುವ ಜ್ವರವು ಪ್ರಧನ ಆರು ದಿನಗಳ ಪರಿಯಂತ ತರುಣ, ಅನಂತರ 12ನೇ ದಿನದ ವರೆಗೆ ಮಧ್ಯ, ಆ ಮೇಲೆ ಜೀರ್ಣ ಎಂತ ಆಯುರ್ವೇದದಲ್ಲಿ ವಿಭಾಗಮಾಡಲ್ಪಟ್ಟು, ತರುಣಜ್ವರದಲ್ಲಿ ಸ್ನಾನಗಳು, ಲೇಪನಗಳು, ಸ್ನೇಹಗಳು, ಶೋಧನಗಳು, ಹಗಲು ನಿದ್ರೆ, ವ್ಯಾಯ, ವ್ಯಾಯಾಮ, ತಣ್ಣೀರು, ಸಿಟ್ಟು, ಬೀಸುವ ಗಾಳಿ, ಭೋಜನ ಸಹ ವರ್ಜ್ಯವಾಗಿ ಹೇಳಲ್ಪಟ್ಟಿವೆ. ಟಾಯ್ಯೋಯ್ಲಿನಲ್ಲಿ ದ್ರವ ಪದಾರ್ಥವನ್ನೇ ಆಹಾರವಾಗಿ ಕೊಡಬೇಕೆಂದು ಆಯುರ್ವೇದಕ್ಕೆ ಸಮ್ಮತವಾದರೂ, ಹಾಲು ಸ್ನೇಹಯುಕ್ತವಾದ್ದರಿಂದ ತರುಣಜ್ವರದಲ್ಲಿ ಪ್ರಶಸ್ತವಲ್ಲ ಜ್ವರದ ವೇಗವನ್ನು ತಡೆಯಲಿಕ್ಕೆ ಪ್ರಯತ್ನಿಸಬಾರದಂತ ಡಾಕ್ಟರ ರೂಸಿಟರ ದೊರೆಗಳು ಹೇಳಿದ ಮತವು ಆಯುರ್ವೇದಸಮ್ಮತ ವಾದದ್ದು ಹಾಲು ಮತ್ತು ಔಷಧಸಿದ್ದವಾದ ತುಪ್ಪ ಜೀರ್ಣ (ಹಳೆ) ಜ್ವರದಲ್ಲಿ ಬಹಳ