ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

) LXXxii. ಉಪೋದ್ಘಾತ

ಮಾತ್ರದಿಂದ ಆ ಕೈಯ ನಾಡಿಯ ಗತಿಗಳೆಲ್ಲ ಭೇದವಾಗುತ್ತವೆಂಬದು ಕೇವಲ ಅಸಂಗತ, ಇವೇ ಮೊದಲಾದ ಅನೇಕ ಕಾರಣಗಳಿಂದ ಈ ನೂತನ ವ್ಯಾಖ್ಯಾನವು ಅನಾಧೇಯ ವಾದ್ದೆಂತ ತೋರಿಸಬಹುದು ಈಗ, ಪ್ರತ್ಯಕ್ಷ ಫಲವನ್ನು ಒಪ್ಪಿಕೊಳ್ಳುವದಕ್ಕೆ ಕಾರಣವನ್ನು ಗೊತ್ತು ಮಾಡಿಕೊಳ್ಳುವದು ಅವಶ್ಯಕವಲ್ಲ. ಕಾರಣವನ್ನು ಅರಿಯದೆ ನಾವು ಒಪ್ಪಿಕೊಳ್ಳುವ ಪ್ರತ್ಯಕ್ಷವಾದ ಭಾವಗಳು ಅಸಂಖ್ಯೇಯವಾಗಿವೆ . ಜ್ಞಾನಾಸಂಪೂರ್ಣತೆಯು ನರಜನ್ಮದ ಲಕ್ಷಣಗಳಲ್ಲಿ ಒಂದು. ಇದಲ್ಲದಿದ್ದರೆ, ದೇವರೆಂಬ ಭಾವಕ್ಕೆ ಎಡೆಯೇ ಇರುತ್ತಿದ್ದಿಲ್ಲ. ಪ್ರತ್ಯಕ್ಷ ವಾಗಿ ಆಯುರ್ವೇದ ನಿರ್ದಿಷ್ಟವಾದ ಮೂರು ಸ್ಥಾನಗಳ ನಾಡೀಗತಿಗಳಲ್ಲಿ ಭೇದ ಉಂಟೋ, ಇಲ್ಲವೋ, ಎಂಬುದನ್ನು ನಿಃಸಂಶಯವಾಗಿ ಗೊತ್ತು ಮಾಡಲಿಕ್ಕೆ ಪಾಶ್ಚಾತ್ಯಕ್ರಮದಲ್ಲಿ ಈಗ ಬಹಳ ಸುಲಭವಾದ ಯುಕ್ತಿ ಉಂಟು. ನಾಡಿಯು ತನ್ನ ಗತಿಯನ್ನು ಕಾಗದದ ಮೇಲೆ ಗೀಚಿ ತೋರಿಸುವ ಹಾಗಿನ ಸ್ಫಗ್ಮೋಗ್ರಾಫ್(<yhygmogaph) ಎಂಬ ಯಂತ್ರವನ್ನು ನಿರ್ಮಾಣಮಾಡಿರುತ್ತಾರೆ. ನಾಡಿಯು ಸ್ಪಷ್ಟವಾಗಿ ಕಾಣುವ ಸ್ಥಾನದಲ್ಲಿ ಆ ಯಂತ್ರವನ್ನು ಇರಿಸಿ, ಅದು ಗೀಚಿ ತೋರಿಸುವ ನಾಡಿಯ ನಾನಾ ಪ್ರಕಾರವಾದ ಗತಿಭೇದಗಳನ್ನು ಪರೀಕ್ಷಿಸಿ, ವಿಚಾರಮಾಡಿದ್ದಾರೆ ಅದೇ ರೀತಿಯಾಗಿ ಆ ಯಂತ್ರವನ್ನು ಹೆಬ್ಬೆಟ್ಟಿನ ಮೂಲದ ಕೆಳ ಗಿನ ಮೂರು ನಾಡೀಸ್ಥಾನಗಳಲ್ಲಿ ಇಟ್ಟು, ಅಬ್ಬವಾಗುವ ಲಿಪಿಗಳನ್ನು ಹೋಲಿಸಿ ನೋಡಿದರೆ, ಆಯುರ್ವೇದೀಯ ನಾಡೀಶಾಸ್ತ್ರದ ತಧ್ಯವು ಯುಧಾವತಾಗಿ. 

