ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಜಾಣಸೊಸೆ

ತಂದೆ ಇದ್ದೊಬ್ಬ ಮಗನಿಗೆ ನೆರೆಯೂರಿನ ಒಂದು ಕನ್ನೆಯನ್ನು ತಂದು ಮದುವೆ ಮಾಡಿದ್ದನು. ಆದರೂ ಅವನು ನಿಶ್ಚಿಂತನಾಗಲಿಲ್ಲ. ಸೊಸೆಯು ತನ್ನ ಪರೀಕ್ಷಿಸಿ ನೋಡಬೇಕೆಂದು ತವಕಿಸುತ್ತಿದ್ದನು.

ಒಂದು ದಿನ ತಂದೆ ಮಗನನ್ನು ಕರೆದು ಹೇಳಿದನು - “ಈ ಹೊತ್ತು ಸಂಜೆಯ ಊಟವನ್ನು ಉಣ್ಣದೆ ಮಲಗಿಕೋ, ಬೆಳಗಾಗುತ್ತಲೆ ಉಣಬಡಿಸೆಂದು ನಿನ್ನ ಹೆಂಡತಿಗೆ ಹೇಳು.”

ಮಗನು ತಂದೆಯ ಸೂಚನೆಯಂತೆ ಸಂಜೆಯ ಊಟ ಬಿಟ್ಟುಕೊಟ್ಟನು. ರಾತ್ರಿ ಕಳೆದು ಬೆಳಗಾಗುತ್ತಲೆ “ಊಟಕ್ಕೆ ಕೊಡು” ಎಂದು ತನ್ನ ಹೆಂಡತಿಗೆ ಕೇಳಲು-“ಇಷ್ಟು ತೀವ್ರ ಊಟಕ್ಕೆ ಕೇಳಿದರೆ ನಾನೇನು ಕೊಡಲಿ ? ಹೊತ್ತೇರುವವರೆಗೆ ತಡೆಯಿರಿ” - ಎಂದಳಾಕೆ.

ತನ್ನ ಮಗನನ್ನು ನೋಡಿಕೊಳ್ಳುವ ಸೊಸೆ ಅಲ್ಲ ಈಕೆ - ಎಂದು ಬಗೆದು ಆಕೆಯನ್ನು ತವರುಮನೆಗೆ ಕಳಿಸುವ ವ್ಯವಸ್ಥೆ ಮಾಡಿದನು. ಮನೆಯಲ್ಲಿ ತಂದೆ ಮಗ ಇಬ್ಬರೇ ಉಳಿದರು.

“ಈ ಎಳ್ಳು ಚೀಲವನ್ನು ನೆರೆಹಳ್ಳಿಯ ಸಂತೆಗೊಯ್ದು ಮಾರಿಕೊಂಡು ಬರಬೇಕು” ಎಂದು ತಂದೆ ಮಗನಿಗೆ ಹೇಳಿದನು. “ಯಾವ ಧಾರಣೆಯಿಂದ ಮಾರಬೇಕು” ಎಂದು ಮಗನು ಕೇಳಲು, “ಯಾವ ಮಾಷಿನಿಂದ ಎಳ್ಳು ಅಳೆದು ಕೊಳ್ಳುವರೋ ಅದೇ ಮಾಷಿನಿಂದ ಎಳ್ಳೆಣ್ಣೆ ಪ್ರತಿಯಾಗಿ ತರಬೇಕು” ಎಂದು ತಂದೆ ಹೇಳಿದನು.

ಬಂಡಿಯಿಂದ ಚೀಲಗಳನ್ನಿಳಿಸಿ ಮಗನು ಸಂತೆಯಲ್ಲಿ ಮಾರಲು ಕುಳಿತನು. ಆದರೆ ಆತನ ಧಾರಣಿ ಮಾತ್ರ ಯಾರಿಗೂ ಸರಿಬರಲಿಲ್ಲ. ಎಳ್ಳುಮಾತ್ರ ನೋಡಿದರೆ ಬಿಡಬಾರದು ಎನ್ನುವಂತಿದ್ದವು. ಸಂತೆಯೂರಿನ ಶ್ರೀಮಂತನೊಬ್ಬನು ಆ ಎಳ್ಳು ಬಿಡಬಾರದೆಂದು ಬಗೆದನಾದರೂ ಅದರ ಧಾರಣಿ ತುಂಬಾ ಹಾನಿಕರವೆಂದು ಯೋಚಿಸಿ, ಮನೆಗೆ ಹೋಗಿ ತನ್ನ ಮಗಳಿಗೆ ಎಳ್ಳಿನ ವ್ಯವಹಾರದ ವಿಷಯವನ್ನು