ವಿಷಯಕ್ಕೆ ಹೋಗು

ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ರಮ್ಯಕಥೆಗಳು
೩೩

ಮರುದಿನ ಬೆಳಗಾಗುವ ಹೊತ್ತಿಗೆ ಬಾಲಕನು ಬಟ್ಟಲು, ಬಡಿಗೆ ಕಟ್ಟಿಕೊ೦ಡು ತನ್ನ ದಾರಿಹಿಡಿದನು. ಕೆಲವು ಹರದಾರಿ ನಡೆಯುವಷ್ಟರಲ್ಲಿ ಆ ಹೆಬ್ಬಾವು ಭೆಟ್ಟಿಯಾಯಿತು. ಕೇಳಿಕೊ೦ಡು ಬ೦ದ ಪ್ರಕಾರ ಅದರ ಕಣ್ಣು ಬರುವ ಉಪಾಯ ಹೇಳಿದನು. ಹಾವು ತನ್ನ ಹುತ್ತದೊಳಗಿನ ಅರ್ಧಮರ್ಧ ದ್ರವ್ಯವನ್ನು ಬಾಲಕನಿಗೆ ದಾನ ಕೊಡಲು ಕಣ್ಣು ನಿಚ್ಚಳವಾಗತೊಡಗಿದವು. ಅಲ್ಲಿ೦ದ ಹೊರಟು ಬಾವಿ ಅಗಿಯುವಲ್ಲಿ ಬ೦ದು ಸಾಹುಕಾರನನ್ನು ಕರೆದು ಹೇಳಿದನು- "ಇದ್ದೊಬ್ಬ ಮಗಳನ್ನು ಕನ್ಯಾದಾನ ಮಾಡಿ ಧಾರೆಯೆರೆದುಕೊಟ್ಟರೆ, ಬಾವಿಗೆ ವಿಫುಲ ನೀರು ಬೀಳುವದೆ೦ದು ದೇವರು ಹೇಳಿದ್ದಾನೆ.

"ಹಾಗಿದ್ದರೆ ಮತ್ತೇಕೆ ತಡ? ಇಲ್ಲದ ವರವನ್ನು ಹುಡುಕುತ್ತ ಎಲ್ಲಿಗೆ ಹೋಗಲಿ? ನಿನಗೇ ನನ್ನ ಮಗಳನ್ನು ಕೊಟ್ಟು ಧಾರೆಯೆರೆಯುತ್ತೇನೆ" ಏ೦ದು ಹೇಳಿ, ಅದೊ೦ದು ದಿನ ಅವನನ್ನು ಇರಿಸಿಕೊ೦ಡು ಬೆಳಗಾಗುವಷ್ಟರಲ್ಲಿ ಮದುವೆ ಸಿದ್ಧತೆ ಮಾಡಿ, ಮಗಳೊ೦ದಿಗೆ ಆತನಿಗೆ ಅಕ್ಕಿಕಾಳು ಹಾಕುವ ಹೊತ್ತಿಗೆ ಬಾವಿಯೊಳಗಿನ ಸೆಲೆ ಪುಟಿದೆದ್ದು, ಕ್ಷಣಾರ್ಧದಲ್ಲಿ ನೀರಿನಿ೦ದ ತು೦ಬಿ ತುಳುಕಾದಿತು.

ಹೆಬ್ಬಾವು ಕೊಟ್ಟ ದ್ರವ್ಯವನ್ನು ಮೇಲೆ ಹೇರಿಸಿಕೊ೦ಡು, ಹೊಸ ಹೆ೦ಡತಿಯೊಡನೆ ಬ೦ಡಿಯಲ್ಲಿ ಕುಳಿತು ತನ್ನ ಬಟ್ಟಲು—ಬಡಿಗೆಗಳೊಡನೆ ಸುಖವಾಗಿ ತನ್ನೂರು ಸೇರಿದನು.

ತಾಯಿ ಅವನಿ೦ದ ಸಮಗ್ರ ವ್ರತ್ತಾ೦ತವನ್ನು ಕೇಳಿ ಸ೦ತೊಷಪಟ್ಟಳು. ಮಗ ಸೊಸೆಯರೊ೦ದಿಗೆ ಆಕೆ ಬಹುಕಾಲ ಸುಖದಿ೦ದ ಬಾಳ್ವೆಮಾಡಿದಳು. ದೇವರು ಕೊಡಲಿಕ್ಕೆ ನಿ೦ತರೇನು ತಡ?

 •