31, ಹಾರೀತಸಂಹಿತಾ ದತ್ತಾತ್ರೇಯಸಂಹಿತಾ ಎಂಬ ಪೂರ್ವಗ್ರಂಧಗಳಲ್ಲಿ ನಾಡೀಪರೀಕ್ಷೆವಿಧಾನಗಳು ಸವಿಸ್ತಾರವಾಗಿ ಹೇಳಲ್ಪಟ್ಟಿವೆ ಎಂತ ಮೈಸೂರು ಹೊಸ ಪಂಡಿತ ಭೀಮರಾಯರ ವೈದ್ಯಸಂಗ್ರಹ ಎಂಬ ಪುಸ್ತಕವು ಹೇಳುತ್ತದೆ. ಆದರೆ ಆ ಗ್ರಂಧಗಳು ಬಹಳ ಪುರಾತನದವುಗಳಾಗಿರಲಿಕ್ಕಿಲ್ಲ ಎಂತ ಕಾಣುತ್ತದೆ. ಯಾಕೆಂದರೆ, ಚರಕ-ಸುಶ್ರುತಾದಿ ಪ್ರಸಿದ್ದವಾದ ಪುರಾತನ ಸಂಹಿತೆಗಳಲ್ಲಿ ನಾಡೀಪರೀಕ್ಷೆಯ ಪ್ರಸ್ತಾಪವೇ ಕಾಣುವದಿಲ್ಲ ವಾಗ್ಬಟನ ಎಷ್ಟೋ ಶತಮಾನಗಳನಂತರ ಉಂಟಾದ ವಂಗಸೇನನ ಗ್ರಂಧದಲ್ಲಿ ಸಹ ಅದರ ನಿರ್ದೇಶವಿಲ್ಲ. ಶಾ ಬ್ಗ ಶಾಬ್ಗರ್ಧರಸಂಹಿತೆಯಲ್ಲಿ ನಾಡೀಪರೀಕ್ಷೆಯು ಸೂಕ್ಷ್ಮವಾಗಿ ಹೇಳಲ್ಪಟ್ಟಿದೆ. ಆ ಗ್ರಂಧವು 1350-1400ನೆ ಇಸವಿಗಳ ಮಧ್ಯಕಾಲದಲ್ಲಿ ಉಂಟಾದ್ದೆಂತ ಪ್ರ. ಚ. ರಾಯ ರವರ ಮತವಾಗಿರುತ್ತದೆ; ಹಾಗೂ, 600 ವರ್ಷಗಳ ಹಿಂದೆಯೇ ಅದು ರಚಿತವಾದ್ದೆಂಬದ ರಲ್ಲಿ ಸಂದೇಹವಿಲ್ಲ. ಭಾವಪ್ರಕಾಶದಲ್ಲಿಯೂ ನಾಡೀಪರೀಕ್ಷೆ ವಿಧಾನ ಉಂಟು, ಆ ಗ್ರಂಧವು ಸುಮಾರು 1550ನೆ ಇಸವಿಯಲ್ಲಿ ಹುಟ್ಟಿದ್ದೆಂತ ಅದೇ ರಾಯರವರು ಹೇಳುತ್ತಾರೆ ಶಾಬ್ಗರ್ಧರನ ಗ್ರಂಧದಲ್ಲಿ ಕಾರಾಂಗುಷ್ಠ ಮೂಲದಲ್ಲಿರುವ ಧಮನಿಯೂ ವಾತಾದಿದೋಷ ಗಳಲ್ಲಿ ಮತ್ತು ಕೆಲವು ರೋಗಗಳಲ್ಲಿ ಹಾಗೆ ನಡೆಯುತ್ತದೆಂಬದು ಸಾಮಾನ್ಯವಾಗಿ ಹೇಳಲ್ಪಟ್ಟಿದೆ; ಒಟ್ಟು 8 1/2 ಶ್ಲೋಕಗಳು ಮಾತ್ರ ಈ ವಿಷಯವನ್ನು ಹೇಳುತ್ತವೆ. ಭಾವಪ್ರಕಾಶದಲ್ಲಿ ನಾಡೀಪರೀಕ್ಷೆ ಕುರಿತು ಇರುವ 12 ಶ್ಲೋಕಗಳೊಳಗೆ ಅಂಗುಷ್ಠ ಮೂಲದಲ್ಲಿರುವ ನಾಡಿಯನ್ನು ಮೂರು ಬೆರಳುಗಳಿಂದ ಮುಟ್ಟಿ, ಪರೀಕ್ಷಿಸತಕ್ಕದ್ದಾಗಿಯೂ, ವಾತಾಧಿಕ್ಯದಲ್ಲಿ ತರ್ಜನಿಯ ತಲಕ್ಕೂ, ಪಿತ್ತಾಧಿಕ್ಯದಲ್ಲಿ ಮಧ್ಯಮ ಬೆರಳಿನ ತಲಕ್ಕೂ, ಕಫಾಧಿಕ್ಯದಲ್ಲಿ ಮೂರನೇ ಬೆರಳಿನ ತಲಕ್ಕೂ ನಾಡಿಯು ಬಲವಾಗಿ ಕಾಣುವದೆಂತಲೂ ನಿರ್ದೇಶಿಸುವ ವಚನ ಗಳಿವೆ. ಈ ಗ್ರಂಥದಲ್ಲಿ ಶಾಬ್ಗರ್ಧರನ ಬಹಳ ಶ್ಲೋಕಗಳು ಅಲ್ಪ ಭೇದದೊಡನೆ ಅಲ್ಲಲ್ಲಿ