ಈ ಪುಟವನ್ನು ಪರಿಶೀಲಿಸಲಾಗಿದೆ
IXXXVI ಉಪೋದ್ಘಾತ
ಯೂ ದೋಷಗಳ ಬಲಾಬಲಭೇದಗಳನ್ನೂ, ಔಷಧಗಳ ರಸಾದಿ ಪ್ರಭಾವಾಂತ ಸರ್ವಗುಣ ಗಳನ್ನೂ, ಅವುಗಳ ಬಲಾಬಲಭೇದಗಳನ್ನೂ ಪರ್ಯಾಲೋಚಿಸಿ, ಆಯಾ ಸಂಗತಿಗಳಿಗೆ ಯುಕ್ತವಾದ ನವೀನ ಯೋಗಗಳನ್ನು ಕಲ್ಪಿಸಿ, ಅಧವಾ ಪುರಾತನ ಯೋಗಗಳಲ್ಲಿ ಅಗತ್ಯವಾದ ಭೇದಗಳನ್ನು ಮಾಡಿ, ಚಿಕಿತ್ಸೆ ನಡಿಸುವಷ್ಟು ಪಾಂಡಿತ್ಯವುಳ್ಳವರು ಯಾವಾಗಲಾದರೂ ಕತಿಚಿ ತ್ತಾಗಿಯೇ ಇರುವರಷ್ಟೆ ಮಿಕ್ಕವರೆಲ್ಲಾ ಚರಕಾಚಾರ್ಯರು ಹೇಳಿರುವಂತೆ ಪುರಾತನವಾದ ಪ್ರಸಿದ್ದ ಯೋಗಗಳನ್ನು ಉಪಯೋಗಿಸುತ್ತಿರುವದೇ ಲೇಸು ಆದರೆ, ಅಂಧವರು ತಾವು ನಡಿ ಸುವ ಚಿಕಿತ್ಸೆಯ ನ್ಯೂನತೆಯನ್ನು ಸದಾ ನೆನಪಿನಲ್ಲಿಟ್ಟುಕೊಂಡು, ಕ್ರಮೇಣವಾದರೂ ನಿರ್ದೋ ಷವಾದ ದಾರಿಯನ್ನು ಸೇರಲಿಕ್ಕ ಯತ್ನಿಸತಕ್ಕದ್ದು. ನಮ್ಮ ಪೂರ್ವಿಕರು ಯೋಗಗಳನ್ನು ಮಾಡಿ ಪ್ರಕಟಿಸುವಾಗ್ಗೆ, ಅಂಧಾ ಯೋಗಗಳು ರೋಗದ ಅಲ್ಲ ವಿಶೇಷಗಳಿಂದ ನಿಷ್ಟ್ರಯೋಜನ ವಾಗದಂತೆ ಜಾಗ್ರತೆ ತೆಗೆದುಕೊಂಡಿದ್ದರಾದ್ದರಿಂದ, ಈಗಿನ ಪಾಂಡಿತ್ಯವು ಹೀನಸ್ಥಿತಿಯದಾದರೂ ಅವುಗಳಿಂದ ರೋಗಿಗಳು ಪ್ರಯೋಜನ ಹೊಂದುತ್ತಾ ಇದ್ದು, ಆಯುರ್ವೇದದ ಕೀರ್ತಿಯು ಅಸ್ತ ವಾಗದೆ ಉಳಿದದೆ ಇಷ್ಟರಿಂದಲೇ ನಾವು ಸಂತುಷ್ಟರಾಗಿರದೆ, ಚರಕಾದಿಗಳು ತೋರಿಸಿ ರುವ ವಿಶಾಲವಾದ ಮಾರ್ಗಗಳನ್ನು ಹಿಡಿದು, ಮುಂದೆ ಹೋಗಲಿಕ್ಕೆ ಯತ್ನಿಸುವದೇ ನಮ್ಮೆಲ್ಲ ವರ ಕರ್ತವ್ಯ. ಪಾಶ್ಚಾತ್ಯ ವೈದ್ಯದಲ್ಲಿಯೂ ಅನೇಕ ದೋಷಗಳು ಇದ್ದಾಗ್ಯೂ, ಅದರಿಂದ ನಮ್ಮ ಜನರು ಮಹತ್ತಾದ ಪ್ರಯೋಜನವನ್ನು ಪಡೆಯುತ್ತಿದ್ದಾರೆಂಬದರಲ್ಲಿ ಸಂದೇಹವಿಲ್ಲ ಕೈಕಾಲು ಮುರಕೊಂಡವರು, ಗಾಯಪಟ್ಟವರು, ವ್ರಣದವರು, ಅಶ್ಮರೀವ್ಯಾಧಿಯವರು, ಮೂಢಗರ್ಭಗಳು ಮುಂತಾದ ಬಹು ವಿಧವಾದ ರೋಗವರ್ಗದವರಿಗೆ ಡಾಕ್ಟರರಿಂದ ಸಿಕ್ಕುವ ಪ್ರಯೋಜನವನ್ನು ಎಷ್ಟು ಹೊಗಳಿದರೂ ಅತಿಶಯವಾಗದು. ಅವರ ಉಷ್ಣಪ್ರದರ್ಶಕ ಕಡ್ಡಿ, ಮೂತ್ರಭಾರಪ್ರದರ್ಶಕ ಕಡ್ಡಿ, ಮೂತ್ರದಲ್ಲಿರುವ ಮಧು ಮುಂತಾದ ದೋಷಗಳನ್ನು ಸುಲಭ ವಾಗಿ ಪರೀಕ್ಷಿಸುವ ಕ್ರಮ, ಹೃದಯಾದಿಗಳ ಶಬ್ದ ಶೋಧನನಳಿಗೆ, ಇವೇ ಮುಂತಾದ ಯಂತ್ರೋ ಪಕರಣಗಳು ಆಯುರ್ವೇದೀಯ ಪಂಡಿತರಿಗೂ ಪ್ರಯೋಜನಕರವಾಗಿರುತ್ತವೆ ಶಸ್ತ್ರ ಪ್ರಯೋಗ ಮಾಡುವದಕ್ಕೆ ಅನುಕೂಲವಾಗಿ ರೋಗಿಯ ಬೋಧತಪ್ಪಿಸುವ ಕ್ರಮ ಮತ್ತು ಔಷಧಗಳನ್ನು ಚರ್ಮದೊಳಗೆ, ಮಾಂಸದೊಳಗೆ, ಅಧವಾ ರಕ್ತನಾಳದೊಳಗೆ, ಯಂತ್ರದಿಂದ ಹೊಗಿಸುವ ಕ್ರಮ ಬಹಳ ಉಪಯೋಗವುಳ್ಳವುಗಳಾಗಿರುತ್ತವೆ ರೋಗಿಗಳ ಮೃತಶರೀರಗಳ ಶೋಧನದಿಂದ ಅವರು ಪ್ರಕಟಿಸುವ ಅನುಭವಗಳು ಆಯುರ್ವೇದೀಯ ಚಿಕಿತ್ಸೆಯ ತತ್ವಗಳನ್ನು ತಿಳಿಯುವದಕ್ಕೆ ಉಪಯುಕ್ತವಾಗುತ್ತವೆ ಒಟ್ಟಾರೆ, ಪಾಶ್ಚಾತ್ಯ ಕ್ರಮದವರು ಆಯುರ್ವೇದೀ ಯ ತ್ರಿದೋಷ ನ್ಯಾಯವನ್ನೂ, ಉಷ್ಣ, ಶೀತ ಎಂಬ ಭೇದವನ್ನೂ ಒಪ್ಪಿಕೊಂಡು ಅನುಸರಿಸಿದ ಪಕ್ಷದಲ್ಲಿ, ಅವರ ಕ್ರಮವು ಉತ್ಕೃಷ್ಟವಾಗುವದಲ್ಲದೆ, ಎರಡು ಕ್ರಮಗಳೂ ಒಂದಕ್ಕೊಂದು ಸಹಾಯಕವಾಗಿ ನಿಂತು, ಬಹು ಶೀಘ್ರವಾಗಿ ಅಭಿವೃದ್ಧಿಯನ್ನು ಹೊಂದಿ, ಲೋಕಕ್ಕೆ ಅತ್ಯಂತ ಸುಖದಾಯಕವಾಗುವವು ಎಂಬದರಲ್ಲಿ ಸಂದೇಹವಿಲ್ಲ.