ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

xiv

ಬೇಕಾಗಿದೆ. ಅದಕ್ಕಾಗಿ ಕಥೆ ತೀವ್ರ ಮುಗಿಸಬೇಕಾಗಿದೆ. ಅದು ತೀವ್ರಮುಗಿದಷ್ಟು ತನ್ನಪೇಕ್ಷೆಯು ತೀವ್ರ ಕೈಗೂಡುವದು. ಅದಕ್ಕಾಗಿ ಅವನೇನು ಮಾಡುವನು ಗೊತ್ತೇ? “ಕಥೆ ಕಥೆ ಕಾರಣ, ಮುದಿಕೆ ಹೂರಣ ತಿಂದೆಯೋ ಚೆಲ್ಲಿದೆಯೋ” ಎಂದು ಕೇಳಿದಾಗ, ಚೆಲ್ಲಿದೆಯೆನ್ನುವುದನ್ನು ಬಿಟ್ಟು, ತಿಂದೆಯೆಂದು ಹೇಳಿಬಿಟ್ಟರೆ ಕಥೆ ಮೊಟಕಾಗಿ ನಿಲ್ಲುತ್ತದೆ. ಹಾಗಾದರೂ ಅದು ಹೇಳಿ ಕೊಳ್ಳಬಹುದಾದ ಕಥೆಯೇ ಸರಿಯಷ್ಟೇ?

ಅಡುಗೂಳಜ್ಜಿಯ ಕಥೆ ಬಹುತರವಾಗಿ-"ಹೀಗೊಬ್ಬ ರಾಜನಿದ್ದ ಅಥವಾ ಹೀಂಗ ಒಂದೂರಿತ್ತು” ಎಂದು ಆರಂಭವಾಗಿ ಕೊನೆಯಲ್ಲಿ, ಅವರು ಸುಖದಿಂದ ಬಹುಕಾಲ ಆಳಿದರೆಂದೋ ಬಾಳಿದರೆಂದೋ ಮುಗಿಯುವುದುಂಟು. ಕೇಳುವವನು-“ಅಲ್ಲಿಂದ ಅಥವಾ ಆಮೇಲೆ ಏನಾಯಿತಂತೆ” ಎಂಬ ಕುತೂಹಲ ತೋರಿದರೆ “ನಾನು ಕಥೆ ಹೇಳಿನಂತೆ, ನೀನು ಕಥೆ ಕೇಳಿದೆಯಂತ"" ಎಂದು ಮುಗಿಸಬಹುದು.

ಬಹಳ ಹೊತ್ತಿನವರೆಗೆ ಹೇಳಿ ಕೇಳಿದರೂ ಮುಗಿಯಲಾರದ ಕಥೆಯೂ ಉಂಟು. “ಹೀಂಗೊಬ್ಬ ರಾಜನಿದ್ದ. ರಾಜನಿಗೊಬ್ಬ ಪ್ರಧಾನಿಯಿದ್ವ ರಾಜ ಪ್ರಧಾನಿಯರು ಕುಳಿತಾಗ ರಾಜನಂದನು-“ಪ್ರಧಾನೀ ಪ್ರಧಾನೀ, ಒಂದು ಕಥೆಹೇಳು. ಹೊತ್ತೇ ಹೋಗಲೊಲ್ಲದು" ಎಂದಾಗ ಪ್ರಧಾನಿ ಅದಕ್ಕೊಪ್ಪಿ ಕಥೆ ಹೇಳಲು ತೊಡಗುವನು. “ಹೀಂಗೊಬ್ಬ ರಾಜನಿದ್ದ ರಾಜನಿಗೊಬ್ಬ ಪ್ರಧಾನಿಯಿದ್ದ. ರಾಜ ಪ್ರಧಾನಿಯರು ಕುಳಿತಾಗ ರಾಜನಂದನು-ಪ್ರಧಾನೀ, ಪ್ರಧಾನೀ, ಒಂದು ಕಥೆಹೇಳು. ಹೊತ್ತೇ ಹೋಗಲೊಲ್ಲದು" ಎಂದಾಗ ಪ್ರಧಾನಿ ಅದಕೊಪ್ಟಿ ಕಥೆ ಹೇಳಲು ತೊಡಗುವನು. “ಹೀಂಗ ಒಬ್ಬ ರಾಜನಿದ್ದ.. ಕೇಳುವವನಿಗೆ ಕಥೆಯ ಪುನರಾವರ್ತನೆಯ ಮರ್ಮ ತಿಳಿಯಲು ನಗತೊಡಗುವನು. ಹೇಳುವವನೂ...

ಮಾನವನ ತಂದೆಯೆನಿಸುವ ಮಗು ಮೊದಲಿಗೆ ಕೇಳಿದ್ದು ಅಡುಗೂಳಜ್ಜಿಯ ಕಥೆಯನ್ನೇ. ಆ ಬಳಿಕ ಅವನು ಐತಿಹಾಸಿಕ ಕಥೆಯನ್ನಾಗಲಿ ಅದಕ್ಕೂ ಹಿಂದಿನ ಪೌರಾಣಿಕ ಕಥೆಯನ್ನಾಗಲಿ ಅಪೇಕ್ಬಿಸಬಹುದು. ಇಲ್ಲದೆ ಭವಿಷ್ಯತ್ತಿನತ್ತ ಹೊರಳಿ ಕಲ್ಪನಾಮಯ ಲೋಕವನ್ನು ಪ್ರವೇಶಿಸಿ ಕಲ್ಪನಾವೈಭವವನ್ನು ಕಾಣಲು ತವಕಿಸಬಹುದು. ನಿಂತಲ್ಲಿಯೇ ನಿಂತುಕೊಂಡು ಇಂದು ಕಂಡುಬರುವ, ಕೇಳಿಬರುವ ಸಂಗತಿಗಳನ್ನು ಇದ್ದಕ್ಕಿದ್ದ ಹಾಗೆ ಸ್ವೀಕರಿಸಬಹುದು. ಮನುಷ್ಯನಾದವನ ಮೆದುಳು ಮೂರು ನಿಟ್ಟುಗಳಲ್ಲಿ ಕೆಲಸ ಮಾಡುವದೆಂಬುದನ್ನು ಎಲ್ಲರೂ ಬಲ್ಲರು. ಸ್ಮರಣ, ವಿಚಾರ, ಕಲ್ಪನೆ ಎಂಬ ಆ ಮೂರು ನಿಟ್ಟುಗಳಿಂದ ಭೂತ ವರ್ತಮಾನ ಭವಿಷ್ಯತ್ತುಗಳನು ಸ್ಮರಿಸಿ, ವಿಚಾರಿಸಿ, ಕಲ್ಪಿಸಿ ನೋಡಬಲ್ಲನು. ಪೌರಾಣಿಕ ಐತಿಹಾಸಿಕ ಕಥೆಗಳು ಒಂದು ದೃಷ್ಟಿಗೆ ಗೋಚರವಾದರೆ ರಮ್ಯ ಅಮಾನುಷ ಕಥೆಗಳು ಇನ್ನೊಂದು