ಸಾಧ್ಯವಿಲ್ಲ. ಆದರೆ ಇಬ್ಬರ ಹೆಸರನ್ನು ಮಾತ್ರ ಇಲ್ಲಿ ಕಾಣಿಸದೆ ಇರಲಾರನು. ಅವರು ಯಾರೆಂದರೆ-
(೧) ಶ್ರೀಮತಿ ಮಾಣಿಕಮ್ಮ ಅಡಿವೆಪ್ಪ ಭಂಡೆ ಮಾಳೆಗಾವ ತಾ. ಬೀದರ ಅವರು ಹೇಳಿಕೊಟ್ಟ ಕಥೆ ಹದಿನಾರು. ಅವು ಯಾವವೆನ್ನುವುದು ಈ ಸಂಕಲವನ್ನು ಓದಿದವರಿಗೆ ಸಹಜಗೊತ್ತಾಗುವುದು. ಆದರೂ ಆ ಕಥೆಗಳ ತಲೆಕಟ್ಟನ್ನು ಕಾಣಿಸುತ್ತೇನೆ- ನಾಲ್ವರು ಅಣ್ಣತಮ್ಮಂದಿರು, ಮೂರ್ಖದಂಪತಿಗಳು, ದೀಪಮಾತಾಡಿತು, ಕಳ್ಳನ ಮಗಳು, ಅಭೇದಾ, ನಾಲ್ಕು ಮಂದಿ ಹೆಣ್ಮಕ್ಕಳು, ಸಣ್ಣಪೋರ, ಮಿಡಿ ನಾಗೇಂದ್ರ, ಹೆಂಡತಿಗೆ ಹೊಡೆಯಬೇಕನ್ನುವ ರಾಜ, ಪಾಪಕ್ಕೆ ಪ್ರಾಯಶ್ಚಿತ್ತ, ಪಾಪಾಸಿನ ಗಂಡ, ಮೈನಾವತಿ, ನೀರಲಗಿಡ, ಕಥೆಯ ಕಥೆ, ಅಳಿಯ ದೇವರು, ಆಳು ಮಗ ಇಕ್ಯಾ.
(೨) ಶ್ರೀಮತಿ ಭವತಾರಿಣಿ ರೇವಪ್ಪ ಕೇಶಟ್ಟಿ ನನ್ನ ದ್ವಿಕೀಯ ಪುತ್ರಿ ಭವತಾರಿಣಿ ತೀರ ಚಿಕ್ಕಂದಿನಲ್ಲಿಂಯೂ ಕಥೆ ಕೇಳುವುದರಲ್ಲಿ ಹೇಳುವುದರಲ್ಲಿ ವಿಶೇಷ ಆಸಕ್ತಿವಹಿಸುತ್ತ ಬಂದವಳು. ಆದರೆ ಇತ್ತೀಚಿನ ಹತ್ತಿಪ್ಪತ್ತು ವರ್ಷಗಳ ಸಾಂಸಾರಿಕ ಜೀವನದಲ್ಲಿ ಅವೆಲ್ಲ ಕಥೆಗಳು ಮರೆತುಹೋಗಿದ್ದವು. ಆದರೆ ನಾನು ಈ ಸ೦ಕಲನಕ್ಕಾಗಿ ಅವುಗಳನ್ನು ನೆನಪು ಮಾಡಿಕೊಳ್ಳುವಂತೆ ದುಂಬಾಲು ಬಿದ್ದುದರಿಂದ ಆಕೆ ಚಿತ್ತದ ಹೊತ್ತಿಗೆಯ ಹಳೆಯ ಪುಟಗಳನ್ನು ತಿರುಹಿ ಹಲವು ಕಥೆಗಳನ್ನು ನೆನಪಿಗೆ ತಂದುಕೊಂಡು ನನಗೆ ಹೇಳಿದಳು. ನಾನವುಗಳನ್ನು ಆಕೆಯ ಸರಣಿಯಲ್ಲಿಯೇ ಬರೆದು ತೆಗೆದೆನು. ಆಕೆ ಹೇಳಿಕೊಟ್ಟ ಕಥೆಗಳು-ಕೊಂಡು ತಂದ ಮಾತು, ಬಟ್ಟಲ್ಯಾತಕ್ಕ ಕೆನಿತಿನ್ಲಕ್ಕು ಅಳಿಯನ ಅರ್ಹತೆ, ಒಬ್ಬರಿಗಿಂತ ಒಬ್ಬರು ಮಿಗಿಲು, ಪಾದರಕ್ಷೆಯ ಪುಣ್ಯ, ಒಂದು ಹಾಡು ಒಂದು ಕಥೆ, ಯುಕ್ತಿಗೊಂಡು ಪ್ರತಿಯುಕ್ತಿ, ಮಾಡಿದ್ದೊಂದು ಆಗಿದ್ದೊಂದು, ಜಾಣಸೊಸೆ, ತಂಗಿಗೊಬ್ಬ ಅಕ್ಕ, ಅತ್ತೆಯಗೊಂಬೆ, ಪಿಸುಣನಿಗೆ ಉಪಕಾರ, ಲೆಕ್ಕಾಚಾರದ ಅತ್ತೆ, ಸತ್ತೇನು ಗುಬ್ಬಿ, ದೇವರು ಕೊಟ್ಟರೇನು ಕಡಿಮೆ, ಶಿವರಾತ್ರಿಯ ಪಾರಣೆ, ಹಗಮಲ್ಲಿ ದಿಗಮಲ್ಲಿ.
“ಮನುಷ್ಯನನ್ನು ತನ್ನಂತೆ ಮಾಡಬೇಕೆಂದು ದೇವನು ಯೋಚಿಸಿದನು. ಆದರೆ ಮನುಷ್ಯನು ದೇವನನ್ನೇ ತನ್ನಂತೆ ಮಾಡಿಕೊಂಡನು” ಎಂದು ಮಹಾತ್ಮ ಗಾ೦ಧೀಜಿ ಹೇಳುತ್ತಾರೆ. ಆ ಮಾತು ಜನಪದ ಕಥೆಗಳಲ್ಲಿ ಸ್ಪಷ್ಟವಾಗಿ ಕಂಡು ಬರುತ್ತದೆ. ಶಿವನಿಗಿರುವ ಇಬ್ಬರು ಹೆ೦ಡಿರಲ್ಲಿ ಸವತಿ ಮಾತ್ಸರ್ಯವು ಉಲ್ಬಣಗೊಂಡು ಕದನಗಳಾಗುತ್ತವೆ. “ಇಬ್ಬರು ಹೆಂಡಿರ ಕಾಟ್‌ಗಾಗಿ ಮಗ್ಗದ ಕುಣಿಯಾಗ ಡೊಗ್ಗಿದೆನಪ್ಪೊ ಸಾಯತೇನ್ರೋ ಎಪ್ಪಾ ಸಾಯತೇನ್ರೋ" ಎಂದು ಶಿವನು ಹಲುಬಿದಂತಿದೆ. “ಎನ್ನ ಮೇಲಾಡಿ ಶ್ರೀಗಂಗೀನ ತಂದೀ। ತಪ್ಪು ಮತ್ತೇನು ಕಂಡೀ” ಎಂದು ಗೌರಿಯ ಬಾಯಿಂದ ಕೇಳಿಸಿದ್ದಿದೆ. ನಮ್ಮ ನಿಮ್ಮ ಹೆಂಡಿರಂತೆ ಶಿವನ ಹೆಂಡತಿಯೂ ಕೆಲವೊಂದು ದಿನ ತವರ್ಮನೆಗೆ ಹೋಗುತ್ತಾಳೆ. ತವರುಮನೆಯವರಿತ್ತ ಕೊಡುಗೆಯನ್ನು ಬಣ್ಣಿಸುತ್ತ